Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO ಇಂದು ಚತುರ್ಗ್ರಾಹಿ, ಲಕ್ಷ್ಮೀನಾರಾಯಣ, ಬುಧಾದಿತ್ಯ, ವ್ಯತೀಪಾತ, ಹರ್ಷಣ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಅನುಕೂಲ
ಈ ದಿನಜ್ಯೋತಿಷ್ಯಪಂಚಾಂಗಪ್ರಮುಖ

ASTRO ಇಂದು ಚತುರ್ಗ್ರಾಹಿ, ಲಕ್ಷ್ಮೀನಾರಾಯಣ, ಬುಧಾದಿತ್ಯ, ವ್ಯತೀಪಾತ, ಹರ್ಷಣ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಅನುಕೂಲ

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇಂದು ಶನಿವಾರ(ಜ.17), ಚತುರ್ಗ್ರಾಹಿ ಯೋಗ, ಲಕ್ಷ್ಮೀನಾರಾಯಣ ಯೋಗ, ಬುಧಾದಿತ್ಯ ಯೋಗ, ವ್ಯತೀಪಾತ ಯೋಗ, ಹರ್ಷಣ ಯೋಗದ ಜತೆ ಅನೇಕ ಶುಭ ಯೋಗಗಳು ರೂಪುಗೊಂಡಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಕೆಲವು ರಾಶಿಗಳ ಜನರು ಈ ಶುಭ ಯೋಗಗಳ ಲಾಭ ಪಡೆಯಲಿದ್ದಾರೆ.

ವೃಷಭ ರಾಶಿಗೆ ಸೇರಿದ ಜನರಿಗೆ ಈ ದಿನ ಬಹಳ ಉತ್ತಮವಾಗಿರುವುದು. ಅದೃಷ್ಟದ ಬೆಂಬಲದಿಂದ ಅಪಾರ ಲಾಭ ದೊರಕುವ ಸಂಭವವಿದೆ. ಕಲೆ ಹಾಗೂ ನಿಮ್ಮ ಕೆಲಸದ ಶೈಲಿಯಿಂದ ಜೀವನದ ವಿಭಿನ್ನ ಕ್ಷೇತ್ರಗಳಿಂದ ಲಾಭವನ್ನು ಗಳಿಸುವಿರಿ. ವ್ಯಾಪಾರ ಮಾಡುವ ಜನರಿಗೆ ಆದಾಯದಲ್ಲಿ ವೃದ್ದಿಯಾಗುವುದು. ನಿಮಗೆ ಅನೇಕ ಮಾರ್ಗಗಳಿಂದ ಧನ ಲಾಭ ದೊರಕುವ ಯೋಗವಿದೆ. ಕೆಲಸವನ್ನು ಮಾಡುವ ವೃಷಭ ರಾಶಿಗೆ ಸೇರಿದ ಜನರಿಗೆ ಕೆಲಸದಲ್ಲಿ ಅನುಕೂಲಕರ ಸ್ಥಿತಿ ನಿರ್ಮಾಣಗೊಳ್ಳುವುದು. ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ಸಂತೋಷಮಯವಾದ ಕ್ಷಣಗಳನ್ನು ಕಳೆಯುವುದರೊಂದಿಗೆ ಅನುಕೂಲಕರ ವಾತಾವರಣವಿರುವುದು. ನಿಮ್ಮ ಅಕ್ಕಪಕ್ಕದ ಮನೆಯವರೊಂದಿಗೆ ಉತ್ತಮ ಸಂಬಂಧ ಹೊಂದುವಿರಿ ಮತ್ತು ಅವರ ಸಂಪೂರ್ಣ ಬೆಂಬಲ ಗಳಿಸುವಿರಿ. ಪ್ರೀತಿಯ ಜೀವನದಲ್ಲಿ ಉತ್ಸಾಹ ಹೆಚ್ಚಾಗುವುದು ಮತ್ತು ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯುವಿರಿ.

ಕರ್ಕಾಟಕ ರಾಶಿಗೆ ಸೇರಿದ ಜನರಿಗೆ ಶುಭ ಮತ್ತು ಲಾಭದಾಯಕ ದಿನವಾಗಿರುವುದು. ಅದೃಷ್ಟದ ಬೆಂಬಲದಿಂದಾಗಿ ಸಾಕಷ್ಟು ಸಂತೋಷವನ್ನು ಹೊಂದುವಿರಿ. ಶಿವನ ಕೃಪೆಯಿಂದ ನಿಮಗೆ ಅಪಾರ ಲಾಭ ದೊರಕುವುದು. ವ್ಯಾಪಾರದಲ್ಲಿ ಲಾಭದಾಯಕ ಅವಕಾಶಗಳ ಪ್ರಾಪ್ತಿಯಾಗಲಿದೆ. ವಾಹನವನ್ನು ಖರೀದಿಸಬೇಕೆಂದು ಪ್ರಯತ್ನಪಡುತ್ತಿರುವ ಸೇರಿದ ಜನರಿಗೆ ಶುಭ ಸುದ್ದಿ ದೊರಕಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಈ ಮೊದಲೇ ಮಾಡಿದಂತಹ ಪ್ರಯತ್ನಗಳಿಂದ ಹಾಗೂ ಕೆಲಸಗಳಿಂದ ಹೆಚ್ಚಿನ ಪ್ರಯೋಜನ ಪಡೆಯುವಿರಿ. ಕೆಲಸಕ್ಕೆ ಅನುಕೂಲಕರ ದಿನವಾಗಿರುವುದು. ಸಹೋದ್ಯೋಗಿಗಳೊಂದಿಗೆ ಹಿರಿಯ ಅಧಿಕಾರಿಗಳ ಬೆಂಬಲವನ್ನು ಸಹ ಪಡೆದುಕೊಳ್ಳುವಿರಿ. ಆಸ್ತಿ ಮತ್ತು ಗ್ರಹ ನಿರ್ಮಾಣಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವ ಜನರಿಗೆ ಅಪಾರ ಲಾಭ ದೊರಕುವುದು. ಸಾಮಾಜಿಕ ಪ್ರತಿಷ್ಠೆಯಲ್ಲಿ ವೃದ್ದಿಯಾಗಲಿದೆ. ನಿಮ್ಮ ಆಪ್ತ ಸಂಬಂಧಿಕರನ್ನು ಭೇಟಿಯಾಗುವ ಅವಕಾಶ ಪಡೆದುಕೊಳ್ಳುವಿರಿ. ವೈವಾಹಿಕ ಜೀವನ ಸುಖಮಯವಾಗಿರುವುದು.

ಕನ್ಯಾ ರಾಶಿಗೆ ಸೇರಿದ ಜನರಿಗೆ ಆನಂದಮಯವಾದ ದಿನವಾಗಿರುವುದು. ನಿಮ್ಮ ಮನಸ್ಸಿನ ದುಃಖಗಳೆಲ್ಲ ದೂರವಾಗಿ ಅದೃಷ್ಟದ ಬೆಂಬಲದಿಂದ ಲಾಭ ಗಳಿಸುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಅನುಭವ ಮತ್ತು ಕೆಲಸವನ್ನು ಮಾಡುವ ಶೈಲಿಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ ಮತ್ತು ಅಧಿಕಾರಿಗಳ ಪ್ರೋತ್ಸಾಹ ಕೂಡ ದೊರಕುವುದು. ಅದೃಷ್ಟದ ಬೆಂಬಲದಿಂದಾಗಿ ನಿಮ್ಮ ಸುಖ ಸಮೃದ್ಧಿಯಲ್ಲಿ ವೃದ್ಧಿ ಆಗಲಿದೆ. ಹೊಸ ಯೋಜನೆಗಳನ್ನು ಶುರು ಮಾಡಲು ಇಂದು ಅನುಕೂಲಕರ ದಿನವಾಗಿರುವುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಸ್ನೇಹಿತರು ಮತ್ತು ಆಪ್ತ ಸಂಬಂಧಿಕರ ಸಂಪೂರ್ಣ ಬೆಂಬಲ ಪಡೆಯುವಿರಿ. ನಿಮ್ಮ ಸಂಗಾತಿಯೊಂದಿಗೆ ಹೊರಗೆ ಸುತ್ತಾಡಲು ತೆರಳುವಿರಿ ಅಥವಾ ಪ್ರಯಾಣಿಸುವ ಯೋಜನೆಯನ್ನು ರೂಪಿಸುವಿರಿ. ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರಭಾವ ಹಾಗೂ ಖ್ಯಾತಿ ಹೆಚ್ಚಾಗುವುದು. ಜತೆಗೆ ಬುಧನ ಸಂಚಾರವು ನಿಮ್ಮ ಐದನೇ ಮನೆಯಲ್ಲಿ ಶುಕ್ರನೊಂದಿಗೆ ಸಂಭವಿಸಲಿದೆ. ಹಾಗಾಗಿ ನಿಮ್ಮ ಪ್ರೀತಿಯ ಜೀವನವು ಸಂತೋಷದಿಂದ ಕೂಡಿರಲಿದೆ. ಮಕ್ಕಳಿಂದ ನೀವು ಇನ್ನಷ್ಟು ಸಂತಸದಿಂದಿರುವಿರಿ.

ತುಲಾ ರಾಶಿಗೆ ಸೇರಿದ ಜನರಿಗೆ ಈ ದಿನ ಲಕ್ಷ್ಮೀನಾರಾಯಣ ಯೋಗ ಮತ್ತು ಚತುರ್ಗ್ರಾಹಿ ಯೋಗದಿಂದ ಅದೃಷ್ಟಶಾಲಿ ಆಗಿರುವುದು. ವೃತ್ತಿ, ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಗತಿಗಾಗಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರಯತ್ನಗಳಿಂದ ದೊಡ್ಡ ಲಾಭ ಗಳಿಸುವಿರಿ. ಕೆಲಸದ ಸ್ಥಳದಲ್ಲಿ ನೀವು ಬಲವಾದ ಸ್ಥಾನ ಹೊಂದುವಿರಿ ಮತ್ತು ಅಧಿಕಾರಿಗಳು ನಿಮ್ಮ ಸಾಮರ್ಥ್ಯ ಹೊಗಳುವರು. ನಿಮ್ಮ ಸುಖ, ಸಮೃದ್ಧಿಯಲ್ಲಿ ವೃದ್ಧಿಯಾಗುವುದು. ಹೆಚ್ಚಿನ ಮಾರ್ಗಗಳಿಂದ ಧನ ಲಾಭ ಪಡೆಯುವ ಯೋಗವಿದೆ. ನಿಮಗೆ ಉಡುಗೊರೆ ಮತ್ತು ಗೌರವ, ಖ್ಯಾತಿಯಲ್ಲಿ ವೃದ್ಧಿಯಾಗುವ ಸಂಭವ ಇರುವುದು. ಗಂಡನ ಮನೆಯವರ ಸಂಪೂರ್ಣ ಬೆಂಬಲ ಪಡೆಯುವುದರೊಂದಿಗೆ ಲಾಭ ಗಳಿಸುವ ಯೋಗ ನಿರ್ಮಾಣಗೊಳ್ಳುವುದು. ನಿಮಗೆ ಹೊಸ ವಾಹನ ಖರೀದಿಸುವ ಯೋಗವಿದೆ. ಕುಟುಂಬ ಜೀವನಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳಿಗೆ ನಾಳನೀವು ಪರಿಹಾರವನ್ನು ಹೊಂದುವಿರಿ.

ಮಕರ ರಾಶಿಗೆ ಸೇರಿದ ಜನರಿಗೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಲಾಭ ದೊರಕುವುದು. ಅದೃಷ್ಟದ ಬೆಂಬಲ ನಿಮಗೆ ದೊರಕುವುದರಿಂದ ಹಾಗೂ ಗ್ರಹಗಳ ಶುಭ ಸಂಯೋಗದಿಂದಾಗಿ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ಇಂದು ಉತ್ತಮ ದಿನವಾಗಿರುವುದು. ಪರಿಸ್ಥಿತಿ ನಿಮ್ಮ ಪರವಾಗಿರುವುದರಿಂದ ಕೆಲಸದಲ್ಲಿ ನಿಮ್ಮ ಎಲ್ಲಾ ರೀತಿಯ ಪ್ರಯತ್ನಗಳಿಗೆ ಹೆಚ್ಚಿನ ಪ್ರಯೋಜನ ಹಾಗೂ ಲಾಭ ಗಳಿಸುವಿರಿ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರಕುವುದು. ಕಲೆ ಮತ್ತು ನಿಮ್ಮ ಕೆಲಸದ ಶೈಲಿಯಿಂದ ನಿಮ್ಮದೇ ಆದಂತಹ ಹೆಸರನ್ನು ಗಳಿಸುವ ಸಾಧ್ಯತೆ ಇದೆ. ಮನೆಯಲ್ಲಿ ಸುಖಮಯವಾದ ವಾತಾವರಣ ಇರುವುದು. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ನೆಲೆಸಲಿದೆ. ಪ್ರೀತಿಯ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಹೊರಗೆ ಸುತ್ತಾಡಲು ತೆರಳುವ ಅವಕಾಶ ಗಳಿಸುವಿರಿ. ನಿಮಗೆ ಯಾವುದಾದರೂ ಶುಭ ಸುದ್ದಿ ಲಭಿಸುವುದರಿಂದ ಮನಸ್ಸು ಉತ್ಸಾಹದಿಂದ ಇರುವುದು.

GOOD MORNING Today’s Horoscope ಶುಭೋದಯ, ಇಂದಿನ ರಾಶಿ ಭವಿಷ್ಯ, 17-01-2026, ಶನಿವಾರ

TAGGED:ChaturgrahiHarshana Yoga: Huge benefits for people of these five zodiac signsLakshminarayanaToday
Share This Article
Facebook Twitter Copy Link Print
Previous Article ಲಕ್ಕುಂಡಿಯಲ್ಲಿ ಉತ್ಖನನ ಆರಂಭ – ನಿಧಿ ಸಿಕ್ಕರೆ ಗ್ರಾಮವೇ ಸ್ಥಳಾಂತರ ಸಾಧ್ಯತೆ
Next Article ಗ್ರೀನ್ ಲ್ಯಾಂಡ್ ಸ್ವಾಧೀನವನ್ನು ವಿರೋಧಿಸುವ ದೇಶಗಳ ಮೇಲೆ ಟ್ರಂಪ್‌ ಸುಂಕ ಬೆದರಿಕೆ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?