Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Landslide Alert ಭೂಕುಸಿತ ಭೀತಿ; ಮನೆ ಖಾಲಿ ಮಾಡಲು ನಿರಾಕರಿಸಿದ ನಿವಾಸಿಗಳು, ಬದಲಿ ಜಾಗಕ್ಕೆ ಪಟ್ಟು
ಪ್ರಮುಖಕರ್ನಾಟಕ

Landslide Alert ಭೂಕುಸಿತ ಭೀತಿ; ಮನೆ ಖಾಲಿ ಮಾಡಲು ನಿರಾಕರಿಸಿದ ನಿವಾಸಿಗಳು, ಬದಲಿ ಜಾಗಕ್ಕೆ ಪಟ್ಟು

Share
1 Min Read
SHARE

newsics.com | ನ್ಯೂಸಿಕ್ಸ್

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ಬಾರಿ ಭೀಕರ ಭೂಕುಸಿತದ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ 16 ಅಪಾಯಕಾರಿ ಸ್ಥಳಗಳನ್ನು ಗುರುತಿಸಿದೆ. ಅತಿ ಹೆಚ್ಚು ಮಳೆಯಾಗುವ ಸಕಲೇಶಪುರ ತಾಲೂಕಿನಲ್ಲಿ 16 ಭೂಕುಸಿತ ಸಂಭವನೀಯ ಪ್ರದೇಶಗಳು ಹಾಗೂ 4 ಪ್ರವಾಹ ಪೀಡಿತ ಜಾಗಗಳನ್ನು ಪತ್ತೆಹಚ್ಚಲಾಗಿದ್ದು, ಅಲ್ಲಿನ ನಿವಾಸಿಗಳಿಗೆ ತಕ್ಷಣ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಬದಲಿ ವ್ಯವಸ್ಥೆ ಮಾಡದ ಹೊರತು ಜಾಗ ಬಿಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಅಪಾಯಕಾರಿ ಎಂದು ಗುರುತಿಸಲಾಗಿರುವ ಈ ಪ್ರದೇಶಗಳಲ್ಲಿ ಕಳೆದ 50 ವರ್ಷಗಳಿಂದ ಹತ್ತಾರು ಕುಟುಂಬಗಳು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿವೆ. ಈಗ ಮಳೆಗಾಲದ ಸುರಕ್ಷತೆಯ ದೃಷ್ಟಿಯಿಂದ ತಾಲೂಕು ಆಡಳಿತವು ದಿಢೀರ್ ನೋಟಿಸ್ ನೀಡಿ ಜಾಗ ಖಾಲಿ ಮಾಡಲು ಹೇಳಿರುವುದು ನಿವಾಸಿಗಳ ನೆಮ್ಮದಿ ಕೆಡಿಸಿದೆ.

“ನಮಗೆ ಸರ್ಕಾರವೇ ಬದಲಿ ಜಾಗ ನೀಡಬೇಕು ಇಲ್ಲವೇ ಬಾಡಿಗೆ ಹಣ ಭರಿಸಬೇಕು. ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಕೇವಲ ಸರ್ಕಾರಿ ಜಾಗ ಎಂಬ ಕಾರಣಕ್ಕೆ ನಮ್ಮನ್ನು ಒಕ್ಕಲೆಬ್ಬಿಸಿದರೆ, ಪ್ರಾಣ ಹೋದರೂ ನಾವು ಮನೆ ಖಾಲಿ ಮಾಡುವುದಿಲ್ಲ” ಎಂದು ನಿವಾಸಿಗಳು ಆಡಳಿತದ ವಿರುದ್ಧ ಪಟ್ಟು ಹಿಡಿದಿದ್ದಾರೆ.

ಶಾಸಕ ಸಿಮೆಂಟ್ ಮಂಜು ಆಕ್ರೋಶ

ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದಂತೆ ಸಕಲೇಶಪುರ ತಾಲೂಕಿನಲ್ಲಿ ಗುಡ್ಡ ಕುಸಿತ ಮತ್ತು ಪ್ರವಾಹ ಸಾಮಾನ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಅವರು ಮಳೆಗಾಲದಲ್ಲಿ ಸಂಭವಿಸಬಹುದಾದ ಸಾವು-ನೋವುಗಳನ್ನು ತಡೆಯಲು ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಮನೆ ಕಳೆದುಕೊಳ್ಳುವ ಬಡ ಕುಟುಂಬಗಳಿಗೆ ಸೂಕ್ತ ಪರಿಹಾರ ಧನ ಹಾಗೂ ಬದಲಿ ಜಾಗ ನೀಡಿ ಗೌರವಯುತವಾಗಿ ಸ್ಥಳಾಂತರ ಮಾಡಬೇಕೆಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಪ್ರತಿ ಮಳೆಗಾಲದಲ್ಲೂ ಜೀವ ಭಯದಲ್ಲೇ ದಿನದೂಡುವ ಸಕಲೇಶಪುರದ ಬೆಟ್ಟದ ತಪ್ಪಲಿನ ಜನರಿಗೆ, ತಾಲೂಕು ಆಡಳಿತದ ಈ ದಿಢೀರ್ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಇನ್ನಾದರೂ ಸೂಕ್ತ ಕ್ರಮ ಕೈಗೊಂಡು ಇವರಿಗೆ ಪುನರ್ವಸತಿ ಕಲ್ಪಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

 

FIFA World Cup Ticket Price ಫಿಫಾ ವಿಶ್ವಕಪ್ ಫೈನಲ್ ಟಿಕೆಟ್‌ಗೆ ಭಾರಿ ಡಿಮ್ಯಾಂಡ್: ಒಂದೇ ಸೀಟಿಗೆ 22 ಕೋಟಿ ರೂ

TAGGED:#Hasan #Sakleshpur #Landslide #news #newsics
Share This Article
Facebook Twitter Copy Link Print
Previous Article FIFA World Cup Ticket Price ಫಿಫಾ ವಿಶ್ವಕಪ್ ಫೈನಲ್ ಟಿಕೆಟ್‌ಗೆ ಭಾರಿ ಡಿಮ್ಯಾಂಡ್: ಒಂದೇ ಸೀಟಿಗೆ 22 ಕೋಟಿ ರೂ
Next Article Crime Case ಭೀಕರ ಕೃತ್ಯ: ಮಹಿಳೆಯನ್ನು ಕೊಂದ ಬಳಿಕ ಶವದ ಮೇಲೆ ಅತ್ಯಾಚಾರವೆಸಗಿದ ವಿಕೃತ ಕಾಮಿ ಬಂಧನ

Popular Posts

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read

Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

4 Min Read

Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

1 Min Read

Smartphone Battery SafetyTips ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್‌ಗೆ ಹಾಕಿದ್ರೂ ಬ್ಯಾಟರಿ ಏನೂ ಆಗಲ್ವಾ? ಇಲ್ಲಿದೆ ನೋಡಿ ಇದರ ಹಿಂದಿರೋ ರಹಸ್ಯ

1 Min Read

You Might Also Like

ಪ್ರಮುಖಆರೋಗ್ಯ

Health Tips ಆಲೂಗಡ್ಡೆ ಹಸಿರಾಗಿದ್ದರೆ ಅಡುಗೆಗೆ ಬಳಸಬೇಡಿ; ಅದರಲ್ಲಿರತ್ತೆ ಡೇಂಜರಸ್ ವಿಷಕಾರಿ ಅಂಶ

1 Min Read
ಪ್ರಮುಖಆರೋಗ್ಯ

Mini Stroke ನಿಮ್ಮ ಮೆದುಳು ನೀಡುವ ಈ ‘ಮಿನಿ’ ವಾರ್ನಿಂಗ್ ನಿರ್ಲಕ್ಷಿಸಬೇಡಿ; ಪಾರ್ಶ್ವವಾಯು ತಡೆಯಲು ತಕ್ಷಣ ಹೀಗೆ ಮಾಡಿ

1 Min Read
ಪ್ರಮುಖದೇಶಮನರಂಜನೆ

72 National Film Awards ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳದ್ದೇ ಹವಾ; ಕನ್ನಡದ ಕೃತಿಗೆ ಒಲಿದ ಅತ್ಯುನ್ನತ ಗೌರವ

2 Min Read
ಪ್ರಮುಖಲೈಫ್‌ಸ್ಟೈಲ್

Helmet Safety ಇ-ಕಾಮರ್ಸ್‌ನಲ್ಲಿ ಹೆಲ್ಮೆಟ್ ಆರ್ಡರ್ ಮಾಡುವ ಮುನ್ನ ಎಚ್ಚರ; ಕೇವಲ ಡಿಸ್ಕೌಂಟ್‌ಗೆ ಮರುಳಾದರೆ ಜೀವಕ್ಕೆ ಕಂಟಕ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?