newsics.com
ರಾಮನಗರ: ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭಾನುವಾರ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಭಾರೀ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಚನ್ನಪಟ್ಟಣ ತಾಲೂಕಿನ ಕಣ್ವ ರಸ್ತೆ ಬಳಿ ಈ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಕಾರುಗಳು ಒಂದರ ಮೇಲೊಂದು ಏರಿ ನಿಂತ ದೃಶ್ಯ ಅಪಘಾತದ ಭೀಕರತೆಯನ್ನು ಹೇಳುತ್ತಿತ್ತು.
ಹೆದ್ದಾರಿಯಲ್ಲಿ ಸಿಬ್ಬಂದಿ ಬ್ಯಾರಿಕೇಡ್ ಹಾಕಿ ರಸ್ತೆ ಕ್ಲೀನ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಬ್ಯಾರಿಕೇಡ್ ಗಮನಿಸದೆ ಬಂದ ಕಾರು ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು, ಈ ವೇಳೆ ಹಿಂಬದಿಯಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಿನಿಮೀಯವಾಗಿದ್ದು, ಮುಂದೆ ನಿಂತಿದ್ದ ಕಾರಿನ ಕೆಳಗೆ ಹಿಂದಿನಿಂದ ಬಂದ ಕಾರು ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಗ್ಗೆ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Drone hunting eagles ಗಿಡುಗ, ಹದ್ದುಗಳಿಂದ ಡ್ರೋನ್ ಬೇಟೆ: ಪೊಲೀಸರಿಂದ ಪಕ್ಷಿಗಳಿಗೆ ವಿಶೇಷ ತರಬೇತಿ, ವಿಡಿಯೋ ನೋಡಿ
Relstionship ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಇದ್ದರೆ ಈ ರೀತಿ ಮಾಡಿ