newsics.com
ಬೆಂಗಳೂರು : ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಜಿಎಸ್ ಆಸ್ಪತ್ರೆಗೆ ದಾಖಲಾದ ದರ್ಶನ್ ಅವರಿಗೆ ಮೊದಲು ಅಬ್ಸರ್ವೇಷನ್‌ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ.
ದರ್ಶನ್ ಅವರಿಗೆ ಬೆನ್ನು ನೋವಿನ ಜೊತೆ ಕಾಲು ನೋವು ಇದೆ. ಕಾಲು ನೋವಿನ ಜೊತೆಗೆ ಎಡಗಾಲಿನ ಸೆಳೆತ ಇದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದಿನ ಎರಡು ದಿನಗಳ ಕಾಲ ದರ್ಶನ್ ಆಸ್ಪತ್ರೆಯಲ್ಲೇ ಇರುತ್ತಾರೆ. ರಕ್ತಪರೀಕ್ಷೆ MRI ಸ್ಕ್ಯಾನಿಂಗ್ ಸೇರಿ ಕೆಲ ಪರೀಕ್ಷೆ ನಡೆಸಲಾಗುತ್ತೆ ಎಂದಿದ್ದಾರೆ.
ಬೆನ್ನುನೋವಿನಿಂದ ದರ್ಶನ್ ಅವರಿಗೆ ಕಾಲು ನೋವು ಕೂಡ ಹೆಚ್ಚಾಗಿದೆ. ಬೆನ್ನು ನೋವಿನಿಂದ ಎಡಗಾಲಿನ ಸ್ಪರ್ಶವೂ ಕಡಿಮೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ದರ್ಶನ್ ವೈದ್ಯಕೀಯ ಚಿಕಿತ್ಸೆ ಹೇಗೆ ಮಾಡಬೇಕು ಎಂದು ನಿರ್ಧಾರ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.