Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Mobile Privacy ಹೆಂಡತಿಯ ಫೋನ್ ಕದ್ದು ನೋಡ್ತೀರಾ? ಹುಷಾರ್..ಮೊಬೈಲ್ ಮುಟ್ಟುವ ಮುನ್ನ ಈ ರೂಲ್ಸ್ ತಿಳಿಯಿರಿ
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Mobile Privacy ಹೆಂಡತಿಯ ಫೋನ್ ಕದ್ದು ನೋಡ್ತೀರಾ? ಹುಷಾರ್..ಮೊಬೈಲ್ ಮುಟ್ಟುವ ಮುನ್ನ ಈ ರೂಲ್ಸ್ ತಿಳಿಯಿರಿ

Share
2 Min Read
SHARE

newsics.com | ನ್ಯೂಸಿಕ್ಸ್

ದಾಂಪತ್ಯ ಎನ್ನುವುದು ಪರಸ್ಪರ ನಂಬಿಕೆ ಮತ್ತು ಗೌರವದ ಮೇಲೆ ನಿಲ್ಲುವ ಸುಂದರ ಸಂಸಾರ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಹಾಗೂ ಸಣ್ಣಪುಟ್ಟ ಸಂಶಯಗಳಿಂದಾಗಿ ದಂಪತಿಗಳ ನಡುವೆ ಬಿರುಕು ಮೂಡುತ್ತಿರುವುದು ಸಾಮಾನ್ಯವಾಗಿದೆ.

ಹೌದು, ಸಂಗಾತಿಯ ನಡವಳಿಕೆಯ ಮೇಲೆ ಅನುಮಾನ ಬಂದರೆ ಸಾಕು, ಅವರು ಇಲ್ಲದ ವೇಳೆ ಮೊಬೈಲ್ ಲಾಕ್ ಓಪನ್ ಮಾಡಿ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಅಥವಾ ಕಾಲ್ ಹಿಸ್ಟರಿ ಜಾಲಾಡುವ ಅಭ್ಯಾಸ ಹಲವರಿಗಿದೆ. ಆದರೆ, ಮದುವೆಯಾಗಿದೆ ಎಂದ ಮಾತ್ರಕ್ಕೆ ಪತ್ನಿಯ ಫೋನ್ ಪತಿ ಅಥವಾ ಪತಿಯ ಫೋನ್ ಪತ್ನಿ ರಹಸ್ಯವಾಗಿ ಪರಿಶೀಲಿಸಬಹುದೇ? ಈ ಡಿಜಿಟಲ್ ಜಗತ್ತಿನಲ್ಲಿ ಭಾರತೀಯ ಕಾನೂನು ವೈಯಕ್ತಿಕ ಗೌಪ್ಯತೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಹಲವು ದಂಪತಿಗಳಲ್ಲಿ ಒಂದು ತಪ್ಪು ಕಲ್ಪನೆ ಮನೆಮಾಡಿದೆ. ಮದುವೆಯಾದ ಬಳಿಕ ಸಂಗಾತಿಯ ಪ್ರತಿಯೊಂದು ವಸ್ತುವೂ ತಮಗೆ ಸೇರಿದ್ದು, ಅವರ ವೈಯಕ್ತಿಕ ವಿಚಾರಗಳನ್ನೆಲ್ಲಾ ತಿಳಿಯುವ ಹಕ್ಕು ತಮಗಿದೆ ಎಂದು ಭಾವಿಸುತ್ತಾರೆ. ಆದರೆ ಕಾನೂನು ಇದನ್ನು ಒಪ್ಪುವುದಿಲ್ಲ. ವೈವಾಹಿಕ ಬಂಧದಲ್ಲೂ ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಖಾಸಗಿ ಬದುಕು ಇರುತ್ತದೆ. ಸಂಗಾತಿಯ ಒಪ್ಪಿಗೆಯಿಲ್ಲದೆ ಅವರ ಫೋನ್ ಮುಟ್ಟುವುದು ಕೂಡ ತಪ್ಪು ಎಂಬುದು ನೆನಪಿರಲಿ.

ಭಾರತೀಯ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗೌಪ್ಯತೆಯ ಮೂಲಭೂತ ಹಕ್ಕನ್ನು (Right to Privacy) ನೀಡಿದೆ. ಸಂವಿಧಾನದ ವಿಧಿ 21ರ (Article 21) ಅಡಿಯಲ್ಲಿ ಬರುವ ಈ ಹಕ್ಕು, ಮದುವೆಯಾದ ತಕ್ಷಣವೇ ಕೊನೆಗೊಳ್ಳುವುದಿಲ್ಲ. ಗಂಡನಾಗಲಿ ಅಥವಾ ಹೆಂಡತಿಯಾಗಲಿ, ಸಂಗಾತಿಯ ಅನುಮತಿ ಇಲ್ಲದೆ ಅವರ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಅವರ ವಾಟ್ಸಾಪ್ ಮೆಸೇಜ್‌ಗಳು, ಇಮೇಲ್‌ಗಳು ಅಥವಾ ಗ್ಯಾಲರಿಯಲ್ಲಿರುವ ಫೋಟೋಗಳನ್ನು ಕದ್ದು ನೋಡುವುದು ನೇರವಾಗಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಇನ್ನು, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆಗಳ ಮೇಲೆ ಕಣ್ಣಿಡಲು ಸಂಗಾತಿಯನ್ನು ಪೀಡಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೆ, ಯಾವುದೇ ವ್ಯಕ್ತಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಯ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳುವಂತೆ ಸಂಗಾತಿಯನ್ನು ಒತ್ತಾಯಿಸುವುದು, ಬ್ಲ್ಯಾಕ್‌ಮೇಲ್ ಮಾಡುವುದು ಅಥವಾ ಬಲವಂತಪಡಿಸುವುದು ಕಾನೂನುಬಾಹಿರ ಚಟುವಟಿಕೆಯಾಗಿದೆ.

ದಾಂಪತ್ಯದಲ್ಲಿ ಸಂಶಯದ ಬಲೆ ಹೆಣೆಯುವ ಮುನ್ನ ಕಾನೂನಿನ ಈ ನಿಯಮಗಳನ್ನು ಅರಿತುಕೊಳ್ಳುವುದು ಒಳಿತು. ಮೊಬೈಲ್ ಪ್ರೈವೆಸಿಗೆ ಗೌರವ ನೀಡುವುದು ಸಂವಿಧಾನದ ಆಶಯ ಮಾತ್ರವಲ್ಲ, ಸಂಸಾರದ ನೆಮ್ಮದಿಗೂ ದಾರಿಯಾಗಿದೆ.

Vikram-1 Rocket Launched | ರಾಕೆಟ್ ‘ವಿಕ್ರಮ್-1’ ಇಂದು ಯಶಸ್ವಿ ಉಡಾವಣೆ: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಮೈಲುಗಲ್ಲು

TAGGED:#Husband #Wife #Phone #news #newsics
Share This Article
Facebook Twitter Copy Link Print
Previous Article Minister KBG in Action | ಬೆಂಗಳೂರಿನಲ್ಲಿ ಬೀಡಾಡಿ ವಾಹನಗಳ ವಿರುದ್ಧ ಮಹಾ ಕಾರ್ಯಾಚರಣೆ: ಸಚಿವ ಕೃಷ್ಣ ಬೈರೇಗೌಡ ಚಾಲನೆ
Next Article FIFA World Cup Ticket Price ಫಿಫಾ ವಿಶ್ವಕಪ್ ಫೈನಲ್ ಟಿಕೆಟ್‌ಗೆ ಭಾರಿ ಡಿಮ್ಯಾಂಡ್: ಒಂದೇ ಸೀಟಿಗೆ 22 ಕೋಟಿ ರೂ

Popular Posts

IND vs ENG Cricket 3ನೇ ಏಕದಿನ: ಲಾರ್ಡ್ಸ್‌ನಲ್ಲಿ ಸರಣಿ ಗೆಲುವಿನ ಹೋರಾಟ – ಭಾರತಕ್ಕೆ ಸವಾಲು, ಇಂಗ್ಲೆಂಡ್‌ಗೆ ಪ್ರತಿಷ್ಠೆ

3 Min Read

Benefits of Burning Natural Fragrant Ingredients at Home ಸುಗಂಧ ಬೀರುವ ಈ ವಸ್ತುಗಳನ್ನ ಸುಟ್ಟರೆ ಏನಾಗುತ್ತೆ? ತಿಳಿಯಿರಿ ಇದರ ಪ್ರಯೋಜನಗಳು

1 Min Read

Viparita Karani Yoga Pose ವಿಪರೀತ ಕರಣಿ ಆಸನದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ! ಆರೋಗ್ಯಕ್ಕೆ ಅದ್ಭುತ ಯೋಗಾಸನ

2 Min Read

Best Healthy Rotis  ಆರೋಗ್ಯಕ್ಕೆ ಬೆಸ್ಟ್ ಈ ರೊಟ್ಟಿಗಳು

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ದೇಶಪ್ರಮುಖ

Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

4 Min Read
ಪ್ರಮುಖCrimeದೇಶ

Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?