newsics.com
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರ (ನ.27) ತಮಿಳುನಾಡಿಗೆ ಸೈಕ್ಲೋನ್ ಅಪ್ಪಳಿಸಲಿದ್ದು, ಇದರ ಪರಿಣಾಮ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದಿನಿಂದ 2-3 ದಿನ ಭಾರೀ ಮಳೆಯಾಗಲಿದೆ.
ಸೈಕ್ಲೋನ್ ಪರಿಣಾಮದಿಂದ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ಎಚ್ಚರಿಸಿದ್ದಾರೆ.
ಪಶ್ಟಿಮ ಬಂಗಾಳದಲ್ಲಿನ ವಾಯುಭಾರ ಕುಸಿತ ತೀವ್ರಗೊಂಡಿದೆ. ಹೀಗಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತವುಂಟಾಗಿದ್ದು, ಫೆಂಗಲ್ ಚಂಡಮಾರುತ ತಮಿಳುನಾಡು ಕರಾವಳಿಗೆ ಅಪ್ಪಳಿಸಿದೆ. ಪರಿಣಾಮ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ತಮಿಳುನಾಡು, ಪುದುಚೆರಿ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಫೆಂಗಲ್ ಚಂಡಮಾರುತ ನ.27ರಂದು ತೀವ್ರಗೊಳ್ಳಲಿದ್ದು, ಬಳಿಕ ಉತ್ತರ-ವಾಯವ್ಯ ಕಡೆ ಚಲಿಸಲಿದೆ. ಬಳಿಕ ಶ್ರೀಲಂಕಾ ಕರಾವಳಿಯತ್ತ ಚಲಿಸಲಿದ್ದು, ಎಲ್ಲೆಡೆ ಭಾರೀ ಮಳೆಯಾಗಲಿದೆ.
Car damage ಕಾರಿನ ಮೇಲೆ ಬಿದ್ದ ಮೆಟ್ರೋ ಬ್ರಿಡ್ಜ್‌ನ ಬ್ರಿಕ್ಸ್, ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Ladies Only ಮಹಿಳೆಯರಿಗಾಗಿಯೇ ಮೀಸಲು ಈ ಪಬ್, ಇಲ್ಲಿ ಎಲ್ಲರೂ ವುಮೆನ್, ಪುರುಷರಿಗಿಲ್ಲ ಪ್ರವೇಶ! ವಿಡಿಯೋ ನೋಡಿ