Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > RSS selling pure milk ಶುದ್ಧ ಹಾಲಿನ‌ ಮಾರಾಟಕ್ಕಿಳಿದ ಆರೆಸ್ಸೆಸ್: ಇಂದಿನಿಂದ ಪ್ರಾಯೋಗಿಕ ಆರಂಭ
ಕರ್ನಾಟಕಪ್ರಮುಖ

RSS selling pure milk ಶುದ್ಧ ಹಾಲಿನ‌ ಮಾರಾಟಕ್ಕಿಳಿದ ಆರೆಸ್ಸೆಸ್: ಇಂದಿನಿಂದ ಪ್ರಾಯೋಗಿಕ ಆರಂಭ

Share
2 Min Read
SHARE

newsics.com

ಹುಬ್ಬಳ್ಳಿ: ಮನೆ-ಮನೆಗೆ ದೇಸಿ ಹಸುಗಳ ಹಾಲು ಪೂರೈಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ದೇಸಿ ಹಾಲು ಮಾರಾಟ ಕೇಂದ್ರ ಆರಂಭಿಸಿದ್ದು, ಗುರುವಾರ(ಮಾ.26) ಕಾರ್ಯಾರಂಭ ಮಾಡಿದೆ.

ಕಲಬೆರಕೆಯುಕ್ತ ಹಾಲು ಪೂರೈಕೆ ಅವಾಂತರದಿಂದಾಗಿ ಮಕ್ಕಳು, ಹಿರಿಯರು ಇನ್ನಿಲ್ಲದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂದು ಶುದ್ಧ ದೇಸಿ ಹಾಲು ದೊರೆಯುವುದೇ ಸವಾಲಾಗಿ ಪರಿಣಮಿಸಿದೆ. ಇದನ್ನು ಗಮನಿಸಿದ ಆರ್‌ಎಸ್‌ಎಸ್‌ನ ಸೇವಾ ಗತಿವಿಧಿ ಉತ್ತರ ಕರ್ನಾಟಕ ಪ್ರಾಂತವು ನಗರದ ಮನೆ-ಮನೆಗೂ ಶುದ್ಧ ದೇಸಿ ಹಾಲು ಪೂರೈಸಲು ಯೋಜನೆ ರೂಪಿಸಿದೆ.

ಆರು ತಿಂಗಳಿಂದ ಸಮೀಕ್ಷೆ:

ಹುಬ್ಬಳ್ಳಿ ನಗರ ಸೇರಿದಂತೆ ರಾಜ್ಯಾದ್ಯಂತ ಹಲವೆಡೆ ಗೋಶಾಲೆಗಳಿವೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗೀರ್, ಸಾಹಿವಾಲ್, ಹಳ್ಳಿಕಾರ್, ಅಮೃತ್‌ ಮಹಲ್‌, ಮಲ್ನಾಡ ಗಿಡ್ಡ ಸೇರಿದಂತೆ ಮುಂತಾದ ಪ್ರಮುಖ ದೇಸಿ ಗೋ ತಳಿಯ ಹಸುಗಳಿದ್ದು, ಇವುಗಳಿಂದ ಉತ್ಪತ್ತಿಯಾಗುವ ಹಾಲು ಆರೋಗ್ಯಕ್ಕೆ ಒಳ್ಳೆಯದು. ಇದರ ಮಹತ್ವದ ಕುರಿತು ಜನರಲ್ಲಿ ಸರಿಯಾದ ಅರಿವು ಇರದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇಸಿ ಹಸುವಿನ ಹಾಲು ಖರೀದಿಸದೇ ಜರ್ಸಿ ಹಸುಗಳ ಹಾಲು, ಪ್ಯಾಕೆಟ್‌ ಹಾಲಿಗೆ ಪ್ರಾಧಾನ್ಯತೆ ನೀಡುತ್ತಿದ್ದಾರೆ.

ಇದನ್ನರಿತು ಸಂಘವು 6 ತಿಂಗಳಿಂದ ಸಮೀಕ್ಷೆ ನಡೆಸಿ ಗೋಶಾಲೆಗಳಿಗೆ ಭೇಟಿ ನೀಡಿ ಅಲ್ಲಿರುವ ದೇಸಿ ಹಸುಗಳ ಕುರಿತು ಸಮಗ್ರ ಮಾಹಿತಿ ಕಲೆಹಾಕಿ ಅವುಗಳಿಂದ ಬರುವ ಹಾಲನ್ನು ಸಂಗ್ರಹಿಸಿ ನಗರದ ಜನರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದಾರೆ.

ಉತ್ತಮ ಸ್ಪಂದನೆ:

ಈಗಾಗಲೇ ನಗರದ ಹಲವು ಮನೆಗಳಿಗೆ ಸಂಪರ್ಕಿಸಿದ್ದು, 200ಕ್ಕೂ ಅಧಿಕ ಕಡೆ ದೇಸಿ ಹಾಲಿನ ಬೇಡಿಕೆ ಬಂದಿದೆ. ಆದರೆ, ಪ್ರಾಯೋಗಿಕವಾಗಿ ಮಧುರಾ ಕಾಲೊನಿಯಲ್ಲಿ ಮಾತ್ರ ಆರಂಭಿಸುತ್ತಿರುವುದರಿಂದ ಈ ಭಾಗದಲ್ಲಿ 40ಕ್ಕೂ ಅಧಿಕ ಜನರಿಂದ ಬೇಡಿಕೆ ಬಂದಿದೆ. ಹಾಗಾಗಿ ಗುರುವಾರದಿಂದ ನಿತ್ಯ 50 ಲೀಟರ್‌ ದೇಸಿ ಹಾಲು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂದೆ ಬೇಡಿಕೆಗೆ ತಕ್ಕಂತೆ ಅಗತ್ಯ ಪ್ರಮಾಣದ ಹಾಲು ವಿತರಣೆಗೆ ಆರ್‌ಎಸ್‌ಎಸ್‌ ಕ್ರಮ ಕೈಗೊಂಡಿದೆ.

ಪ್ರಾಯೋಗಿಕವಾಗಿ ಪ್ರಾರಂಭ:

ಮಧುರಾ ಕಾಲೊನಿಯ ಕೇಂದ್ರಕ್ಕೆ ಧಾರವಾಡ ತಾಲೂಕಿನ ಅಮ್ಮಿನಬಾವಿಯ ಪಂಚಗೃಹ ಹಿರೇಮಠ ಸಂಸ್ಥಾನ ಮಠದ ಗೋಶಾಲೆಯಲ್ಲಿರುವ 20ಕ್ಕೂ ಅಧಿಕ ಗೀರ್‌ ತಳಿಯ ದೇಸಿ ಹಸುಗಳಿಂದ ನಿತ್ಯ 50 ಲೀಟರ್‌ ಹಾಲು ಸಂಗ್ರಹಗೊಳ್ಳುತ್ತಿದ್ದು, ಈ ಹಾಲನ್ನೇ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಉತ್ತಮ ಸ್ಪಂದನೆ ದೊರೆತಲ್ಲಿ ವಿದ್ಯಾನಗರ, ಗೋಕುಲ ರಸ್ತೆ, ಹಳೇ ಹುಬ್ಬಳ್ಳಿ, ಶಿರೂರ ಪಾರ್ಕ್‌ ಸೇರಿದಂತೆ 10 ಕಡೆ ಮಾರಾಟ ಕೇಂದ್ರ ಆರಂಭಿಸುವ ಚಿಂತನೆಯಿದೆ. ನಗರದಲ್ಲಿ ಯಶಸ್ವಿಯಾದರೆ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಕೇಂದ್ರ ತೆರೆಯುವ ಉದ್ದೇಶವನ್ನು ಆರ್‌ಎಸ್‌ಎಸ್‌ ಹೊಂದಿದೆ.

ಲೀಟರ್‌ಗೆ ₹85 ನಿಗದಿ:

ಹಾಲಿನ ಕೇಂದ್ರದಲ್ಲಿ ಲೀಟರ್‌ ದೇಸಿ ಹಾಲಿಗೆ ₹ 85 ಇದ್ದರೆ, ಡೋರ್‌ ಡೆಲಿವರಿಗೆ ₹ 5 ಹೆಚ್ಚುವರಿ ನಿಗದಿಪಡಿಸಲಾಗಿದೆ. ಈ ದೇಸಿ ಹಸುವಿನ ಹಾಲಿಗೆ ಬೇಡಿಕೆ ಬಂದಿರುವುದರಿಂದ ಒಂದು ಮನೆಗೆ 1 ಲೀಟರ್‌ ಮಾತ್ರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಹಾಲು ಪೂರೈಕೆಗೆ ಯೋಜನೆ ಹಾಕಿಕೊಳ್ಳಲಾಗಿದೆ.

ಸಾರ್ವಜನಿಕರಲ್ಲಿ ದೇಸಿ ಹಸುಗಳ ಹಾಲಿನ ಪ್ರಾಮುಖ್ಯತೆಯ ಅರಿವಿನ ಕೊರತೆಯಿದೆ. ಇದನ್ನರಿತು ಸಂಘದ “ಸೇವಾ ಗತಿವಿಧಿ” ಅಡಿ ನಗರದಲ್ಲಿ ದೇಸಿ ಹಸುವಿನ ಹಾಲು ವಿತರಣಾ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತಲ್ಲಿ ರಾಜ್ಯಾದ್ಯಂತ ಕೇಂದ್ರ ತೆರೆಯುವ ಉದ್ದೇಶವಿದೆ ಎನ್ನುತ್ತಾರೆ, ಆರ್‌ಎಸ್‌ಎಸ್‌ನ ಗೋ ಸೇವಾ ಗತಿವಿಧಿ ಕರ್ನಾಟಕ ಉತ್ತರ ಪ್ರಾಂತದ ಟೋಳಿ ಸದಸ್ಯ ಭರತ್‌ ಜೈನ್‌.

 

ಸ್ತ್ರೀಯರೇ, ಮೋಸ ಹೋಗುವ ಮುನ್ನವೇ ಇಂಥ ಗಂಡಸರನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದಲ್ಲವೇ?

ಇನ್ಮುಂದೆ UPI ಪೇಮೆಂಟ್‌ ಗೆ ಮುಖ ತೋರಿಸಿದ್ರೆ ಸಾಕು ಹಣ ಟ್ರಾನ್ಸ್ಫರ್ !

ಉಗ್ರರ ನಂಟು ; ಕರ್ನಾಟಕದ ಓರ್ವ ಸೇರಿ 12 ಮಂದಿ ಆರೋಪಿಗಳು ಅರೆಸ್ಟ್.!

ವಿಶ್ವ ನಾಯಕರ ಪಟ್ಟಿಯಲ್ಲಿ ಮೋದಿಯೇ ಕಿಂಗ್

TAGGED:RSS starts selling pure milk: Trial starts from today
Share This Article
Facebook Twitter Copy Link Print
Previous Article ಇರಾನ್ ಸೋಲೊಪ್ಪಿಕೊಳ್ಳದಿದ್ದರೆ ಟ್ರಂಪ್ ಹಿಂದೆಂದೂ ಕಾಣದಷ್ಟು ಕಠಿಣ ದಾಳಿಯನ್ನು ನಡೆಸಲು ಸಿದ್ಧರಾಗಿದ್ದಾರೆ : ಶ್ವೇತಭವನ
Next Article Ramanavami ಇಂದು, ನಾಳೆ ರಾಮನವಮಿ: ಇವುಗಳನ್ನು ಇಂದೇ ಮನೆಗೆ ತಂದರೆ ನಿಮಗೆ ಅದೃಷ್ಟ

Popular Posts

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

You Might Also Like

ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?