Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಟೇಸ್ಟ್ > Vidyarthi bhavan ವಿದ್ಯಾರ್ಥಿ ಭವನದ ದೋಸೆಗಿನ್ನು ಕಾಯಬೇಕಿಲ್ಲ, ಹೊರಗಡೆ‌ ನಿಲ್ಲುವುದೂ ಬೇಕಿಲ್ಲ… ಹೀಗೆ ಮಾಡಿ…
ಕರ್ನಾಟಕಟೇಸ್ಟ್ಪ್ರಮುಖಲೈಫ್‌ಸ್ಟೈಲ್

Vidyarthi bhavan ವಿದ್ಯಾರ್ಥಿ ಭವನದ ದೋಸೆಗಿನ್ನು ಕಾಯಬೇಕಿಲ್ಲ, ಹೊರಗಡೆ‌ ನಿಲ್ಲುವುದೂ ಬೇಕಿಲ್ಲ… ಹೀಗೆ ಮಾಡಿ…

Share
2 Min Read
SHARE

newsics.com

ಬೆಂಗಳೂರು: ಗಾಂಧಿ ಬಜಾರ್ ವಿದ್ಯಾರ್ಥಿ ಭವನದ ಎಂದಾಕ್ಷಣ ಗರಿ ಗರಿ ದೋಸೆ, ಫಿಲ್ಟರ್ ಕಾಫಿ ಕಣ್ ಮುಂದೆ ಬಂದು ಬಾಯಲ್ಲಿ ನೀರು ಬರುತ್ತದೆ. ಬಸವನಗುಡಿ, ಗಾಂಧಿ ಬಜಾರ್ ಕಡೆ ಹೋದವರು ವಿದ್ಯಾರ್ಥಿ ಭವನದ ದೋಸೆ ಸವಿಯಲು ಬಯಸುತ್ತಾರೆ.

ವಿದ್ಯಾರ್ಥಿ ಭವನ ಆರಂಭವಾಗಿದ್ದು 1943ರಲ್ಲಿ. ಇಂದಿಗೂ ಇಲ್ಲಿನ ದೋಸೆ, ಫಿಲ್ಟರ್ ಕಾಫಿ ಸೇರಿ ವಿವಿಧ ಖಾದ್ಯಗಳಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ವಿದ್ಯಾರ್ಥಿ ಭವನದ ದೋಸೆಯ ಚಿತ್ರ ಸದಾ ವೈರಲ್ ಆಗುತ್ತಿರುತ್ತದೆ. ಆದರೆ ಇದ್ದಕ್ಕಿದ್ದ ಹಾಗೆ ವಿದ್ಯಾರ್ಥಿ ಭವನಕ್ಕೆ ಹೋದರೆ ತಕ್ಷಣ ದೋಸೆ ಸಿಗುವುದಿಲ್ಲ. ಕಾಯುವುದು ಅನಿವಾರ್ಯ.

ಟೇಬಲ್ ಬುಕ್ ಮಾಡಿ:

ಈಗ ವಿದ್ಯಾರ್ಥಿ ಭವನ ಜನರ ಕಾಯುವ ಅವಧಿ ಕಡಿಮೆ ಮಾಡಲು ಹೊಸ ನಿಯಮ ಜಾರಿಗೊಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿವೆ.

ವಿದ್ಯಾರ್ಥಿ ಭವನ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿಯೊಂದನ್ನು ನೀಡಿದ್ದು, ಹೋಟೆಲ್‌ನಲ್ಲಿ ಶೇ.50ರಷ್ಟು ಸೀಟುಗಳನ್ನು ಕಾಯ್ದಿರಿಸುವ ನಿಯಮ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.

ನೇರವಾಗಿ ಹೋಟೆಲ್‌ಗೆ ಆಗಮಿಸುವ ಗ್ರಾಹಕರಿಗಾಗಿ ಇನ್ನು 50ರಷ್ಟು ಸೀಟುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದೆ.

ಹೊಸ ನಿಯಮದ ಪ್ರಕಾರ, ನೀವು ಇಂದು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡುವ ಆಲೋಚನೆಯಲ್ಲಿದ್ದರೆ 080-26677588 ಸಂಖ್ಯೆಗೆ ಕರೆ ಮಾಡಿ ಮುಂಚಿತವಾಗಿ ಟೇಬಲ್ ಬುಕ್ ಮಾಡಬೇಕು. ಇದರಿಂದಾಗಿ ನೀವು ಹೋಟೆಲ್‌ಗೆ ಆಗಮಿಸಿ ಕ್ಯೂ ನಿಲ್ಲುವುದು ತಪ್ಪಲಿದೆ. ನೀವು ಕರೆ ಮಾಡಿ ಟೇಬಲ್ ಬುಕ್ ಮಾಡಿದಾಗ ನಿಮಗೆ ಟೋಕನ್ ನಂಬರ್ ನೀಡಲಾಗುತ್ತದೆ. ವಿದ್ಯಾರ್ಥಿ ಭವನಕ್ಕೆ ಆಗಮಿಸಿದ ತಕ್ಷಣ ನೀವು ಟೋಕನ್ ಪಡೆಯಬಹುದು.

ವಿದ್ಯಾರ್ಥಿ ಭವನ ಶೇ 50ರಷ್ಟು ಸೀಟನ್ನು ಮುಂಚಿತವಾಗಿ ಬುಕ್ ಮಾಡಿದವರಿಗೆ ಮೀಸಲಿಟ್ಟುದ್ದು, ಟೋಕನ್ ಪಡೆದ ನೀವು ಕಾಯ್ದಿರಿಸಿದ ಟೇಬಲ್‌ನಲ್ಲಿ ಕುಳಿತು ಇಷ್ಟದ ಖಾದ್ಯ ಸವಿಯಬಹುದು.

ನೇರವಾಗಿ ಹೋಟೆಲ್‌ಗೆ ಬರುವ ಜನರಿಗಾಗಿಯೇ ಉಳಿದ ಶೇ.50ರಷ್ಟು ಸೀಟು ಮೀಸಲಿಟ್ಟಿದ್ದೇವೆ. ನೇರವಾಗಿ ಬರುವವರಿಗೆ ಸದಾ ಸ್ವಾಗತ. ಆದರೆ ನೀವು ಬಂದ ತಕ್ಷಣ ಟೇಬಲ್ ಸಿಗುವುದಿಲ್ಲ. ಕಾಯಬೇಕಿದೆ, ಅದರಲ್ಲೂ ವೀಕೆಂಡ್ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಕಾಯಬೇಕಾಗಬಹುದು.

ನೀವು ವಿದ್ಯಾರ್ಥಿ ಭವನಕ್ಕೆ ಬರುವ ಆಲೋಚನೆ ಇದ್ದರೆ ಮೊದಲೇ ಕರೆ ಮಾಡಿ ಟೇಬಲ್ ಬುಕ್ ಮಾಡಿ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಗಾಂಧಿ ಬಜಾರ್‌ಗೆ ಕುಟುಂಬದ ಜತೆ ಶಾಪಿಂಗ್‌ಗೆ ಹೋಗಿ ಹಲವು ಬಾರಿ ವಿದ್ಯಾರ್ಥಿ ಭವನದ ಮುಂದೆ ಕಾದಿದ್ದೇವೆ. ಈಗ ಟೇಬಲ್ ಬುಕ್ಕಿಂಗ್ ವ್ಯವಸ್ಥೆ ಮಾಡಿರುವುದು ಉತ್ತಮ ಎಂದು ಹಲವಾರು ಜನರು ಅಭಿಪ್ರಾಯಪಟ್ಟಿದ್ದಾರೆ.

ಜನರು ಬುಕ್ ಮಾಡಿದ ಸಮಯಕ್ಕೆ ಬರಲು ಸಾಧ್ಯವಾಗದಿದ್ದರೆ ಟೇಬಲ್ ಖಾಲಿ ಉಳಿದಿರುತ್ತದೆ. ಅದನ್ನು ವಿದ್ಯಾರ್ಥಿ ಭವನದ ಹೊರಗೆ ನೇರವಾಗಿ ಬಂದು ಕಾದು ನಿಂತವರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಹ ಜನರು ಸಲಹೆ ನೀಡಿದ್ದಾರೆ.

ವಿದ್ಯಾರ್ಥಿ ಭವನದ ಟೇಬಲ್ ಬುಕ್ ಮಾಡುವ ಹೊಸ ನಿಯಮದ ಕುರಿತು ಪರ ವಿರೋಧ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.

2025 ರ ಮೊದಲ ಚಂದ್ರ ಗ್ರಹಣ: ಯಾವ ರಾಶಿಗೆ ಶುಭ..?

Health Tips: ಸುಂದರ, ಕಾಂತಿಯುಕ್ತ ಚರ್ಮ ನಿಮ್ಮದಾಗಬೇಕೇ? ತಪ್ಪದೇ ಈ ರೀತಿ ಮಾಡಿ

Ananya nagalla ನಟಿಯ ಆ ಭಾಗದ ಬಗ್ಗೆ ಅಭಿಮಾನಿಯ ಬೋಲ್ಡ್‌ ಮಾತು- ನಟಿ ರಿಯಾಕ್ಷನ್ ಏನಿತ್ತು?

Karave Narayana Gowda ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕರವೇ ನಾರಾಯಣಗೌಡ ಕಿಡಿ

TAGGED:no need to stand outside... Do this...No need to wait for the dosa at the vidyarthi bhavan
Share This Article
Facebook Twitter Copy Link Print
Previous Article Today’s prediction ಶುಭ ದಿನ, ಇಂದಿನ ರಾಶಿ ಭವಿಷ್ಯ, 03-03-2025, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article session begins tomorrow: ಇಂದಿನಿಂದ ವಿಧಾನ ಮಂಡಲ ಅಧಿವೇಶನ : ಮಾ.7 ರಂದು ಬಜೆಟ್ ಮಂಡನೆ

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?