newsics.com
ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ ನಾಪತ್ತೆಯಾಗಿದ್ದು, ಅವರ ಕಾರು ಮಂಗಳೂರಿನ ಕುಳೂರು ಸೇತುವೆ ಬಳಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.
ಇದೀಗ ಮುಮ್ತಾಜ್ ಅಲಿ ಅವರ ಶವ ಮಂಗಳೂರಿನ ಕೂಳೂರಿನ ಸೇತುವೆ ಬಳಿ ಪತ್ತೆಯಾಗಿದೆ.
ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ (52) ಏಕಾಏಕಿ ನಾಪತ್ತೆಯಾಗಿದ್ದರು. ಮುಮ್ತಾಜ್ ಅವರೇ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ನಿನ್ನೆ ಅವರ BMW ಕಾರು ಕೂಳೂರು ಸೇತುವೆ ಮೇಲೆ ಜಖಂ ಆಗಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಶವಕ್ಕಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು.
ಮುಮ್ತಾಜ್ ಅಲಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರಾ. ಅಥವಾ ಅಪಘಾತ ನಡೆದಿದ್ಯಾ ಅಥವಾ ಪೂರ್ವನಿಯೋಜಿತ ಕೊಲೆಯಾ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಏರ್ ಶೋ ವೇಳೆ ನೂಕುನುಗ್ಗಲು, ನಾಲ್ವರ ಸಾವು, ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಸೆರಗು ಜಾರಿದ್ರೂ ಡೋಂಟ್ ಕೇರ್ ಎಂದ ಪುಷ್ಪ ನಟಿ; ಹುಡುಗರ ನಿದ್ದೆಗೆಡಿಸಿದ ಅನಸೂಯಾ