newsics.com
ಬೆಂಗಳೂರು: ಮೆಟ್ರೋ ಬ್ರಿಡ್ಜ್ನ ಸಿಮೆಂಟ್ ಬ್ರಿಕ್ಸ್ ಕಾರಿನ ಮೇಲೆ ಬಿದ್ದಿದೆ. ಮೈಸೂರು ರಸ್ತೆಯ ಪಿಲ್ಲರ್ ನಂಬರ್ 393-394 ನಡುವೆ ಈ ಘಟನೆ ನಡೆದಿದೆ. ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದೆ.
ಮಂಗಳವಾರ ಬೆಳಗ್ಗೆ ಮೈಸೂರು ರೋಡ್ನಲ್ಲಿ ಕಾರು ಹೋಗುತ್ತಿದ್ದಾಗ ಏಕಾಏಕಿ ಮೆಟ್ರೋ ಬ್ರಿಡ್ಜ್ ನಿಂದ ಸಿಮೆಂಟ್ ಕಲ್ಲು ಕಳಚಿ ಬಿದ್ದಿದೆ. ಯಲಹಂಕದ ಬಾಗಲೂರಿನಿಂದ ಮೈಸೂರಿಗೆ ಕಾರ್ಯಕ್ರಮಕ್ಕೆ ನವೀನ್ ರಾಜ್ ಮತ್ತು ಕುಟುಂಬ ಹೋಗುತ್ತಿದ್ದಾಗ ಮೈಸೂರು ರಸ್ತೆಯ ಪಿಲ್ಲರ್ ನಂಬರ್ 393-394 ನಡುವೆ ಈ ಘಟನೆ ನಡೆದಿದೆ.
ಇದರಿಂದ ಹೊಸ ಎಸ್ಯುವಿ 700 ಕಾರಿನ ಫ್ರಂಟ್ ಗ್ಲಾಸ್ ಮತ್ತು ರೂಫ್ ಡ್ಯಾಮೇಜ್ ಆಗಿದೆ. ಇನ್ನು ಕಲ್ಲು ಬಿದ್ದ ರಭಸಕ್ಕೆ ಕಾರ್ನಲ್ಲಿದ್ದವರು ಗಾಬರಿ ಆಗಿದ್ದಾರೆ.
ತಕ್ಷಣ ನವೀನ್ ರಾಜ್ ಸೋದರ ನಾಗೇಂದ್ರ, ಮೆಟ್ರೋ ಕಾಲ್ ಸೆಂಟರ್ಗೆ ಕಾಲ್ ಮಾಡಿದ್ದಾರೆ. ಈ ವೇಳೆ ಮೆಟ್ರೋದವರು ನಮ್ಮ ಹೆಡ್ ಆಫೀಸ್ ಗೆ ಕಾಲ್ ಮಾಡಿ, ಇಮೇಲ್ ಮಾಡಿ, ಆ ಮೇಲ್ ನಲ್ಲಿ ಘಟನೆ ನಡೆದಿರುವ ಸಮಯ, ಕಾರ್ ಡ್ಯಾಮೇಜ್ ಆಗಿರುವ ಫೋಟೋ ಕಳಿಸಿ ಎಂದು ಕೈ ತೊಳೆದುಕೊಂಡಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರಿನ ಮಾಲೀಕ ನವೀನ್ ರಾಜ್ ಪ್ರತಿಕ್ರಿಯಿಸಿದ್ದು, ನಾನು ಕೂಡಲೇ ಬಿಎಂಆರ್ಸಿಎಲ್ ಅಧಿಕಾರಿಗಳನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದೆ. ಬಳಿಕ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಮಗೆ ಇದಕ್ಕೆ ಪರಿಹಾರ ಬೇಕು. ಕಾರು ಖರೀದಿಸಿ ಇನ್ನೂ ಒಂದು ತಿಂಗಳು ಸಹ ಆಗಿಲ್ಲ, ನಮ್ಮ ಮೆಟ್ರೋದವರು ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
Lawyer Killed ಇಸ್ಕಾನ್ ಕೃಷ್ಣದಾಸ್ ಪರ ವಕೀಲ ಹತ್ಯೆ, ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ
Ladies Only ಮಹಿಳೆಯರಿಗಾಗಿಯೇ ಮೀಸಲು ಈ ಪಬ್, ಇಲ್ಲಿ ಎಲ್ಲರೂ ವುಮೆನ್, ಪುರುಷರಿಗಿಲ್ಲ ಪ್ರವೇಶ! ವಿಡಿಯೋ ನೋಡಿ