Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ವರ್ಷಾಂತ್ಯಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ: ಏನೇನಿದೆ ಈ ರೈಲಲ್ಲಿ?
ದೇಶಪ್ರಮುಖ

ವರ್ಷಾಂತ್ಯಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ: ಏನೇನಿದೆ ಈ ರೈಲಲ್ಲಿ?

Share
2 Min Read
SHARE

newsics.com

ಬೆಂಗಳೂರು : ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ವೇದಿಕೆ ಸಿದ್ದವಾಗಿದ್ದು, ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ವರ್ಷಾಂತ್ಯಕ್ಕೆ ಮೊದಲ ರೈಲು ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಆಧುನಿಕ ಸೌಲಭ್ಯಗಳೊಂದಿಗೆ ಪರಿಸರ ಸ್ನೇಹಿಯಾಗಿ ನಿರ್ಮಾಣಗೊಂಡಿರುವ ರೈಲು ದೇಶದ ಪ್ರಯಾಣಿಕ‌ ಸಾರಿಗೆ ಸೇವೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.

ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಇಂದು ಚಾಲನೆ ನೀಡಲಾಯಿತು. ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸ್ಲೀಪರ್ ಕೋಚ್ ರೈಲಿನ ಮೂಲ ಮಾದರಿಯ ಮೊದಲ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನಾವರಣಗೊಳಿಸಿದ್ದು, ಪ್ರಾಯೋಗಿಕ ಸಂಚಾರಕ್ಕೂ ಚಾಲನೆ ನೀಡಿದರು. ಈ ವೇಳೆ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಸಾಥ್ ನೀಡಿದರು.
ಹವಾ ನಿಯಂತ್ರಿತವಾಗಿರುವ ಈ ರೈಲು ರಾತ್ರಿ ವೇಳೆ ಸಂಚಾರಕ್ಕೆ ಉಪಯುಕ್ತವಾಗಿದ್ದು, ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಇಂದು ಕೇಂದ್ರ ರೈಲ್ವೆ ಸಚಿವರು ಸಮಗ್ರ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೂರು ತಿಂಗಳಿನಲ್ಲಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುತ್ತದೆ.
ಸ್ವದೇಶಿ ತಂತ್ರಜ್ಞಾನದೊಂದಿಗೆ ಪರಿಸರ ಸ್ನೇಹಿಯಾಗಿ ಬೆಂಗಳೂರಿನ ಭಾರತ್‌ ಅರ್ಥ್ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌) ಹಾಗೂ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌)ಗಳಲ್ಲಿ ವಂದೇ ಭಾರತ್‌ ರೈಲಿನ ಸ್ಲೀಪರ್‌ ಕೋಚ್‌ಗಳನ್ನು ತಯಾರಿಸಲಾಗಿದೆ.

ವಿಶಾಲವಾದ ಸ್ಥಳಾವಾಕಾಶ ಹೊಂದಿರುವ ಸ್ಲೀಪರ್‌ ಕೋಚ್‌ಗಳಲ್ಲಿ ಆರಾಮದಾಯಕ ಸೀಟ್‌ಗಳು ಇರಲಿವೆ. ಸುಸಜ್ಜಿತ ಹಾಗೂ ವಿಶಾಲ ಶೌಚಾಲಯಗಳು, ಉತ್ತಮ ಬೆಳಕಿನ ವ್ಯವಸ್ಥೆ ಹೊಂದಿರಲಿವೆ.

ಮೊಬೈಲ್‌ ಹೋಲ್ಡರ್‌, ಚಾರ್ಜಿಂಗ್ ಪಾಯಿಂಟ್‌, ಸ್ನ್ಯಾಕ್ಸ್ ಟೇಬಲ್‌ ಹೊಂದಿರುವ ಕೋಚ್‌ಗಳು ಅಪಘಾತ ನಿಯಂತ್ರಕ ‘ಕವಚ’ ವ್ಯವಸ್ಥೆಯೊಂದಿಗೆ ಉಕ್ಕಿನಿಂದ ನಿರ್ಮಿಸಲಾಗಿದೆ. ಜಿಎಫ್‌ಆರ್‌ಪಿ ಬಳಸಿ ನಿರ್ಮಿಸಿದ ಆಂತರಿಕ ಫಲಕ, ಪೂರ್ಣ ಪ್ರಮಾಣದ ಸ್ವಯಂ ಚಾಲಿತ ಡೋರ್‌ ಇರಲಿದ್ದು, ಗಂಟೆಗೆ 160 ಕಿ. ಮೀ. ವೇಗದಲ್ಲಿ ರೈಲು ಚಲಿಸಲಿದೆ.

ಕೋಚ್ಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಬೋಗಿಯ ಒಳಗೆ ಅಳವಡಿಸಿರುವ ಬಟನ್ ಒತ್ತಿ ಲೋಕೋ ಪೈಲಟ್ ಜತೆ ಮಾತನಾಡಬಹುದು. ಲಗೇಜ್ ಇಡಲು, ಪುಸ್ತಕ, ಪೇಪರ್‌ಗಳನ್ನು ಇಡಲು ವ್ಯವಸ್ಥೆ ಮಾಡಲಾಗಿದೆ.

ಮೊಬೈಲ್ ಚಾರ್ಜರ್ ಅಳವಡಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಮೆಟ್ರೋದಲ್ಲಿ ಇರುವಂತೆ ಡಿಸ್ಪ್ಲೇ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಜನರಿಗೆ ರೈಲು ಎಲ್ಲಿದೆ? ಯಾವ ನಿಲ್ದಾಣದಲ್ಲಿದೆ. ನಮ್ಮ ನಿಲ್ದಾಣ ಯಾವಾಗ ಬರಲಿದೆ? ಎನ್ನುವುದು ಗೊತ್ತಾಗಲಿದೆ. ತುಂಬಾ ಕಂಫರ್ಟೆಬಲ್ ಆಗಿರುವ ಸೀಟುಗಳ ವ್ಯವಸ್ಥೆ ಮಾಡಲಾಗಿದೆ.

ವಂದೇ ಭಾರತ್ ಸ್ಲೀಪರ್ 16 ಕೋಚ್‌ಗಳನ್ನು ಹೊಂದಿರಲಿದೆ. 4 ಎಸಿ 2 ಟೈಯರ್ ಕೋಚ್‌ (188 ಬರ್ತ್‌), 11 ಎಸಿ 3 ಟೈಯರ್ ಕೋಚ್‌ (611 ಬರ್ತ್‌), ಮತ್ತು 1 ಎಸಿ ಫಸ್ಟ್ ಕ್ಲಾಸ್ ಕೋಚ್ (24 ಬರ್ತ್‌) ಒಳಗೊಂಡಿದೆ. ಒಟ್ಟು 823 ಸೀಟುಗಳ ವ್ಯವಸ್ಥೆ ಇರಲಿದೆ. ಫಸ್ಟ್ ಕ್ಲಾಸ್ ಎಸಿ ಬರ್ತ್ನಲ್ಲಿ ಬಿಸಿನೀರಿನ ಶವರ್ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವಾಗಿದೆ.

ಹೊಸದಾಗಿ ಪರಿಚಯಿಸಲಾದ ಕೋಚ್ ಸುಮಾರು 10 ದಿನಗಳ ಕಾಲ ಪರೀಕ್ಷಾರ್ಥ ಸಂಚಾರ ನಡೆಸಲಿದೆ. ನಂತರ ಟ್ರ್ಯಾಕ್‌ನಲ್ಲಿ ಸಹ ಪರೀಕ್ಷೆ ನಡೆಸಲಾಗುತ್ತದೆ. ಮುಂದಿನ ಮೂರು ತಿಂಗಳಲ್ಲಿ ಈ ರೈಲು ಸಾರ್ವಜನಿಕರ ಬಳಕೆಗೆ ಸಿಗಲಿದೆ.

https://www.newsics.com/2024/09/01/make-reels-and-win-prizes-hebbalkars-new-offer-for-owners/

ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ ಮೊದಲ ಪ್ರೋಮೋ ರಿಲೀಸ್‌

ಅಲಾಸ್ಕಾ ಮಂಜಿನ ಪರ್ವತದಲ್ಲಿ ಕನ್ನಡದ ಬಾವುಟ ಹಾರಿಸಿದ ಕನ್ನಡಿಗ

ರಷ್ಯಾದ ಬೇಹುಗಾರಿಕಾ ತಿಮಿಂಗಿಲ ಇನ್ನಿಲ್ಲ

ಟ್ರೆಂಡ್‌ ಆಯ್ತು ದರ್ಶನ್‌ ಧರಿಸಿದ್ದ ಟೀ ಶರ್ಟ್‌

ಬದುಕು ಅಂತ್ಯಗೊಳಿಸಿದ ಕಾಂಗ್ರೆಸ್ ನಾಯಕ, ಪತ್ನಿ ಇಬ್ಬರು ಪುತ್ರರೂ ಸಾವು!

TAGGED:Vande Bharat Sleeper Train to start service by year-end: What's in this train?
Share This Article
Facebook Twitter Copy Link Print
Previous Article ದಿನ ಭವಿಷ್ಯ… 02-09-2024 ಸೋಮವಾರ, ಮಿಥುನ- ಸ್ಥಿರಾಸ್ತಿ ವಿವಾದಗಳಿಂದ ಕಿರಿಕಿರಿ, ಧನುಸ್ಸು- ಅನಾರೋಗ್ಯದ ಸಮಸ್ಯೆ, ಇಂದಿನ ನಿಮ್ಮ ರಾಶಿ‌ ಭವಿಷ್ಯ ಹೇಗಿದೆ?
Next Article ರೈಲ್ವೆಗೂ ಬಂತು ಮೆಟ್ರೋ ಮಾದರಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?