Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸಾವಿರ ಕೋಟಿ‌ ಮೌಲ್ಯದ ಜೆಟ್ ಖರೀದಿಸಿದ ಮುಖೇಶ್ ಅಂಬಾನಿ!
ದೇಶಪ್ರಮುಖ

ಸಾವಿರ ಕೋಟಿ‌ ಮೌಲ್ಯದ ಜೆಟ್ ಖರೀದಿಸಿದ ಮುಖೇಶ್ ಅಂಬಾನಿ!

Share
2 Min Read
SHARE

newsics.com

ನವದೆಹಲಿ: ಮಗನ ಅದ್ಧೂರಿ ಹಾಗೂ ದುಬಾರಿ ಮದುವೆ ಮೂಲಕ ಸುದ್ದಿಯಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಅತ್ಯಂತ ದುಬಾರಿ‌ ವಿಮಾನ ಖರೀದಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಭಾರತದ ಮೊದಲ ಬೋಯಿಂಗ್ 737 ಮ್ಯಾಕ್ಸ್ 9ರ ಮಾಲೀಕರಾಗಿದ್ದಾರೆ. ಭಾರತದ ಇತರ ಯಾವುದೇ ಉದ್ಯಮಿ ಒಡೆತನದಲ್ಲಿ ಇಲ್ಲದ ಅತ್ಯಂತ ದುಬಾರಿ ಖಾಸಗಿ ಜೆಟ್ ಆಗಿದೆ. ಈ ಅಲ್ಟ್ರಾ ಲಾಂಗ್ ರೇಂಜ್ ಬಿಸಿನೆಸ್ ಜೆಟ್ ಬೆಲೆಯು ಸುಮಾರು 1000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಮುಕೇಶ್ ಅಂಬಾನಿ ಅವರ ಬೋಯಿಂಗ್ 737 ಮ್ಯಾಕ್ಸ್ 9 ವಿಮಾನದ ಒಳಾಂಗಣದ ಯಾವುದೇ ಚಿತ್ರಗಳು ಲಭ್ಯವಿಲ್ಲದಿದ್ದರೂ, ಇದು ಅತ್ಯಂತ ಐಷಾರಾಮಿ ಇಂಟೀರಿಯರ್ ಹೊಂದಿದೆ.

ಸ್ವಿಟ್ಜರ್ಲೆಂಡ್‌ನ ಯುರೋ ಏರ್‌ಪೋರ್ಟ್ ಬಾಸೆಲ್-ಮುಲ್ಹೌಸ್-ಫ್ರೀಬರ್ಗ್‌ನಲ್ಲಿ ವ್ಯಾಪಕ ಕ್ಯಾಬಿನ್ ಮಾರ್ಪಾಡುಗಳು ಮತ್ತು ಒಳಾಂಗಣ ನವೀಕರಣಗಳನ್ನು ಮಾಡಲಾಗಿದೆ.

ಈ‌ ವಿಮಾನದ ಹಿಂದಿನ ಮಾಡೆಲ್ ಆಗಿರುವ ಬೋಯಿಂಗ್ ಮ್ಯಾಕ್ಸ್ 8ಗೆ ಹೋಲಿಸಿದರೆ ಅಂಬಾನಿಯ ಇತ್ತೀಚಿನ ಮ್ಯಾಕ್ಸ್ 9 ವಿಮಾನ ಹೆಚ್ಚಿನ ಕ್ಯಾಬಿನ್ ಮತ್ತು ಸರಕು ವಿಭಾಗ ಹೊಂದಿದೆ.

ಹೊಸ ಬೋಯಿಂಗ್ 737 ಮ್ಯಾಕ್ಸ್ 9 ಮುಖೇಶ್ ಅಂಬಾನಿಯ ಏಕೈಕ ಖಾಸಗಿ ವಿಮಾನವೇನಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಈಗಾಗಲೇ 10 ಖಾಸಗಿ ಜೆಟ್‌ಗಳನ್ನು ಹೊಂದಿದೆ. ಇದರಲ್ಲಿ ಬೊಂಬಾರ್ಡಿಯರ್ ಗ್ಲೋಬಲ್ 6000, ಎರಡು ಡಸಾಲ್ಟ್ ಫಾಲ್ಕನ್ 900, ಎಂಬ್ರೇರ್ ಇಆರ್‌ಜೆ -135 ಸೇರಿದಂತೆ ಎರಡು ಹೆಲಿಕಾಪ್ಟರ್‌ಗಳನ್ನು ಹೊಂದಿದೆ.

ವಿಶ್ವದ ಅತ್ಯಂತ ದುಬಾರಿ ಜೆಟ್‌ಗಳಲ್ಲಿ ಒಂದಾಗಿರುವ ಇದು, ಎರಡು ಸಿಎಫ್‌ಎಂಐ ಲೀಪ್ -1 ಬಿ ಎಂಜಿನ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. ಒಂದೇ ಪ್ರಯಾಣದಲ್ಲಿ 6,355 ನಾಟಿಕಲ್ ಮೈಲಿ (11,770 ಕಿ.ಮೀ) ಕ್ರಮಿಸಬಲ್ಲದು.

ಭಾರತಕ್ಕೆ ತರುವ ಮೊದಲು, ವಿಮಾನವನ್ನು ಏಪ್ರಿಲ್ 13, 2023 ರಿಂದ ಸ್ವಿಸ್‌ನಲ್ಲಿ ಸರಣಿ ಪರೀಕ್ಷಾ ಹಾರಾಟಗಳಿಗೆ ಒಳಪಡಿಸಲಾಗಿತ್ತು. ಬಾಸೆಲ್, ಜಿನೀವಾ ಮತ್ತು ಲಂಡನ್ ಲುಟಾನ್ ವಿಮಾನ ನಿಲ್ದಾಣಗಳ ನಡುವೆ ಆರು ಪರೀಕ್ಷಾ ಹಾರಾಟಗಳನ್ನು ನಡೆಸಲಾಗಿತ್ತು. ಆಗಸ್ಟ್ 27, 2024 ರಂದು, ಬೋಯಿಂಗ್ 737 ಮ್ಯಾಕ್ಸ್ 9 ಬಾಸೆಲ್‌ನಿಂದ ದೆಹಲಿಗೆ ಬಂದಿಳಿದಿದೆ.

ಬಾಸೆಲ್‌ನಿಂದ 6,234 ಕಿ.ಮೀ.ಗಳನ್ನು ಒಂಬತ್ತು ಗಂಟೆಗಳ ಕಾಲ ಹಾರಾಟ ನಡೆಸಿ ದೆಹಲಿ ತಲುಪಿದೆ. ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಸಂಜೆ 7:18ಕ್ಕೆ ಜೆಟ್ ದೆಹಲಿಯ ರನ್ವೇಯಲ್ಲಿ ಇಳಿಯಿತು. ಪ್ರಸ್ತುತ ದೆಹಲಿ ವಿಮಾನ ನಿಲ್ದಾಣದ ಗೂಡ್ಸ್ ಟರ್ಮಿನಲ್ ಬಳಿಯ ನಿರ್ವಹಣಾ ಏಪ್ರನ್‌ನಲ್ಲಿ ನಿಲ್ಲಿಸಲಾಗಿದೆ.

ಬೇಕಾಗಿದ್ದಾರೆ…

ನೀವು ಮಲಗೋದು ಹೇಗೆ? ನಿಮ್ಮ ನಿದ್ರಾ ಭಂಗಿಯಿಂದಲೇ ಗೊತ್ತಾಗತ್ತೆ ನಿಮ್ಮ ವ್ಯಕ್ತಿತ್ವ!

ಅತಿಯಾದ ಕೆಲಸದೊತ್ತಡಕ್ಕೆ ಯುವತಿ‌ ಬಲಿ, ಕಂಪನಿ ನಿರ್ಲಕ್ಷ್ಯ ಖಂಡಿಸಿ ಪತ್ರ ಬರೆದ ತಾಯಿ

ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬಿಜೆಪಿ ಕಾರ್ಯಕರ್ತೆ: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ನಿಫಾ ಬೆನ್ನಲ್ಲೇ‌ ಮತ್ತೊಂದು ಆತಂಕ: ದುಬೈನಿಂದ ಕೇರಳಕ್ಕೆ ಬಂದ ವ್ಯಕ್ತಿಗೆ mpox ಸೋಂಕು ದೃಢ,‌ ಕಟ್ಟೆಚ್ಚರ ವಹಿಸಲು ಸೂಚನೆ

ಚಂದ್ರಯಾನ- 4ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಪಡ್ಡೆಹೈಕಳ ಬಿಸಿಯೇರಿಸಿದ ಶಾಲಿನಿ ಪಾಂಡೆ ಈ ಫೋಟೋ !

ಗಗನಸಖಿಯರು ಸಮರ್ಪಕ ಒಳಉಡುಪು ಧರಿಸುವುದು ಕಡ್ಡಾಯ! ಏರ್ಲೈನ್ಸ್ ಸೂಚನೆ

ಇವುಗಳನ್ನು ತಿಂದರೆ ಸಾಕು ನಿಮ್ಮ ಮೆದುಳು ಕಂಪ್ಯೂಟರ್ ಗಿಂತ ವೇಗವಾಗಿ ಕೆಲಸ ಮಾಡುತ್ತದೆ; ಮೆದುಳಿನ ಆರೋಗ್ಯಕ್ಕಾಗಿ ಸೂಪರ್‌ಫುಡ್‌ಗಳು

TAGGED:Mukesh Ambani bought a jet worth a thousand crores!
Share This Article
Facebook Twitter Copy Link Print
Previous Article ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬಿಜೆಪಿ ಕಾರ್ಯಕರ್ತೆ: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
Next Article ಬಸನಗೌಡ ಪಾಟೀಲ್ ವಿರುದ್ಧ ಎಫ್ಐಆರ್

Popular Posts

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read
ಕರ್ನಾಟಕಪ್ರಮುಖ

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read
ಕರ್ನಾಟಕದೇಶಪ್ರಮುಖ

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read
ಪ್ರಮುಖದೇಶ

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?