newsics.com | ನ್ಯೂಸಿಕ್ಸ್
ಸ್ಮಾರ್ಟ್‌ಫೋನ್ 100% ಚಾರ್ಜ್ ಆದ ಮೇಲೂ ಚಾರ್ಜರ್ ಕನೆಕ್ಟ್ ಆಗಿದ್ದರೆ ಬ್ಯಾಟರಿ ಏನಾಗಬಹುದು ಎಂಬ ಪ್ರಶ್ನೆ ಅನೇಕರಲ್ಲಿದೆ. ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿರುವ ಲಿಥಿಯಂ ಬ್ಯಾಟರಿಗಳು ಅತ್ಯಂತ ಬುದ್ಧಿವಂತ ತಂತ್ರಜ್ಞಾನವನ್ನು ಹೊಂದಿವೆ. ಫೋನ್ ಫುಲ್ ಚಾರ್ಜ್ ಆದ ತಕ್ಷಣ ಅದರಲ್ಲಿರುವ ವಿಶೇಷ ಸರ್ಕ್ಯೂಟ್ ಮುಖ್ಯ ವಿದ್ಯುತ್ ಹರಿವನ್ನು ತಾನಾಗಿಯೇ ಕಡಿತಗೊಳಿಸುತ್ತದೆ. ಹೀಗಾಗಿ ಓವರ್‌ಚಾರ್ಜ್ ಆಗಿ ಬ್ಯಾಟರಿ ಬ್ಲಾಸ್ಟ್ ಆಗುವ ಭಯ ಇರುವುದಿಲ್ಲ.
ಹೌದು, ಫೋನ್ ಆನ್ ಇದ್ದಾಗ ಬ್ಯಾಕ್‌ಗ್ರೌಂಡ್ ಆ್ಯಪ್‌ಗಳು ಹಾಗೂ ನೆಟ್‌ವರ್ಕ್‌ನಿಂದಾಗಿ ಬ್ಯಾಟರಿ ಶೇಕಡಾ 100 ರಿಂದ 99 ಕ್ಕೆ ಇಳಿಯುತ್ತದೆ. ಈ ವೇಳೆ ಚಾರ್ಜರ್‌ನಿಂದ ಅತ್ಯಂತ ಕಡಿಮೆ ಪ್ರಮಾಣದ ವಿದ್ಯುತ್ ಪಡೆದು ಫೋನ್ ಮತ್ತೆ 100% ತಲುಪುತ್ತದೆ. ಇದನ್ನು ‘ಟ್ರಿಕಲ್ ಚಾರ್ಜಿಂಗ್‘ ಎನ್ನಲಾಗುತ್ತದೆ. ಅಲ್ಲದೆ, ಬ್ಯಾಟರಿಯ ಸುರಕ್ಷತೆಗಾಗಿ ಫೋನ್ 80% ತಲುಪಿದ ಬಳಿಕ ಚಾರ್ಜಿಂಗ್ ವೇಗವನ್ನು ತಾನಾಗಿಯೇ ಸ್ಲೋ ಮಾಡಿಕೊಳ್ಳುತ್ತದೆ.
ಬ್ಯಾಟರಿ ಹೆಚ್ಚಿಸಲು ಸರಳ ಟಿಪ್ಸ್
- 20% – 80% ನಿಯಮ: ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಫೋನ್ ಚಾರ್ಜ್ ಅನ್ನು ಯಾವಾಗಲೂ ಶೇಕಡಾ 20 ರಿಂದ 80 ರ ನಡುವೆ ಇಡುವುದು ಒಳ್ಳೆಯದು.
- ನೈಟ್ ಚಾರ್ಜಿಂಗ್ ಓಕೆ: ಇಂದಿನ ಫೋನ್‌ಗಳಲ್ಲಿ ಆಟೋಮ್ಯಾಟಿಕ್ ಪವರ್ ಕಟ್ ವ್ಯವಸ್ಥೆ ಇರುವುದರಿಂದ ರಾತ್ರಿ ಪೂರ್ತಿ ಚಾರ್ಜ್‌ಗೆ ಹಾಕಿದರೂ ಬ್ಯಾಟರಿಗೆ ದೊಡ್ಡ ಹಾನಿಯಾಗುವುದಿಲ್ಲ.
Mini Stroke ನಿಮ್ಮ ಮೆದುಳು ನೀಡುವ ಈ ‘ಮಿನಿ’ ವಾರ್ನಿಂಗ್ ನಿರ್ಲಕ್ಷಿಸಬೇಡಿ; ಪಾರ್ಶ್ವವಾಯು ತಡೆಯಲು ತಕ್ಷಣ ಹೀಗೆ ಮಾಡಿ