newsics.com
ಕಾಲ ಬದಲಾಗಿದೆ. ಮದುವೆಯಾದ ಬಳಿಕ ಮಕ್ಕಳನ್ನು ಹೆರಬೇಕು ಎಂದೇನಿಲ್ಲ. ಹಾಗೆಯೇ ಮಕ್ಕಳನ್ನು ಹೆರಲು ಮದುವೆಯಾಗಬೇಕೆಂಬ ರೂಲ್ಸೂ ಈಗಿಲ್ಲ. ಈಗೇನಿದ್ದರೂ ಎಲ್ಲವೂ ಖುಲ್ಲಂ ಖುಲ್ಲಾ.
ವೈದ್ಯಕೀಯ ಲೋಕದ ಬೆಳವಣಿಗೆಯನ್ನು ಸದುಪಯೋಗಪಡಿಸಿಕೊಂಡು ಸಿಂಗಲ್ ಪೇರೇಂಟ್ ಆಗಬಯಸುವ ಮಹಿಳೆಯರು ಹೆಚ್ಚುತ್ತಿದ್ದಾರೆ. ಐವಿಎಫ್, ಬಾಡಿಗೆ ತಾಯಿ, ಎಗ್ ಫ್ರೀಜ್ ಸೇರಿದಂತೆ ನಾನಾ ವಿಧಾನಗಳನ್ನು ಬಳಸಿಕೊಳ್ತಿದ್ದಾರೆ.
ಈಗ ಮಕ್ಕಳನ್ನು ಪಡೆಯೋಕೆ ಚೀನಾದಲ್ಲಿ ಹೊಸ ತಂತ್ರಜ್ಞಾನವೊಂದು ಬಂದಿದೆ. ಇದನ್ನು ನಾವು ಹೇಳ್ತಿಲ್ಲ. ಚೀನಾದ ಮಹಿಳೆಯೇ ಹೇಳ್ತಿದ್ದಾಳೆ. ಈ ಕಂಪನಿಯ ಅಂಡರ್ವೇರ್ ಧರಿಸಿದ್ರೆ ಸಾಕಂತೆ. ಮಹಿಳೆ ಗರ್ಭಧರಿಸಬಹುದಂತೆ!
ಈ ಮಹಿಳೆಯ ಮಾತು ಕೇಳಿ ಅಂಡರ್ವೇರ್ ತಯಾರಕ ಕಂಪನಿಗಳೆಲ್ಲ ಬೆಚ್ಚಿಬಿದ್ದಿವೆ. ಅಚ್ಚರಿ ಎನ್ನಿಸಿದ್ರೂ ಮಹಿಳೆ ವಾದ ಮಾಡ್ತಿರೋದು ಸತ್ಯ. ಮಹಿಳೆ ತನ್ನ ಮಗಳಿಗಾಗಿ ಆನ್ಲೈನ್ನಲ್ಲಿ ಅಂಡರ್ವೇರ್ ಖರೀದಿ ಮಾಡಿದ್ದಳು. ಅದನ್ನು ಧರಿಸಿದ ಮಗಳು ಗರ್ಭ ಧರಿಸಿದ್ದಾಳೆ. ಮಹಿಳೆ ಪ್ರಕಾರ, ತನ್ನ ಮಗಳು ಪ್ರೆಗ್ನೆಂಟ್ ಆಗಲು ಆನ್ಲೈನ್ನಲ್ಲಿ ಖರೀದಿ ಮಾಡಿದ ಅಂಡರ್ವೇರ್ ಕಾರಣ!
ಮಹಿಳೆಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಮಹಿಳೆ ಮಾತು ಕೇಳಿದ್ರೆ ಆಶ್ಚರ್ಯವಾಗುತ್ತೆ. ಇದೆಂಥ ಅಸಂಬದ್ಧ ಅನ್ನಿಸೋದು ಸಾಮಾನ್ಯ. ಒಳ ಉಡುಪು ತಯಾರಿಕಾ ಕಂಪನಿಗೂ ಕರೆ ಮಾಡಿದ್ದ ಮಹಿಳೆ, ತನ್ನ ಮಗಳ ಪ್ರೆಗ್ನೆನ್ಸಿಗೆ ನಿಮ್ಮ ಅಂಡರ್ವೇರ್ ಕಾರಣ ಎಂದಿದ್ದಾಳೆ.
ಕಂಪನಿಗೆ ಕರೆ ಮಾಡಿದ್ದ ಮಹಿಳೆ, ತನ್ನ ಮಗಳು ಗರ್ಭಣಿಯಾಗಲು ನಿಮ್ಮ ಕಂಪನಿಯಲ್ಲಿ ಸಿದ್ಧವಾದ ಒಳ ಉಡುಪು ಕಾರಣ. ಅದನ್ನು ಧರಿಸಿದ ಮೇಲೆ ಮಗಳ ಸ್ಥಿತಿ ಹೀಗಾಗಿದೆ ಎಂದು ಆರೋಪ ಮಾಡಿದ್ದಾಳೆ. ಆರಂಭದಲ್ಲಿ ಕಂಪನಿ ಇದು ಹೇಗೆ ಸಾಧ್ಯ. ಇದು ತರ್ಕವಿಲ್ಲದ ವಾದ, ಇದು ಸಾಧ್ಯವಿಲ್ಲದ ಮಾತು ಎಂದಿದೆ. ಆದ್ರೆ ಮಹಿಳೆ ಅದಕ್ಕೆ ಒಪ್ಪಲಿಲ್ಲ.
ಆಗ ಕಂಪನಿ, ನಮ್ಮಲ್ಲಿ ಬರೀ ಮಹಿಳೆಯರು ಕೆಲಸ ಮಾಡ್ತಿದ್ದಾರೆ. ಮಾಲೀಕ, ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಾಗಾಗಿ ನಿಮ್ಮ ಮಗಳು ಗರ್ಭ ಧರಿಸಲು ನಮ್ಮ ಕಂಪನಿ ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ. ಇಷ್ಟಾದ್ರೂ ಮಹಿಳೆ ನಿಜವನ್ನು ಒಪ್ಪಿಕೊಳ್ತಿಲ್ಲ.
ಈ ವಿಷಯವನ್ನು ಮಹಿಳೆ ಜಗತ್ತಿಗೇ ಸಾರುವ ಅಪಾಯವಿದೆ ಎಂಬುದನ್ನು ಅರಿತ ಕಂಪನಿ, ಕಸ್ಟಮರ್ ಕೇರ್ ಜತೆ ಮಹಿಳೆ ಮಾತನಾಡಿದ ಸಂಭಾಷಣೆಯನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಬಿಟ್ಟಿದೆ.
ತನ್ನ ಪ್ರಿಯಕರ ಬೇರೊಬ್ಬಳ ಜೊತೆ ಮದುವೆಯಾಗಿದ್ದಕ್ಕೆ ವಧುವಿನ ಕತ್ತು ಸೀಳಿದ ಯುವತಿ!
ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ; ಬಿಚ್ಚಿ ಬಿದ್ದ ಫ್ಯಾಮಿಲಿ!