Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅತಿಯಾದ ಕೆಲಸದೊತ್ತಡಕ್ಕೆ ಯುವತಿ‌ ಬಲಿ, ಕಂಪನಿ ನಿರ್ಲಕ್ಷ್ಯ ಖಂಡಿಸಿ ಪತ್ರ ಬರೆದ ತಾಯಿ
ದೇಶಪ್ರಮುಖ

ಅತಿಯಾದ ಕೆಲಸದೊತ್ತಡಕ್ಕೆ ಯುವತಿ‌ ಬಲಿ, ಕಂಪನಿ ನಿರ್ಲಕ್ಷ್ಯ ಖಂಡಿಸಿ ಪತ್ರ ಬರೆದ ತಾಯಿ

Share
2 Min Read
SHARE

newsics.com

ಪುಣೆ: ಕೆಲಸದ ಒತ್ತಡದಿಂದ ಉದ್ಯೋಗಿಯೊಬ್ಬರು ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ನಡೆದಿದೆ.

ಮೃತಳ ಅಂತ್ಯಕ್ರಿಯೆಗೆ ಆ ಸಂಸ್ಥೆಯ ಅಧಿಕಾರಿಗಳು ಬಾರದೇ ಇರುವ ಕುರಿತು ಆಕೆಯ ತಾಯಿ ಬರೆದಿರುವ ಭಾವುಕ ಪತ್ರವೊಂದು ವೈರಲ್ ಆಗುತ್ತಿದೆ.

ಸಂಸ್ಥೆ ನೀಡಿದ ಅತಿಯಾದ ಕೆಲಸದ ಒತ್ತಡದಿಂದಾಗಿ ಮಗಳು ಮೃತಪಟ್ಟಿದ್ದಾರೆ ಎಂದು ತಾಯಿಯೊಬ್ಬರು ಆರೋಪಿಸಿ, ಕಂಪನಿಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಅನ್ನಾ ಸಬಸ್ಟೆಯನ್‌ ಪೆರಾಯಿಲ್‌ (26) ಮೃತ ಉದ್ಯೋಗಿಯಾಗಿದ್ದು, ಇವರು ಪುಣೆಯ ಬಹುರಾಷ್ಟ್ರೀಯ ಕಂಪನಿ Ernst & Young (EY)ಯಲ್ಲಿ ಚಾರ್ಟೆಡ್‌ ಅಕೌಂಟಂಟ್‌ ಆಗಿ ನಾಲ್ಕು ತಿಂಗಳ ಹಿಂದಷ್ಟೇ ಉದ್ಯೋಗಕ್ಕೆ ಸೇರಿದ್ದರು. ಆದರೆ ಅತಿಯಾದ ಕೆಲಸದ ಒತ್ತಡದಿಂದಾಗಿ ಆಕೆ ಮೃತಪ್ಟಿದ್ದಾಳೆ ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.

ಕಂಪನಿಯ ಮುಖ್ಯಸ್ಥ ರಾಜೀವ್‌ ಮೆಮಾನಿ ಅವರಿಗೆ ಮಗಳ ಸಾವಿನ ಕುರಿತು ಪತ್ರ ಬರೆದಿರುವ ತಾಯಿ ಅನಿತಾ ಅಗಸ್ಟೀಸ್‌, ‘ತಮ್ಮ ಮಗಳು ಮೊದಲ ಕೆಲಸ ಎಂದು ಉತ್ಸಾಹದಲ್ಲಿಯೇ ಕಂಪನಿಗೆ ಸೇರಿದ್ದಳು. ಆದರೆ ನಾಲ್ಕು ತಿಂಗಳಲ್ಲಿ ಅತಿಯಾದ ಕೆಲಸದ ಹೊರೆ ತಡೆಯಲಾರದೆ ಮೃತಪಟ್ಟಿದ್ದಾಳೆ. ಪಿಜಿಯಿಂದ ಮನೆಗೆ ಬಂದಾಗಲೆಲ್ಲಾ ಅತಿಯಾದ ಸುಸ್ತಿನಿಂದ ಬಳಲುತ್ತಿದ್ದಳು.

ದಿನಕಳೆದಂತೆ ಆಕೆ ಆತಂಕ, ಒತ್ತಡ, ನಿದ್ರಾಹೀನತೆಗೆ ಒಳಗಾಗಿದ್ದಳು. ಆದರೂ ಕೆಲಸದಲ್ಲಿ ಯಶಸ್ಸು ಕಾಣಬೇಕೆಂದು ಒತ್ತಡವನ್ನು ಸಹಿಸಿ ಕೆಲಸ ಮಾಡುತ್ತಿದ್ದಳು. ಆಕೆಯ ವ್ಯವಸ್ಥಾಪಕರು ಕೂಡ ರಾತ್ರಿ ಕೆಲಸ ನೀಡಿ, ಬೆಳಗಿನೊಳಗೆ ಮುಗಿಸಬೇಕೆಂದು ಗಡುವು ನೀಡುತ್ತಿದ್ದರು. ಹೀಗಾಗಿ ಅನ್ನಾ, ರಾತ್ರಿ ಹಗಲೆನ್ನದೆ ವಾರಾಂತ್ಯದಲ್ಲೂ ಕೆಲಸ ಮಾಡುತ್ತಿದ್ದಳು. ಇದರಿಂದಾಗಿಯೇ ಆಕೆ ಮೃತಪಟ್ಟಿದ್ದಾಳೆ’ ಎಂದು ದೂರಿದ್ದಾರೆ.

ಸಂಪೂರ್ಣ ಮಾಹಿತಿಯನ್ನು ಪತ್ರ ಮುಖೇನ ಕಂಪನಿಗೂ ಕಳುಹಿಸಿ, ಇತರ ಉದ್ಯೋಗಿಗಳ ಜೀವ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಆಘಾತಕಾರಿ ವಿಚಾರವೆಂದರೆ, ಯಾವ ಸಂಸ್ಥೆಗಾಗಿ ಅನ್ನಾ ಸಬಸ್ಟೆಯನ್‌ ಪೆರಾಯಿಲ್‌ ಹಗಲು-ರಾತ್ರಿ ಎನ್ನದೇ ಸಮಯದ ಪರಿಜ್ಞಾನವೇ ಇಲ್ಲದೇ ಕೆಲಸ ಮಾಡುತ್ತಿದ್ದಳೋ ಅದೇ ಸಂಸ್ಥೆ ಆಕೆಯ ಅಂತ್ಯಕ್ರಿಯೆಗೂ ಬರಲಿಲ್ಲ ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.

ಆಕೆಯ ಅಂತ್ಯಕ್ರಿಯೆಗೆ ಕಂಪನಿಯ ಒಬ್ಬರೇ ಒಬ್ಬರು ಅಧಿಕಾರಿಗಳೂ ಬರಲಿಲ್ಲ. ಕಂಪನಿಗೆ ಸೇರಿದ ದಿನದಿಂದ ಆಕೆಗೆ ವಿಪರೀತ ಕೆಲಸ ನೀಡಲಾಗಿತ್ತು. ಅನ್ನಾ 2023 ರಲ್ಲಿ CA ಪರೀಕ್ಷೆಗಳನ್ನು ಉತ್ತೀರ್ಣರಾಗಿದ್ದರು. ಮಾರ್ಚ್ 2024 ರಲ್ಲಿ EY ಪುಣೆಗೆ ಕಾರ್ಯನಿರ್ವಾಹಕರಾಗಿ ಸೇರಿದರು. ಇದು ಆಕೆಯ ಮೊದಲ ಕೆಲಸವಾಗಿತ್ತು. ಆಕೆಗೂ ಕೆಲಸ ಮಾಡುವ ಉತ್ಸಾಹ ಇತ್ತು. ಇದನ್ನೇ ಕಂಪನಿ ಬಂಡವಾಳ ಮಾಡಿಕೊಂಡಿದೆ. ಆಕೆಗೆ ವಿಪರೀತ ಕೆಲಸ ಕೊಟ್ಟು ಟಾರ್ಗೆಟ್ ನೀಡಲಾಗಿತ್ತು. ಇದರಿಂದ ಮಗಳು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಕುಸಿದು ಹೋಗಿದ್ದಳು ಎಂದು ತಾಯಿ ಹೇಳಿದ್ದಾರೆ.

ಮಗಳು ದಿನವೂ ದಣಿದು ಮನೆಗೆ ಬರುತ್ತಿದ್ದಳು. ಕೆಲವೊಮ್ಮೆ ತನ್ನ ಬಟ್ಟೆಗಳನ್ನು ಬದಲಾಯಿಸದೆ ಹಾಸಿಗೆಯ ಮೇಲೆ ಕುಸಿದು ಬೀಳುತ್ತಿದ್ದಳು. ಟಾರ್ಗೆಟ್ ರೀಚ್ ಆಗಲು ತುಂಬಾ ಶ್ರಮಿಸುತ್ತಿದ್ದಳು. ಅವಳು ಹೋರಾಟಗಾರ್ತಿ, ಸುಲಭವಾಗಿ ಬಿಟ್ಟುಕೊಡುತ್ತಿರಲಿಲ್ಲ. ಕೆಲಸ ಬಿಡುವಂತೆ ಹೇಳಿದರೂ ಕೇಳಲಿಲ್ಲ ಎಂದು ತಾಯಿ ದುಃಖಿಸಿದ್ದಾರೆ.

ಬೇಕಾಗಿದ್ದಾರೆ…

ಪಡ್ಡೆಹೈಕಳ ಬಿಸಿಯೇರಿಸಿದ ಶಾಲಿನಿ ಪಾಂಡೆ ಈ ಫೋಟೋ !

ಗಗನಸಖಿಯರು ಸಮರ್ಪಕ ಒಳಉಡುಪು ಧರಿಸುವುದು ಕಡ್ಡಾಯ! ಏರ್ಲೈನ್ಸ್ ಸೂಚನೆ

ಇವುಗಳನ್ನು ತಿಂದರೆ ಸಾಕು ನಿಮ್ಮ ಮೆದುಳು ಕಂಪ್ಯೂಟರ್ ಗಿಂತ ವೇಗವಾಗಿ ಕೆಲಸ ಮಾಡುತ್ತದೆ; ಮೆದುಳಿನ ಆರೋಗ್ಯಕ್ಕಾಗಿ ಸೂಪರ್‌ಫುಡ್‌ಗಳು

TAGGED:A young woman is a victim of overworkthe mother wrote a letter condemning the negligence of the company
Share This Article
Facebook Twitter Copy Link Print
Previous Article ನಿಫಾ ಬೆನ್ನಲ್ಲೇ‌ ಮತ್ತೊಂದು ಆತಂಕ: ದುಬೈನಿಂದ ಕೇರಳಕ್ಕೆ ಬಂದ ವ್ಯಕ್ತಿಗೆ mpox ಸೋಂಕು ದೃಢ,‌ ಕಟ್ಟೆಚ್ಚರ ವಹಿಸಲು ಸೂಚನೆ
Next Article ನೀವು ಮಲಗೋದು ಹೇಗೆ? ನಿಮ್ಮ ನಿದ್ರಾ ಭಂಗಿಯಿಂದಲೇ ಗೊತ್ತಾಗತ್ತೆ ನಿಮ್ಮ ವ್ಯಕ್ತಿತ್ವ!

Popular Posts

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

You Might Also Like

ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read
ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?