Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಚಿನ್ನದ ಬೆಲೆ ದಿಢೀರ್‌ 3,200 ರೂ. ಏರಿಕೆ! ಗ್ರಾಹಕರಿಗೆ ಬಿಗ್‌ ಶಾಕ್‌
Uncategorizedಕರ್ನಾಟಕಪ್ರಮುಖ

ಚಿನ್ನದ ಬೆಲೆ ದಿಢೀರ್‌ 3,200 ರೂ. ಏರಿಕೆ! ಗ್ರಾಹಕರಿಗೆ ಬಿಗ್‌ ಶಾಕ್‌

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ಚಿನ್ನದ ದರವು ಇಂದು ಮತ್ತೆ ಹೆಚ್ಚಳ ಕಂಡಿದೆ. ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎನ್ನಲಾಗುತ್ತಿದೆ. ಒಂದು ವರ್ಷದ (2024 ಡಿಸೆಂಬರ್) ಹಿಂದಷ್ಟೇ ಕೈಗೆಟುಕುವ ಬೆಲೆಯಲ್ಲಿದ್ದ ಚಿನ್ನದ ದರ ಈ ವರ್ಷದ ಡಿಸೆಂಬರ್‌ಗೆ ಸುಮಾರು ಶೇಕಡಾ 74 ರಿಂದ 77ರಷ್ಟು ದಾಖಲೆಯ ಭರ್ಜರಿ ಏರಿಕೆ ಕಂಡಿಇದು ಒಂದು ದೇಶದಲ್ಲೇ ವರ್ಷದ ಅತ್ಯಧಿಕ ಗರಿಷ್ಠ ಏರಿಕೆಯಾಗಿದೆ. ಬಂಗಾರ, ಬೆಳ್ಳಿಯ ದಿಢೀರ್ ಏರಿಕೆ ಕಾರಣಕ್ಕೆ ಗ್ರಾಹಕರು ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಹೂಡಿಕೆ ದೃಷ್ಟಿಯಿಂದ ಚಿನ್ನಕ್ಕೆ ಬೇಡಿಕೆ ಮುಂದುವರಿದಿದೆ. ಇನ್ನೂ ಇಂದು (ಡಿ.24) ಒಂದೇ ದಿನಕ್ಕೆ ಕೆಜಿ ಬೆಳ್ಳಿ ದರ ಬರೋಬ್ಬರಿ 10,000 ರೂ. ಏರಿಕೆ ಕಂಡಿದೆ.

ಚಿನ್ನ ಮಾತ್ರವಲ್ಲದೇ ಬೆಳ್ಳಿ ಮೇಲಿನ ಹೂಡಿಕೆಯಿಂದ ಹೂಡಿಕೆದಾರರು ಅತ್ಯಧಿಕ ಲಾಭ ಕಾಣುತ್ತಿದ್ದಾರೆ. ವಿದೇಶಿ ಸುಂಕ ನೀತಿ, ಯುಎಸ್ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ. ಅಂತಾರಾಷ್ಟ್ರೀಯ ಯುದ್ಧಗಳು ಹಾಗೂ ಒಂದಷ್ಟು ಜಾಗತಿಕ ಬದಲಾವಣೆಗಳ ಕಾರಣದಿಂದ ಈ ಎರಡು ಲೋಹಗಳ ಬೆಲೆ ಹೆಚ್ಚಾಗುತ್ತಿದೆ. ಈ ಏರುಗತಿಯು ಸದ್ಯಕ್ಕೆ ಇಳಿಮುಖ ಕಾಣುವುದು ಅನುಮಾನ ಎನ್ನಲಾಗಿದೆ.

ಒಂದೇ ವರ್ಷದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ
ಇಂದಿನ ಚಿನ್ನ ಬೆಳ್ಳಿ ದರ ನೋಡಿದ ಗ್ರಾಹಕರು ವರ್ಷದ ಹಿಂದೆಯೇ ಖರೀದಿಸಬೇಕಿತ್ತು ಎಂದುಕೊಂಡರೆ, ಹೂಡಿಕೆದಾರರು 2024 ಡಿಸೆಂಬರ್ ಮುನ್ನವೇ ಹೂಡಿಕೆ ಮಾಡಿದ್ದರೆ ಅಧಿಕ ಲಾಭ ಪಡೆಯುತ್ತಿದ್ದೆವು ಎಂದು ಈಗ ಯೋಚಿಸುತ್ತಿದ್ದಾರೆ. ಅವರು ಹೀಗೆ ಹೇಳಲು ಕಾರಣವಿದೆ. ಏಕೆಂದರೆ ಕೇವಲ 12 ತಿಂಗಳಲ್ಲಿ (2024 ಡಿಸೆಂಬರ್ ಟು ಡಿಸೆಂಬರ್ 2025) ಚಿನ್ನದ ದರವು ಸುಮಾರು 74 ರಿಂದ 77ರಷ್ಟು ಭರ್ಜರಿ ಏರಿಕೆ ಕಂಡಿದೆ.

ದೇಶದಲ್ಲೇ ಒಂದು ವರ್ಷದಲ್ಲಿ ಏರಿಕೆ ಆದ ಗರಿಷ್ಠ ಬೆಲೆ ಹೆಚ್ಚಾದ ಕೀರ್ತಿ ಈ ಲೋಹಕ್ಕೆ ಸೇರುತ್ತದೆ.
ಒಂದು ವರ್ಷದ ಹಿಂದೆ ಡಿಸೆಂಬರ್ 2024 ರಲ್ಲಿ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 70,400 ರೂ.ನಿಂದ 73,010 ರೂಪಾಯಿಗೆ ಸಿಗುತ್ತಿತ್ತು. ಆ ವರ್ಷ ಡಿಸೆಂಬರ್ 11 ಮತ್ತು 12 ರಂದು ಅತ್ಯಧಿಕ ಬೆಲೆ ದಾಖಲಾಗಿತ್ತು. ಅದೇ ವರ್ಷ 2024ರ ಡಿಸೆಂಬರ್ 20 ದರ ಮತ್ತೆ ಕುಸಿದಿತ್ತು. ಅದನ್ನು ಈ ವರ್ಷ 2025ರ ಡಿಸೆಂಬರ್‌ಗೆ ಹೋಲಿಸಿ ನೋಡಿದರೆ ಚಿನ್ನವು ಬೆಲೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಇತ್ತೀಚೆಗೆ ಬೆಳ್ಳಿ ದರವು ಹೆಚ್ಚಾಗುತ್ತಲೇ ಇದ್ದು, ಒಂದೇ ದಿನಕ್ಕೆ ಬೆಳ್ಳಿ ಒಂದು ಕೆಜಿಗೆ 5,000 ರಿಂದ 11,000 ರೂ.ವರೆಗೆ ಹೆಚ್ಚಾಗಿದ್ದು ಇದೆ.

ಈ ವರ್ಷ ನಾ ಮುಂದೆ, ತಾ ಮುಂದು ಎಂಬಂತೆ ಚಿನ್ನ- ಬೆಳ್ಳಿ ದರಗಳು ಗಗನಕ್ಕೇರುತ್ತಿವೆ. ಇವತ್ತು ಸಹ (ಡಿ.24ಕ್ಕೆ) ಬೆಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ.
ಇಂದು ಕೆಜಿ ಬೆಳ್ಳಿ ದರ 10,000 ರೂ. ಏರಿಕೆ
ಗ್ರಾಹಕರು ಇಂದು ಬೆಳ್ಳಿಯ ದರದಲ್ಲಿ ಭಾರೀ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದಾರೆ. 100 ಗ್ರಾಂ ಬೆಳ್ಳಿಗೆ 1000 ರೂಪಾಯಿ ಹಾಗೂ ಒಂದು ಕೆಜಿ ಬೆಳ್ಳಿಗೆ 10,000 ರೂಪಾಯಿ ಏರಿಕೆ ಕಂಡಿದೆ. ಕ್ರಮವಾಗಿ ಇಂದು ಬೆಳ್ಳಿ ದರವು 23,300 ರೂಪಾಯಿ ಹಾಗೂ 2,33,000 ರೂಪಾಯಿ ತಲುಪಿದೆ. ಈ ಮೂಲಕ ಚಿನ್ನದ ರೀತಿಯಲ್ಲಿ ಬೆಳ್ಳಿಯು ಜನರಿಗೆ ನಿರಂತರ ಶಾಕ್ ನೀಡುತ್ತಿದೆ.

ಕ್ರಿಸ್ಮಸ್ ದಿನಕ್ಕೂ ಮುನ್ನ ಚಿನ್ನ-ಬೆಳ್ಳಿ ದರ ಅಪ್ಡೇಟ್ಸ್
ಇಂದು ಬುಧವಾರ (ಡಿಸೆಂಬರ್ 24) 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 350 ರೂ. ಹೆಚ್ಚಾಗಿದ್ದು 1,27, 350 ರೂ.ತಲುಪಿದೆ. 24 ಕ್ಯಾರಟ್ ಬಂಗಾರದ ದರ 380 ರೂಪಾಯಿ ಏರಿಕೆ ಆಗುವ ಮೂಲಕ ದರವು 1,38, 930 ರೂಪಾಯಿ ತಲುಪಿದೆ.

ಒಂದೇ ವಯಸ್ಸನವರು ಮದುವೆಯಾಗೋದ್ರಿಂದ ಏನಾಗುತ್ತೆ ?

TAGGED:200! Big shock for consumersGold price suddenly increases by Rs 3
Share This Article
Facebook Twitter Copy Link Print
Previous Article ವಿಮಾನಯಾನಿಗಳಿಗೆ ಸಿಹಿ ಸುದ್ದಿ: ಇಲಾಖೆಯಿಂದ ಗ್ರೀನ್‌ ಸಿಗ್ನಲ್‌, ಏಪ್ರಿಲ್‌ನಲ್ಲಿ 6 ಹೊಸ ವಿಮಾನಗಳು ಬರಲಿವೆಯಂತೆ
Next Article ಮದ್ಯಪಾನ ‘ಲಿಮಿಟ್’ನಲ್ಲಿದ್ದರೂ ಡೇಂಜರ್: 28 ವರ್ಷದ ಯುವಕನ ಲಿವರ್ ಶೇ. 100ರಷ್ಟು ಡ್ಯಾಮೇಜ್!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?