newsics.com
ಬೆಂಗಳೂರು: ಬಿಗ್ ಬಾಸ್ ಫೈನಲಿಸ್ಟ್ ಮೋಕ್ಷಿತಾ ಪೈ ಕಿರುತೆರೆಯಿಂದ ಬೆಳ್ಳಿತೆರೆ ಪ್ರವೇಶಿಸಲಿದ್ದಾರೆ.
ಅಂಜನಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾದ ಟೈಟಲ್ ಶನಿವಾರ(ಫೆ.8) ರಿವೀಲ್ ಆಗಲಿದೆ.
ನಟಿ ಮೋಕ್ಷಿತಾ ಪೈ ಅವರು ಪಾರು ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಗಳಾಗಿದ್ದಾಳೆ. ಇದಾದ ನಂತರ ಕನ್ನಡಿಗರು ಪಾರು ಎಂತಲೇ ಗುರುತಿಸುತ್ತಿದ್ದ ಮೋಕ್ಷಿತಾ ಪೈಗೆ ತನ್ನ ಹೆಸರಿನಲ್ಲಿಯೇ ಖ್ಯಾತಿ ತಂದು ಕೊಟ್ಟಿದ್ದು ಬಿಗ್ ಬಾಸ್ ಕನ್ನಡ ಸೀಸನ್ 11ರ ರಿಯಾಲಿಟಿ ಶೋ.
ಕಷ್ಟಪಟ್ಟು ಆಟವಾಡಿದ ಮೋಕ್ಷಿತಾಗೆ ಫಿನಾಲೆಗೆ ಹೋಗುವುದಕ್ಕೆ ಅವಕಾಶವೂ ಸಿಕ್ಕಿತು. ಇದಾದ ನಂತರ ಬಿಗ್ ಬಾಸ್ 3ನೇ ರನ್ನರ್ ಆಪ್ ಆಗಿ ಮನೆಯಿಂದ ಹೊರಗೆ ಬಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬೆನ್ನಲ್ಲಿಯೇ ಮೋಕ್ಷಿತಾಗೆ ಇರುವ ಅಭಿಮಾನಿಗಳ ಬಳಗ ತುಂಬಾ ದೊಡ್ಡದಾಗಿ ಬೆಳೆದಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ಮೋಕ್ಷಿತಾಗೆ ಹಲವು ನಿರ್ದೇಶಕರು ಕಥೆ ಹೇಳಿ ಸಿನಿಮಾದ ಚಾನ್ಸ್ ನೀಡುತ್ತಿದ್ದಾರೆ. ಒಳ್ಳೆಯ ಕಥೆ ಹೊಂದಿದ ಸಿನಿಮಾಗೆ ಸಹಿ ಹಾಕಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಲವು ಸಿನಿಮಾ ಆಫರ್‌ಗಳ ನಡುವೆ ಅಂಜನಾದ್ರಿ ಪ್ರೊಡಕ್ಷನ್ ಅವರ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸದ್ಯಕ್ಕೆ ಎಂಸಿಆರ್ (MCR Movie) ಎಂದು ಹೆಸರು ಕೊಡಲಾಗಿದೆ. ನಾಳೆ ಎಂಸಿಆರ್ ಎಂದರೆ ಏನೆಂಬುದನ್ನು ನಾವು ರಿವೀಲ್ ಮಾಡುವುದಾಗಿ ಸ್ವತಃ ನಟಿ ಮೋಕ್ಷಿತಾ ಪೈ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್‌ನಲ್ಲಿ ನಾಳೆ ಸಂಜೆ 6:00 ಗಂಟೆಗೆ ಅಂಜನಾದ್ರಿ ಪ್ರೊಡಕ್ಷನ್ಸ್‌ನ ಮೊದಲ ಸಿನಿಮಾ ಪ್ರಾಜೆಕ್ಟ್ #MCRನಲ್ಲಿ ಶೀರ್ಷಿಕೆ ಬಿಡುಗಡೆ ಮಾಡಲು ನಮಗೆ ತುಂಬಾ ಸಂತೋಷವಾಗಿದೆ. ಇದಕ್ಕೆ ಜಯರಾಮ್ ಗಂಗಪ್ಪನಹಳ್ಳಿ ನಿರ್ಮಾಣ ಮತ್ತು ಧನುಷ್ ಗೌಡ.ವಿ ನಿರ್ದೇಶನ ಮಾಡುತ್ತಿದ್ದಾರೆ.
https://www.instagram.com/reel/DFxVH_rBeTv/?utm_source=ig_web_button_share_sheet
Mukesh Ambani ಮುಖೇಶ್ ಅಂಬಾನಿಗಾಗಿ ತಯಾರಾದ ಬುಲೆಟ್ ಪ್ರೂಫ್ ರೋಲ್ಸ್ ರಾಯ್ಸ್ ಕಾರು… ಬೆಲೆ ಎಷ್ಟು?