newsics.com | ನ್ಯೂಸಿಕ್ಸ್
ಆಲೂಗಡ್ಡೆ ನಮ್ಮ ಅಡುಗೆ ಮನೆಯಲ್ಲಿ ದಿನಾ ಬಳಸುವ ಪ್ರಮುಖ ತರಕಾರಿ. ಆದರೆ ಕೆಲವೊಮ್ಮೆ ಮನೆಯಲ್ಲಿಟ್ಟ ಆಲೂಗಡ್ಡೆ ಹಸಿರು ಬಣ್ಣಕ್ಕೆ ತಿರುಗುವುದನ್ನು ಅಥವಾ ಮೊಳಕೆ ಬರುವುದನ್ನು ನಾವು ನೋಡುತ್ತೇವೆ. ಇದನ್ನು ಸಾಮಾನ್ಯ ಬಣ್ಣ ಬದಲಾವಣೆ ಎಂದು ಅಡುಗೆಗೆ ಬಳಸಿದರೆ ಆರೋಗ್ಯ ಕೆಡುವುದು ಗ್ಯಾರಂಟಿ. ಏಕೆಂದರೆ ಹಸಿರು ಆಲೂಗಡ್ಡೆಯಲ್ಲಿ ‘ಸೋಲನೈನ್’ ಎಂಬ ವಿಷಕಾರಿ ಅಂಶ ಹೆಚ್ಚಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಹಸಿರು ಆಲೂಗಡ್ಡೆ ತಿಂದರೆ ಏನಾಗುತ್ತೆ?
ಸೋಲನೈನ್ ಅಂಶವಿರುವ ಆಲೂಗಡ್ಡೆ ಸೇವಿಸಿದರೆ ಈ ಕೆಳಗಿನ ತೊಂದರೆಗಳು ಕಾಣಿಸಿಕೊಳ್ಳಬಹುದು.
- ಹೊಟ್ಟೆನೋವು, ವಾಂತಿ ಮತ್ತು ವಾಕರಿಕೆ
- ಅತಿಸಾರ (ಭೇದಿ) ಮತ್ತು ತೀವ್ರ ಸುಸ್ತು
- ತಲೆಸುತ್ತು ಹಾಗೂ ತಲೆನೋವು
ಬಳಸಬಹುದೇ ಅಥವಾ ಬೇಡವೇ?
- ಆಲೂಗಡ್ಡೆಯ ಯಾವುದಾದರೂ ಒಂದು ಸಣ್ಣ ಭಾಗ ಮಾತ್ರ ಹಸಿರಾಗಿದ್ದರೆ, ಆ ಭಾಗವನ್ನು ದಪ್ಪವಾಗಿ ಕತ್ತರಿಸಿ ತೆಗೆದು ಉಳಿದ ಭಾಗವನ್ನು ಬಳಸಬಹುದು.
- ಆದರೆ ಇಡೀ ಆಲೂಗಡ್ಡೆ ಹಸಿರಾಗಿದ್ದರೆ, ಹೆಚ್ಚು ಮೊಳಕೆ ಬಂದಿದ್ದರೆ ಅಥವಾ ಸುಕ್ಕುಗಟ್ಟಿ ಮೆತ್ತಗಾಗಿದ್ದರೆ ಅದನ್ನು ಬಳಸದೆ ಬಿಸಾಡುವುದು ಒಳ್ಳೆಯದು.
ಆಲೂಗಡ್ಡೆ ಹಾಳಾಗದಂತೆ ಇಡಲು ಸರಳ ಟಿಪ್ಸ್
- ಆಲೂಗಡ್ಡೆಯನ್ನು ನೇರ ಸೂರ್ಯನ ಬೆಳಕು ಬೀಳದ ಕತ್ತಲೆ ಮತ್ತು ತಂಪಾದ ಜಾಗದಲ್ಲಿ ಸಂಗ್ರಹಿಸಿ. ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಒಟ್ಟಿಗೆ ಇಟ್ಟರೆ ಆಲೂಗಡ್ಡೆ ಬೇಗನೆ ಕೊಳೆಯುತ್ತದೆ. ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರ ನೈಸರ್ಗಿಕ ರುಚಿ ಮತ್ತು ಗುಣಮಟ್ಟ ಹಾಳಾಗುತ್ತದೆ. ಆದ್ದರಿಂದ ಗಾಳಿಯಾಡುವ ಬುಟ್ಟಿಯಲ್ಲಿ ಹೊರಗಡೆ ಇಡಿ.
Mini Stroke ನಿಮ್ಮ ಮೆದುಳು ನೀಡುವ ಈ ‘ಮಿನಿ’ ವಾರ್ನಿಂಗ್ ನಿರ್ಲಕ್ಷಿಸಬೇಡಿ; ಪಾರ್ಶ್ವವಾಯು ತಡೆಯಲು ತಕ್ಷಣ ಹೀಗೆ ಮಾಡಿ