newsics.com
ಬೆಂಗಳೂರು: ಪರಿಚಿತನೇ ವಿವಾಹಿತೆಯ ಬೆತ್ತಲೆ ವಿಡಿಯೋ ಮಾಡಿ ಹಣಕ್ಕೆ ಕಿರುಕುಳ ನೀಡಿದವನ ವಿರುದ್ಧ ನಗರದಲ್ಲಿ ಎಫ್ಐಆರ್ ದಾಖಲಾಗಿದೆ.
ಆರೋಪಿ ಪರಿಚಯಸ್ಥ ಮಹಿಳೆಯ ಮೊಬೈಲ್‌ನಲ್ಲೇ ಆ್ಯಪ್ ಡೌನ್ಲೋಡ್ ಮಾಡಿ ಬಳಿಕ ವಿಡಿಯೋ ಕಾಲ್ ಮೂಲಕ ಆಕೆಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಹಣಕ್ಕೆ ಕಿರುಕುಳ ನೀಡಿದ್ದ ಆರೋಪದ ಮೇಲೆ ಸಂತ್ರಸ್ತೆಯು ಪರಿಚಿತನ ವಿರುದ್ಧ ಬೆಂಗಳೂರಿನ ಆರ್ ಆರ್ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಈ ವಿವಾಹಿತ ಮಹಿಳೆ ಖಾಸಗಿ ಕಂಪನಿಯ ಉದ್ಯೋಗಿ. ಮೂರನೇ ವ್ಯಕ್ತಿಯಿಂದ ಆರೋಪಿಯು ಮಹಿಳೆಗೆ ಪರಿಚಿತನಾಗಿದ್ದ. ಕಾಲಕ್ರಮೇಣ ಮೂವರೂ ಓಡಾಡಿಕೊಂಡಿದ್ದರು. ಈ ವೇಳೆ ಮಹಿಳೆಗೆ ಅರಿವಿಲ್ಲದಂತೆ ಥರ್ಡ್ ಪಾರ್ಟಿ ಅಪ್ಲಿಕೇಷನ್ ಆ್ಯಪ್‌ನ್ನು ಮಹಿಳೆಯ ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿ ಆಕೆಗೇ ಅರಿವಿಲ್ಲದಂತೆ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದ.
ಈ ನಡುವೆ ಮಹಿಳೆಗೆ ಗೊತ್ತಿಲ್ಲದಂತೆ ಅಪ್ಲೀಕೇಷನ್ ಡೌನ್ಲೋಡ್ ಮಾಡಿ ಮೊಬೈಲ್ನಲ್ಲಿ ಹೈಡ್ ಮಾಡಿದ್ದ. ತುರ್ತು ಫೋನ್ ಬರುವುದೆಂದು ಮಹಿಳೆಯು ಸ್ನಾನದ ಮನೆಯಲ್ಲಿ ಮೊಬೈಲ್ ಇಟ್ಟುಕೊಂಡಿದ್ದರು. ಈ ವೇಳೆ ಆ್ಯಪ್ ಆನ್ ಮಾಡಿಕೊಂಡು ಮೊಬೈಲ್ನಲ್ಲಿ ಸೆರೆಯಾಗುವ ವಿಡಿಯೋ ಹಾಗೂ ಆಡಿಯೊಗಳನ್ನು ಸಂಗ್ರಹಿಸಿದ್ದ. ಈ ವಿಡಿಯೋಗಳನ್ನು ನಿನ್ನ ಸ್ನೇಹಿತ ಕಳಿಸಿದ್ದಾನೆ ಎಂದು ಸುಳ್ಳು ಹೇಳಿದ್ದ.
ಬಳಿಕ ನಿನ್ನನ್ನು ಪ್ರೀತಿಸುತ್ತಿದ್ದೇನೆ. ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಮದುವೆಗೆ ನಿರಾಕರಿಸಿದರೂ ಬಿಡದೆ ಮಹಿಳೆ ಮೊಬೈಲ್‌ಗೆ ಅಸಭ್ಯವಾಗಿ ವಾಟ್ಸ್ಯಾಪ್ ಸಂದೇಶ ಕಳುಹಿಸಿದ್ದಾನೆ. ಬೆತ್ತಲೆ ವಿಡಿಯೋ ತನ್ನ ಬಳಿಯಿದೆ. ಹಣ ನೀಡದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಮಾತನಾಡಬೇಕೆಂದು ಬೆದರಿಸಿ ರೂಮಿಗೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ.
ಹಳದಿ- ಕೆಂಪು ಬಣ್ಣದಲ್ಲಿ ಮಿಂಚಿದ ಸರ್ಕಾರಿ ಬಸ್; ಚಾಲಕನ ಕನ್ನಡ ಪ್ರೇಮಕ್ಕೆ ಎಲ್ರೂ ಫಿದಾ…
ಬಿಜಿಎಸ್ ಆಸ್ಪತ್ರೆಗೆ ದಾಖಲಾದ ದರ್ಶನ್: ಬೆನ್ನು ನೋವಿನ ಜೊತೆ ನಟ ದರ್ಶನ್‌ಗೆ ಮತ್ತೊಂದು ಸಮಸ್ಯೆ
ಬಿಗ್ ಬಾಸ್‌ನಲ್ಲಿ ಐಶ್ವರ್ಯಗೆ ಬಂತು ಬ್ಯೂಟಿಫುಲ್ ವಾಯ್ಸ್ ನೋಟ್; ನಾನಿರುವೆ ನಿಮ್ಮೊಂದಿಗೆ ಎಂದವರು ಯಾರು?