newsics.com
ಬೆಂಗಳೂರು : ನಟಿ ಸಾನ್ಯಾ ಅಯ್ಯರ್ ದುಬೈನಲ್ಲಿ ಮಸ್ತಿ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುಟ್ಟಗೌರಿ ಸಾನ್ಯಾ ದುಬೈ ಡೇಸ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಮರಳುಗಾಡಿನಲ್ಲಿ ತಲೆಗೆ ಬಟ್ಟೆ ಕಟ್ಟಿಕೊಂಡು ಸನ್ ಗ್ಲಾಸ್ ಹಾಕಿಕೊಂಡು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ನಟಿ ಸಾನ್ಯಾ ಮಸ್ತ್ ಪೋಸ್ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಚೆಂದದ ಬ್ಯೂಟಿ ಅಂತ ಕಮೆಂಟ್ ಮಾಡ್ತಿದ್ದಾರೆ.
ಸೀರಿಯಲ್ ಮೂಲಕ ಜರ್ನಿ ಶುರು ಮಾಡಿದ ಸಾನ್ಯಾ, ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡು ಮನಸ್ಸು ಗೆದ್ದಿದ್ದರು. ಪುಟ್ಟಗೌರಿಯಲ್ಲಿ ಅದ್ಭುತವಾಗಿ ನಟಿಸಿದ್ದನ್ನು ಇನ್ನೂ ಜನ ಮರೆತಿಲ್ಲ. ಆ ಪುಟ್ಟಗೌರಿ ಸಾನ್ಯಾ ಅಯ್ಯರ್ ಬೋಲ್ಡ್ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.