newsics.com
ಈ ಪ್ರೀತಿ ಎಂಬುವುದು ಬರಿ ದೈಹಿಕ ಆಸಕ್ತಿಯಲ್ಲ, ಮನುಷ್ಯನನ್ನು ಸಮಾಜದ ಚೌಕಟ್ಟಿನೊಳಗೆ ತರುವ ವಿಷಯವೂ ಹೌದು.
ಆದ್ರೆ, ಸಾಮಾನ್ಯವಾಗಿ ಯಾವುದೇ ಸಂಬಂಧದಲ್ಲಿ ಅದರಲ್ಲಿಯೂ ಲವ್ ರಿಲೇಷನ್ ಶಿಪ್ನಲ್ಲಿ ಟೆನ್ಷನ್ ಇದ್ದೆ ಇರುತ್ತದೆ. ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಯಾವಾಗಲೂ ಅರ್ಥವಾಗುವುದಿಲ್ಲ. ನಿಮ್ಮ ಸಂಗಾತಿ ನಿಮ್ಮನ್ನು ನೋಯಿಸಿದಾಗ, ನಿಮ್ಮನ್ನು ಅಗೌರವಿಸಿದಾಗ ಇದು ನಿಮಗೆ ಸೆನ್ಸ್ ಆಗುತ್ತದೆ.
ರಿಲೇಷನ್ ಶಿಪ್ನಲ್ಲಿ ವೈಯಕ್ತಿಕ ಗಡಿಗಳನ್ನು ಹೊಂದಿರುವುದು ಬಹಳ ಮುಖ್ಯ. ನೀವು ರಾಜಿ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ನಿಮಗೆ ನಿಮ್ಮ ವೈಯಕ್ತಿಕ ಬಲ ಏನು ಎಂಬುವುದು ನಿಮಗೆ ತಿಳಿಯುತ್ತದೆ. ಹಾಗೆಯೇ ನಿಮ್ಮ ಸಂಗಾತಿಯ ವೈಯಕ್ತಿಕ ಗಡಿಗಳನ್ನು ಕೂಡ ಗೌರವಿಸಿ. ಅವರ ಮೇಲೆ ಅಧಿಕಾರ ಚಲಾಯಿಸಬೇಡಿ. ಸಂಗಾತಿಯು ನಿಮ್ಮನ್ನು ತಪ್ಪಾಗಿ ಅರ್ಥಮಾಡಿಕೊಂಡರೆ, ನೀವು ಸಂಬಂಧದಲ್ಲಿ ಎಡವಿದ್ದೀರಿ ಎಂದರ್ಥ. ನಿಮ್ಮನ್ನು ನಿರಂತರವಾಗಿ ಕೀಳು ದೃಷ್ಟಿಯಲ್ಲಿ ನೋಡುವ ವ್ಯಕ್ತಿಯ ಜೊತೆಗೆ ಸಂಬಂಧವನ್ನು ಹೊಂದಬೇಡಿ.
ಪ್ರೀತಿಯಲ್ಲಿ ಇದ್ದಾಗ ದೇಹದಲ್ಲಿ ಡೊಪೋಮೈನ್ ಎಂಬ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ, ಅಲ್ಲದೆ ಆ ಸಂಬಂಧದಲ್ಲಿ ಇರುವಂತೆ, ಆ ವ್ಯಕ್ತಿಯನ್ನು ಹೆಚ್ಚು ಪ್ರೀತಿ ಮಾಡುವಂತೆ ಉತ್ತೇಜಿಸುವ ಕಾರ್ಯವನ್ನು ಮೆದುಳು ಮಾಡುತ್ತದೆ. ಅಲ್ಲದೆ ಪ್ರೀತಿಯಲ್ಲಿನ ಅಪ್ಪುಗೆ, ಕಿಸ್ ಇಂಥ ಸ್ಪರ್ಶಗಳು ಕೂಡ ಮನುಷ್ಯನಿಗೆ ಖುಷಿ ನೀಡುತ್ತದೆ ಅಲ್ಲದೆ ಆ ವ್ಯಕ್ತಿ ಮತ್ತೆ ಮತ್ತೆ ಬೇಕು ಎಂದು ಬಯಸುವಂತೆ ಮಾಡುತ್ತದೆ. ಹೀಗಾಗಿ ಪ್ರೀತಿಯ ವ್ಯಕ್ತಿಯನ್ನು ನೋಡಿದಾಗ ಹೃದಯದ ಬಡಿತ ಹೆಚ್ಚಾಗುತ್ತದೆ.
ಇನ್ನು ಸೋಷಿಯಲ್ ಮೀಡಿಯಾ ಸಂಬಂಧದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತದೆ ಮೊದಲು ಈ ರಿತಿ ಇರಲಿಲ್ಲ, ಆದರೆ ಈಗ ಜನ ಸೋಷಿಯಲ್ ಮೀಡಿಯಾ, ಯು ಟ್ಯೂಬ್ ಅಂತ ಬ್ರೌಸ್ ಮಾಡ್ತಾರೆ, ಅಲ್ಲಿ ಕಾಣುವ ಜೋಡಿಗಳನ್ನು ತಮ್ಮ ಬದುಕಿನ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ನಿಜ ಜೀವನದಲ್ಲಿ ಹೇಗೆ ಇದ್ದಾರೆ ಎಂಬುವುದು ನಮಗೆ ಗೊತ್ತಿರುವುದಿಲ್ಲ, ಆದರೆ ಅವರು ನೀಡುವ ರೊಮ್ಯಾಂಟಿಕ್ ಗಿಫ್ಟ್ಸ್, ರೊಮ್ಯಾಂಟಿಕ್ ಡ್ಯಾನ್ಸ್ ಇವುಗಳನ್ನು ನೋಡಿ ತಮ್ಮ ಬದುಕು ಹಾಗೆ ಇಲ್ಲ ಎಂದು ಕೊರಗುವವರು ಹೆಚ್ಚಾಗಿದ್ದಾರೆ, ಈ ರೀತಿಯ ಹೋಲಿಕೆಯಿಂದಾಗಿ ತಮ್ಮ ಬದುಕಿನ ಖುಷಿ ಕಳೆದುಕೊಳ್ಳುತ್ತಿದ್ದಾರೆ. ಇದು ತುಂಬಾನೇ ಅಪಾಯಕಾರಿ. ನಿಮ್ಮ ಬದುಕನ್ನು ಇತರರ ಜೊತೆಗೆ ಹೋಲಿಕೆ ಮಾಡಲು ಹೋಗಲೇಬೇಡಿ.
ಲವ್ ಬ್ರೇಕ್‌ಅಪ್ ಆದರೆ, ವಿಚ್ಛೇದನವಾದರೆ, ಟಾಕ್ಸಿಕ್ ರಿಲೇಷನ್‌ಶಿಪ್‌ನಲ್ಲಿದ್ದರೆ ಜನರು ತಮ್ಮ ಆರೈಕೆ ಕಡೆಗೆ ಗಮನಹರಿಸುವುದು ಕಡಿಮೆ ಮಾಡುತ್ತಾರೆ. ತಮ್ಮ ಆರೈಕೆ, ಆಹಾರ ಸೇವನೆ, ಸ್ಟೈಲ್ ಯಾವುದರ ಕಡೆ ಗಮನಹರಿಸುವುದಿಲ್ಲ. ಸಂಬಂಧದಲ್ಲಿ ಸಮಸ್ಯೆ ಉಂಟಾದಾಗ ಈ ರೀತಿ ಮಾಡದೆ ಅದರಿಂದ ಹೊರಬನ್ನಿ, ನಿಮ್ಮ ಆರೈಕೆ ಕಡೆಗೆ, ನಿಮ್ಮ ಆಸಕ್ತಿ ಕಡೆಗೆ ಹೆಚ್ಚು ಗಮನಹರಿಸಿ.