Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಯಾದಗಿರಿ ಜಿಲ್ಲೆಯ ಏಟ ತಾಲೂಕಿನ ಕೆಂಭಾವಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರು ವಿದ್ಯಾರ್ಥಿನಿಯರೊಂದಿಗೆ ಅರೆಬೆತ್ತಲೆಯಾಗಿ ಸ್ನಾನ ಮಾಡಿ ಸುದ್ದಿಯಾಗಿದ್ದಾರೆ.
ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಿಂದ 9, 10ನೇ ತರಗತಿಯ 93 ವಿದ್ಯಾರ್ಥಿನಿಯರು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಮೂರು ದಿನದ ಪ್ರವಾಸದಲ್ಲಿ ಕರ್ನಾಟಕದ ಪ್ರೇಕ್ಷಣೀಯ ಸ್ಥಳ ವೀಕ್ಷಣೆ ಮಾಡಿದ್ದರು.
ಆದರೆ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋದ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಮುಜುಗರವನ್ನುಂಟುಮಾಡುವ ರೀತಿ ವರ್ತಿಸಿದ್ದಾರೆ. ವಿದ್ಯಾರ್ಥಿನಿಯರು ಸ್ನಾನ ಮಾಡ್ತಿದ್ದ ಸ್ವೀಮಿಂಗ್ ಪೂಲ್ ನಲ್ಲೇ ಶಿಕ್ಷಕರೂ ಅರೆಬೆತ್ತಲೆಯಾಗಿ ಸ್ನಾನ ಮಾಡಿದ್ದಾರೆ. ಅಲ್ಲದೇ ಅದೇ ಪೋಟೋ ವಿಡಿಯೋವನ್ನು ತಮ್ಮ ಸ್ಟೇಟಸ್‌ಗೆ ಹಾಕಿದ್ದಾರೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಶಿಕ್ಷಕರ ಈ ಘನಂದಾರಿ ಕೆಲಸದ ಪೋಟೋ, ವಿಡಿಯೋ ವೈರಲ್ ಆಗ್ತಾ ಇದ್ದಂತೆ ಶಿಕ್ಷಣಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕೂಡಲೇ ಈ ಬಗ್ಗೆ ವರದಿ ನೀಡುವಂತೆ ಡಿಡಿಪಿಐ ಸಿ.ಎಸ್. ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಲೆಗೆ ತೆರಳಿದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ನೀವು ಕ್ರಮ ಕೈಗೊಳ್ಳದೆ ಇದ್ದರೆ ನಾವೇ ಪೊಲೀಸ್ ಕೇಸ್ ದಾಖಲಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ರವಿ ಬೆಳಗೆರೆಯ ‘ಹೇಳಿ ಹೋಗು ಕಾರಣ’ ಪುಸ್ತಕ ಸುಟ್ಟಿದ್ದೇಕೆ? ಬರಹಗಾರ್ತಿ ಪೂರ್ಣಿಮಾ ಹೆಗಡೆ ಹೇಳಿದ್ದೇನು?
ಇನ್ಮುಂದೆ ಬೆಂಗಳೂರಲ್ಲಿ ಹಾರುವ ಟ್ಯಾಕ್ಸಿಗಳೂ ಸದ್ದು ಮಾಡಲಿವೆ! ಪರೀಕ್ಷಾರ್ಥ ಏರ್‌ಟ್ಯಾಕ್ಸಿ ಹಾರಾಟ