Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಸ್ತ್ರೀಯರೇ, ಮೋಸ ಹೋಗುವ ಮುನ್ನವೇ ಇಂಥ ಗಂಡಸರನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದಲ್ಲವೇ?
ರಿಲೇಷನ್‌ಶಿಪ್

ಸ್ತ್ರೀಯರೇ, ಮೋಸ ಹೋಗುವ ಮುನ್ನವೇ ಇಂಥ ಗಂಡಸರನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದಲ್ಲವೇ?

Share
3 Min Read
SHARE

https://youtube.com/shorts/8vXYZAagRTI?si=TOMvue_f8l6FavIl

newsics.com

ಕೆಲವು ಪುರುಷರು ನಿಮ್ಮ ಜೀವನಕ್ಕೆ ಪ್ರೀತಿಗಾಗಿ ಬರುವುದಿಲ್ಲ. ಅವರು ಬರುವುದು ನಿಮ್ಮನ್ನು ಬಳಸಿಕೊಳ್ಳಲು. ನಿಮ್ಮ ಮೃದುಸ್ವಭಾವ, ನಿಮ್ಮ ದೇಹ, ನಿಮ್ಮ ಕ್ಷಮಿಸುವ ಗುಣ- ಇವೆಲ್ಲವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ.
ಮುಖದಲ್ಲಿ ಗಂಭೀರತೆ ಇಟ್ಟುಕೊಂಡೇ ನಿಮ್ಮ ಸಮಯವನ್ನು ಹಾಳು ಮಾಡುತ್ತಾರೆ. ನಿಮ್ಮ ಜೀವನದಲ್ಲಿ ಇದ್ದರೂ, ನಿಮ್ಮ ಮುಂದೆ ಜವಾಬ್ದಾರಿ ಹೊರುವ ಧೈರ್ಯವಿಲ್ಲ. ಅವರಿಗೆ ಬೇಕಾದದ್ದು ʼಗರ್ಲ್‌ಫ್ರೆಂಡ್ ಅನುಭವʼ. ಅನೇಕ ಯುವತಿಯರು ಇಂಥ ಪುರುಷರಿಂದ ಮೋಸ ಹೋದ ಬಳಿಕ ಬುದ್ಧಿ ಕಲಿಯುತ್ತಾರೆ. ಆದರೆ ಅದಕ್ಕೆ ಚಾಣಕ್ಯ 5 ಗುರುತುಗಳನ್ನು ನೀಡಿದ್ದಾರೆ.
1. ʼಹೆಚ್ಚು ಸ್ನೇಹಿತೆಯರುʼ ಇರುವ ವ್ಯಕ್ತಿ
ಸ್ನೇಹಿತೆಯರು ಇರುವವರೆಲ್ಲ ಅಪಾಯಕಾರಿ ಎನ್ನಲಾಗುವುದಿಲ್ಲ. ಆದರೆ ಕೆಲವರು ʼಸ್ನೇಹʼ ಎಂಬ ಹೆಸರಿನಲ್ಲಿ ಹಿಂದಿನ ಅಪೂರ್ಣ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಅವರಿಗೆ ಸ್ನೇಹಕ್ಕಿಂತ ಮಹಿಳೆಯರ ಪ್ರಾಪ್ತಿ ಮುಖ್ಯ. ಮನಸ್ಥಿತಿ ಅನುಸಾರ ಹಲವರಿಗೆ ಮೆಸೇಜ್ ಮಾಡುತ್ತಾರೆ. ಒಬ್ಬಳಿಂದ ಮೆಚ್ಚುಗೆ, ಮತ್ತೊಬ್ಬಳಿಂದ ಭಾವನಾತ್ಮಕ ಸಹಾಯ, ಇನ್ನೊಬ್ಬಳ ಜೊತೆ ಫ್ಲರ್ಟ್, ಮತ್ತೊಬ್ಬಳನ್ನು ಅಹಂಕಾರಕ್ಕೆ ಬಳಸಿಕೊಳ್ಳುವುದು ಹೀಗೆ. ʼಅವಳು ಕೇವಲ ಸ್ನೇಹಿತೆʼ ಎಂದು ಹೇಳುತ್ತಾರೆ. ಆದರೆ ಎಲ್ಲರೂ ಸ್ನೇಹಿತೆಯರೇ! ಇದು ಶಾಣ್ಯಾತನ. ಕೆಲವರು ಮಹಿಳೆಯರನ್ನು ಸ್ಪೇರ್ ಚಾರ್ಜರ್‌ಗಳಂತೆ ಇಟ್ಟುಕೊಳ್ಳುತ್ತಾರೆ, ಬೇಡಿಕೆಯಾದಾಗ ಬಳಸಲು.
2. ತನ್ನ ಎಕ್ಸ್ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿ
ಯಾವ ವ್ಯಕ್ತಿ ತನ್ನ ಹಿಂದಿನ ಪ್ರೇಯಸಿಯ ಬಗ್ಗೆ ಸದಾ ಕೆಟ್ಟದಾಗಿ ಮಾತನಾಡುತ್ತಾನೋ, ಬೇರೆಲ್ಲ ಮಹಿಳೆಯರನ್ನು ʼಪಾಗಲ್ʼ, ʼಡ್ರಾಮಾಟಿಕ್ʼ, ʼಸೈಕೋʼ ಎಂದು ಹೇಳುತ್ತಾನೋ- ಅವನು ಸತ್ಯವಂತನಲ್ಲ. ಅವನು ತನ್ನನ್ನು “ಬಲಿಪಶು” ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಅವನು ಹೇಳುವ ಎಲ್ಲ ಕಥೆಗಳಲ್ಲಿ ತಪ್ಪು ಮಹಿಳೆಯರದ್ದೇ, ಆತ ಮಾತ್ರ ನಿರಪರಾಧಿ! ಇಂತಹವರು ಮಹಿಳೆಯರನ್ನು ಹೀನಗೊಳಿಸಿ ನಿಮ್ಮನ್ನು ವಿಶೇಷವಾಗಿ ಕಾಣಿಸುತ್ತಾರೆ. ಆದರೆ ನಾಳೆ ನೀವು ಅವನನ್ನು ವಿರೋಧಿಸಿದರೆ, ನೀವು ಕೂಡ ಅವನ ಕಥೆಯ “ವಿಲನ್” ಆಗುತ್ತೀರಿ.
3. ʼಹಾಟ್ ಆಂಡ್ ಕೋಲ್ಡ್ʼ ವ್ಯಕ್ತಿ
ಒಂದು ದಿನ ಅವನು ತುಂಬಾ ಕಾಳಜಿ ತೋರಿಸುತ್ತಾನೆ. ಸಂದೇಶಗಳು, ಗಾಢವಾದ ಮಾತುಗಳು, ಭವಿಷ್ಯದ ಯೋಜನೆಗಳು ಇತ್ಯಾದಿ. ನೀವು ಅವನಿಗೆ ವಿಶೇಷ ವ್ಯಕ್ತಿ ಎಂದು ಭಾಸವಾಗುತ್ತದೆ. ಮರುದಿನ ಅವನು ಕಾಣೆಯಾಗುತ್ತಾನೆ. ನೀವು ಗೊಂದಲಕ್ಕೆ ಸಿಲುಕುವಷ್ಟು. ಮತ್ತೆ ಬರುತ್ತಾನೆ- ಏನೂ ಆಗಿಲ್ಲ ಎಂಬಂತೆ. “ಅವನಿಗೆ ನನ್ನ ಮೇಲೆ ಪ್ರೀತಿ ಇರಬಹುದು, ಅದನ್ನು ತೋರಿಸಲು ಬಾರದಿರಬಹುದು” ಎಂದು ನೀವು ಯೋಚಿಸುತ್ತೀರಿ. ಹಾಗಲ್ಲ ಅದು. ಅವನು ಏನು ಮಾಡುತ್ತಿದ್ದಾನೋ ಅವನಿಗೆ ಗೊತ್ತಿದೆ. ಒಂಟಿತನ ಆದಾಗ ಬರುತ್ತಾನೆ. ತೃಪ್ತಿಯಾದಾಗ ದೂರವಾಗುತ್ತಾನೆ. ನೀವು ದೂರವಾಗುತ್ತಿದ್ದೀರಿ ಅನ್ನಿಸಿದಾಗ ಮತ್ತೆ ಬರುತ್ತಾನೆ. ಅವನಿಗೆ ಸಂಬಂಧ ಬೇಡ- ನಿಮ್ಮ ಲಭ್ಯತೆ ಮಾತ್ರ ಬೇಕು.
4. ವೇಗವಾಗಿ ಹತ್ತಿರವಾಗುವ ವ್ಯಕ್ತಿ
ಅತ್ಯಂತ ಬೇಗ ಹತ್ತಿರವಾಗುವವರು ಸಾಮಾನ್ಯವಾಗಿ ಆಳವಾದ ವ್ಯಕ್ತಿತ್ವದವರಲ್ಲ. ಅವರು ಚತುರ ಸುಳ್ಳುಗಾರರು. “ನಾನು ಇಂಥ ಭಾವನೆ ಎಂದಿಗೂ ಅನುಭವಿಸಿಲ್ಲ” “ನೀನು ವಿಭಿನ್ನ” “ನೀನು ನನ್ನ ಫ್ಯೂಚರ್”‌ ಇಂಥದೆಲ್ಲ ಮಾತುಗಳು ಆ ಸ್ಪೀಡ್‌ನ ಭಾಗ. ಅವರು ನಿಮ್ಮನ್ನು ಬೇಗ ಅಂಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನೀವು ಭಾವನಾತ್ಮಕವಾದ ನಂತರ, ನಿಮ್ಮನ್ನು ನಿಯಂತ್ರಿಸಲು ಅವರಿಗೆ ಸುಲಭವಾಗುತ್ತದೆ. ಆ ವ್ಯಕ್ತಿ ನಂತರ ಬದಲಾಗುವುದಿಲ್ಲ. ಆ ನಟನೆಯಷ್ಟೇ ಮುಗಿದಿರುತ್ತದೆ.
5. ಮೊದಲು ಹೊಗಳಿ, ನಂತರ ನೋವು ಕೊಡುವವನು
ಮೊದಲಿಗೆ ಅವನು ನಿಮ್ಮನ್ನು ಆರಾಧಿಸುತ್ತಾನೆ. “ನೀನು ಅದ್ಭುತ”, “ನಿನ್ನಂತಹವರು ನನಗೆ ಸಿಗುತ್ತಾರೆ ಎಂದು ಭಾವಿಸಲೇ ಇಲ್ಲ” ಎಂದು ಹೇಳುತ್ತಾನೆ. ನಂತರ ಅದೇ ಆರಾಧನೆ ಬದಲಾಗುತ್ತದೆ. ಹಾಸ್ಯದ ಹೆಸರಿನಲ್ಲಿ ಅವಮಾನ, ನೀವು ಚೆನ್ನಾಗಿ ಕಾಣಿಸಿದಾಗ ವಿಚಿತ್ರ ಪ್ರತಿಕ್ರಿಯೆ, ನೀವು ಸಾಧನೆ ಮಾಡಿದಾಗ ದೂರವಾಗುವುದು, ಇತರರು ಮೆಚ್ಚಿದಾಗ ಅಸಹನೆ, ಅರ್ಥವಿಲ್ಲದ ಮೋಸಗಳು ಶುರುವಾಗುತ್ತದೆ. ಕಾರಣವೇನು? ನೀವು ಅವನಿಗಿಂತ ಉತ್ತಮ ಎಂಬ ಸತ್ಯವನ್ನು ಅವನು ತಾಳಲಾರ. ಅಸುರಕ್ಷಿತ ವ್ಯಕ್ತಿ ಪ್ರೀತಿಗಾಗಿ ಅಲ್ಲದೆ ತನ್ನ ಅಹಂಕಾರದ ಶಮನಕ್ಕಾಗಿ ಸಂಬಂಧ ಸಾಧಿಸುತ್ತಾನೆ.

ಇಂಡಕ್ಷನ್ ಸ್ಟೌವ್‌ ಬಳಸಿ ಕರೆಂಟ್ ಬಿಲ್ ಕಡಿಮೆ ಮಾಡಲು ಈ ಟಿಪ್ಸ್ ಟ್ರೈ ಮಾಡಿ

TAGGED:womenwouldn't it be better to understand such men before they cheat?
Share This Article
Facebook Twitter Copy Link Print
Previous Article ಇಂಡಕ್ಷನ್ ಸ್ಟೌವ್‌ ಬಳಸಿ ಕರೆಂಟ್ ಬಿಲ್ ಕಡಿಮೆ ಮಾಡಲು ಈ ಟಿಪ್ಸ್ ಟ್ರೈ ಮಾಡಿ
Next Article ಇನ್ಮುಂದೆ UPI ಪೇಮೆಂಟ್‌ ಗೆ ಮುಖ ತೋರಿಸಿದ್ರೆ ಸಾಕು ಹಣ ಟ್ರಾನ್ಸ್ಫರ್ !

Popular Posts

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read

England New Prime Minister: ಆಂಡಿ ಬರ್ನ್‌ಹ್ಯಾಮ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ – ಯಾರು ಈ ನಾಯಕ? ಬ್ರಿಟನ್ ಮುಂದೆ ಇರುವ ಸವಾಲುಗಳೇನು?

3 Min Read

You Might Also Like

ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Mobile Privacy ಹೆಂಡತಿಯ ಫೋನ್ ಕದ್ದು ನೋಡ್ತೀರಾ? ಹುಷಾರ್..ಮೊಬೈಲ್ ಮುಟ್ಟುವ ಮುನ್ನ ಈ ರೂಲ್ಸ್ ತಿಳಿಯಿರಿ

2 Min Read
ದೇಶಪ್ರಮುಖರಿಲೇಷನ್‌ಶಿಪ್ವಿದೇಶ

Relationship- Love kick ಪ್ರೀತಿಯಲ್ಲಿ ಬಿದ್ದರೆ ಮೆದುಳು ಕೊಕೇನ್ ತಿಂದಂತೆ ಆಡುತ್ತೆ! ನಿಮ್ಮೊಳಗಿನ ‘ಲವ್ ಕೆಮಿಸ್ಟ್ರಿ’ ಬಗ್ಗೆ ನಿಮಗೇನಾದ್ರೂ ಗೊತ್ತಾ?

2 Min Read
ಕರ್ನಾಟಕರಿಲೇಷನ್‌ಶಿಪ್ವೈರಲ್

Kissing Young Couples in namma metro | ನಮ್ಮ ಮೆಟ್ರೋದಲ್ಲಿ ವೈರಲ್ ವಿಡಿಯೋ: ಸಾರ್ವಜನಿಕ ಸ್ಥಳದಲ್ಲಿನ ವರ್ತನೆ ಕುರಿತು ಮತ್ತೆ ಚರ್ಚೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?