Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬ್ಲ್ಯಾಕ್‌ಮೇಲ್ ಮಾಡಿ ವಿವಾಹಿತೆಗೆ ವಿಚ್ಛೇದನ ಕೊಡಿಸಿದ ಪ್ರಿಯಕರ! 3 ಬಾರಿ ಅಬಾರ್ಷನ್ ಮಾಡಿಸಿ ವಂಚನೆ
ಕರ್ನಾಟಕಪ್ರಮುಖ

ಬ್ಲ್ಯಾಕ್‌ಮೇಲ್ ಮಾಡಿ ವಿವಾಹಿತೆಗೆ ವಿಚ್ಛೇದನ ಕೊಡಿಸಿದ ಪ್ರಿಯಕರ! 3 ಬಾರಿ ಅಬಾರ್ಷನ್ ಮಾಡಿಸಿ ವಂಚನೆ

Share
2 Min Read
SHARE

newsics.com

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಠಾಣೆ ವ್ಯಾಪ್ತಿಯಲ್ಲಿ ಲವ್ ಸೆಕ್ಸ್ ದೋಖಾ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿ ಪ್ರೇಮದ ನಾಟಕವಾಡಿ ಮೋಸ ಮಾಡಿದ್ದಲ್ಲದೇ ಆಕೆಗೆ ಮೂರು ಬಾರಿ ಅಬಾರ್ಷನ್‌ ಕೂಡ ಮಾಡಿಸಿ ಇದೀಗ ಕೈಕೊಟ್ಟು ಪರಾರಿಯಾಗಿದ್ದಾನೆ.

ವಿಚಿತ್ರ ಅಂದ್ರೆ ಪ್ರೇಯಸಿಗೆ ಆಗಲೇ ಒಂದು ಮದುವೆಯಾಗಿತ್ತು. ಈತ ಅವರಿಗೆ ಡಿವೋರ್ಸ್ ಕೊಡಿಸಿ ಆಕೆಯೊಂದಿಗೆ 10 ತಿಂಗಳ ಸಂಸಾರ ಮಾಡಿದ್ದ. ಈಗ ಮದುವೆಗೆ ಬರುತ್ತೇನೆಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಪ್ಪಿಸಿಕೊಂಡಿದ್ದಾನೆ. ವಿಚಿತ್ರ ಹಾಗೂ ವಿಲಕ್ಷಣ ಪ್ರೇಮ್ ಕಹಾನಿಗೆ ಬಲಿಯಾಗಿ ಪ್ರಿಯತಮೆ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

2021ರಲ್ಲಿ ನರ್ಸಿಂಗ್ ಕೋರ್ಸ್ ಮಾಡುವ ವೇಳೆ ಜಾನ್‌ ಪ್ರೆಸಿಲ್ಲಾ ಎನ್ನುವ ಯುವತಿಗೆ ಕ್ಲಿಂಟನ್ ಎಂಬಾತನ ಪರಿಚಯವಾಗಿದ್ದ. ಇಬ್ಬರೂ ಮೇಡ್ ಫಾರ್ ಈಚ್ ಅದರ್ಸ್ ಎಂಬಂತೆ ಸುತ್ತಾಡಿದ್ದರು. ಇವರಿಬ್ಬರ ಪ್ರೀತಿ ಪ್ರೇಮ ಪ್ರಣಯದ ವಿಚಾರ ಇಬ್ಬರ ಮನೆಯವರಿಗೂ ಗೊತ್ತಾಗಿತ್ತು. ವಿಚಾರ ತಿಳಿದ ಪ್ರೇಯಸಿ ಜಾನ್ ಪ್ರೆಸಿಲ್ಲಾಳ ಕುಟುಂಬಸ್ಥರು ಕ್ಲಿಂಟನ್‌ನ ಮನೆಯವರಿಗೆ ವಿಚಾರ ತಿಳಿಸಿದ್ದರು. ಆದರೆ, ಕ್ಲಿಂಟನ್‌ಗೆ ಸಹೋದರಿ ಇದ್ದ ಕಾರಣ ಆಕೆಯ ವಿವಾಹ ಆಗುವವರೆಗೂ ಕ್ಲಿಂಟನ್ ಮದುವಗೆ ಕುಟುಂಬಸ್ಥರು ನಿರಾಕರಿಸಿದ್ದರು. ಆದ್ದರಿಂದ ಪ್ರೆಸಿಲ್ಲಾಳ ಕುಟುಂಬಸ್ಥರು 2022 ರಲ್ಲಿ ತಮಿಳುನಾಡು ಮೂಲದ ಸ್ಟೀಫನ್ ರಾಜ್ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದರು.

ಆದರೆ ವಿವಾಹದ ಬಳಿಕ ಕ್ಲಿಂಟನ್, ಪ್ರೆಸಿಲ್ಲಾಳ ಪ್ರೈವೇಟ್ ಫೋಟೊ ಹಿಡಿದು ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದ. ಪತಿ ಸ್ಟೀಫನ್ ರಾಜ್‌ಗೂ ಪ್ರೆಸಿಲ್ಲಾಳ ಫೋಟೊ ಕಳುಹಿಸಿ ಟಾರ್ಚರ್ ಕೊಡಲು ಶುರು ಮಾಡಿದ್ದ. ಪತ್ನಿಯ ಲವ್ವಿ ಡವ್ವಿ ವಿಚಾರ ತಿಳಿದು ಸ್ಟೀಫನ್‌ ರಾಜ್‌ ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಕ್ಮಿಂಟನ್, ಪತಿ ಸ್ಟೀಫನ್‌ಗೆ ವಿಚ್ಛೇದನ ನೀಡಿ ಬಾ, ನಾನು ಮದ್ವೆ ಆಗುತ್ತೇನೆ ಎಂದು ಪ್ರೆಸಿಲ್ಲಾಗೆ ಹೇಳಿದ್ದಾನೆ. ಅದರಂತೆ ಸ್ಟೀಫನ್ ಹಾಗೂ ಪ್ರೆಸಿಲ್ಲಾ ಡಿವೋರ್ಸ್ ಆಗಿದೆ.
ವಿಚ್ಛೇದನ ಬಳಿಕ ಮದುವೆ ಆಗದೆ ಪ್ರೆಸಿಲ್ಲಾ ಜತೆ ಕ್ಲಿಂಟನ್ 10 ತಿಂಗಳ ಸಂಸಾರ ಕೂಡ ನಡೆಸಿದ್ದ. ಪ್ರೆಸಿಲ್ಲಾ ಜತೆ ಲೈಂಗಿಕ ಸಂಪರ್ಕ ಬೆಳೆಸಿ 3 ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದ. ಕಳೆದ ಫೆ.12 ರಂದು ಕೊಳ್ಳೇಗಾಲದಲ್ಲಿ ಕ್ಲಿಂಟನ್ ಹಾಗೂ ಪ್ರೆಸಿಲ್ಲಾಗೆ ರಿಜಿಸ್ಟರ್ ಮ್ಯಾರೇಜ್ ನಿಶ್ಚಯ ಆಗಿತ್ತು. ಆದರೆ, ರಿಜಿಸ್ಟರ್ ಮ್ಯಾರೇಜ್‌ಗೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕ್ಲಿಂಟನ್ ಎಸ್ಕೇಪ್ ಆಗಿದ್ದಾನೆ. ಪರಾರಿಯಾದ ಕ್ಲಿಂಟನ್‌ ಹುಡುಕಿಕೊಡಿ ಎಂದು ನೊಂದ ಪ್ರಿಯತಮೆ ಪೊಲೀಸರ ಮೊರೆ ಹೋಗಿದ್ದಾಳೆ‌.

Relationship Tips: ಜಸ್ಟ್ 20 ಸೆಕೆಂಡ್ ಗಟ್ಟಿಯಾಗಿ ತಬ್ಬಿ ಮುದ್ದಾಡಿದ್ರೆ ಈ ಎಲ್ಲಾ ಲಾಭಗಳಿವೆ

Relationship ಗಂಡ ಹೆಂಡತಿ ರೀತಿ ದೈಹಿಕ ಸಂಪರ್ಕ ಮಾಡ್ತಾರೆ, ಆದರೆ ಒಟ್ಟಿಗಿರಲ್ಲ: ಏನಿದು ಸಿಚುವೇಷನ್‌ಶಿಪ್‌?

ಮಗು ಬೇಡದಿದ್ದರೂ ಈ ರೀತಿ ಮಾಡಿದ್ರೆ ಗಂಡಸರಿಗೆ 8 ಲಕ್ಷ ರೂ.ವರೆಗೆ ದಂಡ

TAGGED:Deceit from a lover to a married woman
Share This Article
Facebook Twitter Copy Link Print
Previous Article Relationship ಟಾಕ್ಸಿಕ್ ರಿಲೇಷನ್‌ಶಿಪ್‌ನಿಂದ ಹೊರಬರುವುದು ಹೇಗೆ?
Next Article ಬೀದರ್ ATM ದರೋಡೆಕೋರರ ಸುಳಿವು ಕೊಟ್ಟವರಿಗೆ ಭಾರೀ ಬಹುಮಾನ ಘೋಷಣೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?