newsics.com
ಹೈದರಾಬಾದ್: ಮೂರಕ್ಕಿಂತ ಹೆಚ್ಚು ಪೂರಿಗಳನ್ನು ಒಟ್ಟಿಗೇ ಬಾಯಿಗೆ ಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಬಾಲಕ ಮೃತಪಟ್ಟ ಘಟನೆ ಹೈದರಾಬಾದ್‌ನ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿ ಮಧ್ಯಾಹ್ನದ ಊಟ ಮಾಡುವಾಗ ಒಂದೇ ಬಾರಿಗೆ ಮೂರಕ್ಕಿಂತ ಹೆಚ್ಚು ಪೂರಿಗಳನ್ನು ಒಟ್ಟಿಗೇ ಬಾಯಿಗೆ ಹಾಕಿಕೊಂಡಿದ್ದ. ಇದರಿಂದ ಉಸಿರಾಡಲು ಸಾಧ್ಯವಾಗದೆ ಅಸುನೀಗಿದ್ದಾನೆ.
ಹೈದರಾಬಾದಿನ ಶಾಲೆಯೊಂದರಲ್ಲಿ ಊಟದ ಸಮಯ, 6ನೇ ತರಗತಿ ವಿದ್ಯಾರ್ಥಿ ಎಲ್ಲರ ಜತೆ ಊಟಕ್ಕೆ ಕುಳಿತಿದ್ದ. ಒಂದೇ ಬಾರಿಗೆ ಎಲ್ಲಾ ಪೂರಿಗಳನ್ನು ತಿಂದಿದ್ದ. ಏಕೆ ಹೀಗೆ ಒಟ್ಟಿಗೇ ತಿಂದಿದ್ದಾನೆ ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ.
ಅಸ್ವಸ್ಥ ಬಾಲಕನನ್ನು ಶಾಲೆಯ ಸಿಬ್ಬಂದಿ ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಖಾಸಗಿ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಯಿತು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸುವ ವೇಳೆಗೆ ಬಾಲಕ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Lawyer Killed ಇಸ್ಕಾನ್ ಕೃಷ್ಣದಾಸ್ ಪರ ವಕೀಲ ಹತ್ಯೆ, ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ
Ladies Only ಮಹಿಳೆಯರಿಗಾಗಿಯೇ ಮೀಸಲು ಈ ಪಬ್, ಇಲ್ಲಿ ಎಲ್ಲರೂ ವುಮೆನ್, ಪುರುಷರಿಗಿಲ್ಲ ಪ್ರವೇಶ! ವಿಡಿಯೋ ನೋಡಿ