newsics.com | ನ್ಯೂಸಿಕ್ಸ್
Contents
ಬೆಂಗಳೂರು: 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರಗಳು ಕ್ರೀಡಾ ಲೋಕದಲ್ಲೇ ಹೊಸ ದಾಖಲೆ ಬರೆದಿವೆ. ಜುಲೈ 19ರಂದು ಅಮೆರಿಕದ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಮಹಾಸಮರವನ್ನು ವೀಕ್ಷಿಸಲು ಅಭಿಮಾನಿಗಳು ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಮತ್ತು ಯುವ ತಾರೆ ಲಾಮಿನ್ ಯಮಾಲ್ ಮುಖಾಮುಖಿಯಾಗುತ್ತಿರುವುದೇ ಈ ಭಾರಿ ಕ್ರೇಜ್‌ಗೆ ಕಾರಣವಾಗಿದೆ.
ಮರುಮಾರಾಟ ಮಾರುಕಟ್ಟೆಯ (Resale) ಪ್ರಮುಖ ಟಿಕೆಟ್ ದರಗಳು
- ಆರಂಭಿಕ ಹಂತದ ಟಿಕೆಟ್: ₹1.95 ಲಕ್ಷದಿಂದ ₹6.3 ಲಕ್ಷ
- ಸ್ಟ್ಯಾಂಡರ್ಡ್ ಟಾಪ್-ಟೈರ್ ಸೀಟ್: ₹10.58 ಲಕ್ಷ
- ಸರಾಸರಿ ರಿಸೇಲ್ ಬೆಲೆ: ₹10.90 ಲಕ್ಷ
- ವಿಐಪಿ ಬಾಕ್ಸ್ (12 ಜನರಿಗೆ): ₹9.62 ಕೋಟಿಗೂ ಅಧಿಕ
- ಗರಿಷ್ಠ ರಿಸೇಲ್ ಬೆಲೆ (ಒಂದು ಟಿಕೆಟ್‌ಗೆ): ಬರೋಬ್ಬರಿ ₹22.14 ಕೋಟಿ
22 ಕೋಟಿ ರೂಪಾಯಿ ಬೆಲೆ ಯಾಕೆ?
ಕ್ರೀಡಾಂಗಣದ ಲೋವರ್ ಡೆಕ್‌ನಲ್ಲಿರುವ 4 ಪ್ರೀಮಿಯಂ ಟಿಕೆಟ್‌ಗಳನ್ನು ತಲಾ ₹22.14 ಕೋಟಿ ದರದಲ್ಲಿ ಮರುಮಾರಾಟಕ್ಕೆ ಇಡಲಾಗಿದೆ. ಇವುಗಳ ಅಸಲಿ ಮೂಲ ಬೆಲೆ ಕೇವಲ ₹5.36 ಲಕ್ಷದಿಂದ ₹10.18 ಲಕ್ಷ ಮಾತ್ರ ಆಗಿತ್ತು. ಸದ್ಯ ಈ 4 ಟಿಕೆಟ್‌ಗಳ ಒಟ್ಟು ಮೊತ್ತ ಬರೋಬ್ಬರಿ ₹88 ಕೋಟಿ ರೂಪಾಯಿಯಾಗಿದೆ.
ಟಿಕೆಟ್ ದರ ಗಗನಕ್ಕೇರಲು ಮುಖ್ಯ ಕಾರಣಗಳು
- ಮೆಸ್ಸಿ ವಿದಾಯದ ಪಂದ್ಯ: 39 ವರ್ಷದ ಮೆಸ್ಸಿ ಆಡಲಿರುವ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಇದಾಗುವ ಸಾಧ್ಯತೆ ಇದೆ.
- ತಲೆಮಾರುಗಳ ಹೋರಾಟ: ಸಾರ್ವಕಾಲಿಕ ಶ್ರೇಷ್ಠ ಆಟಗಾರ ಮೆಸ್ಸಿ ಹಾಗೂ ಸ್ಪೇನ್‌ನ 19 ವರ್ಷದ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ನಡುವಿನ ಜಿದ್ದಾಜಿದ್ದಿ ಇದಾಗಿದೆ.
- ಫಿಫಾ ತಂತ್ರಜ್ಞಾನ: ಬೇಡಿಕೆ ಹೆಚ್ಚಾದಂತೆ ಟಿಕೆಟ್ ದರವನ್ನು ಆಟೋಮ್ಯಾಟಿಕ್ ಆಗಿ ಹೆಚ್ಚಿಸುವ ಫಿಫಾದ ಹೊಸ ತಂತ್ರಜ್ಞಾನದಿಂದಾಗಿ ರಿಸೇಲ್ ಮಾರ್ಕೆಟ್‌ನಲ್ಲಿ ಬೆಲೆ ವಿಪರೀತ ಹೆಚ್ಚಾಗಿದೆ.
Plastic Notes ದೇಶದಲ್ಲಿ ಚಲಾವಣೆಗೆ ಬರಲಿವೆ ಪ್ಲಾಸ್ಟಿಕ್ ನೋಟ್ಸ್! ಟೆಂಡರ್ ಪ್ರಕ್ರಿಯೆ ಆರಂಭ