newsics.com
ನಿದ್ರಿಸುವ ಭಂಗಿಯಿಂದಲೇ ಈ ವ್ಯಕ್ತಿಯ ವ್ಯಕ್ತಿತ್ವ ಅಳೆಯಬಹುದು. ಅವರು ಹೀಗೆಯೇ ಎಂದು ಹೇಳಬಹುದು. ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹೋಲಿಕೆ ಮಾಡಿದರೆ ಪ್ರತಿಯೊಬ್ಬರೂ ಮಲಗುವ ರೀತಿಯೇ ಭಿನ್ನ. ಇದರಿಂದಲೇ ಪ್ರತಿಯೊಬ್ಬರ ಗುಣ ಸ್ವಭಾವವನ್ನು ಮಲಗುವ ಭಂಗಿಯಿಂದಲೇ ನಿರ್ಣಯಿಸಬಹುದಾಗಿದೆ.
ನಿದ್ರಿಸುವ ಭಂಗಿಯು ಒಬ್ಬರಿಗಿಂತ ಮತ್ತೊಬ್ಬರದ್ದು ಭಿನ್ನವಾಗಿರುತ್ತದೆ. ಕೆಲವರಿಗೆ ತಾವು ರೂಢಿಸಿಕೊಂಡ ಭಂಗಿಯಲ್ಲಿ ಮಲಗಿದರೆ ಮಾತ್ರ ನಿದ್ದೆ ಆವರಿಸತ್ತೆ.
ಈ ನಿದ್ರಿಸುವ ರೀತಿ ಕೂಡ ನಿಮ್ಮ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ. ನೀವು ಮಲಗುವ ಭಂಗಿ ಯಾವುದು ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವವು ನಿರ್ಧಾರವಾಗುತ್ತದೆ.
ಬೇಬಿ ಭಂಗಿ
ಈ ಭಂಗಿಯನ್ನು ‘ಕರ್ಲಿಂಗ್ ಅಪ್ ಲೈಕ್ ಎ ಬೇಬಿ’ ಅಥವಾ ಭ್ರೂಣದ ಪೊಸಿಶನ್ ಎನ್ನಲಾಗುತ್ತದೆ. ಹೆಚ್ಚಿನ ಜನರು ಈ ಭಂಗಿಯಲ್ಲೇ ನಿದ್ರಿಸುತ್ತಾರೆ. ಈ ರೀತಿಯ ಜನರು ಮುಗ್ಧ ಸ್ವಭಾವದವರಾಗಿರುತ್ತಾರೆ. ಮುಗ್ಧ ಹಾಗೂ ಶಾಂತ ಸ್ವಭಾವದವರಾಗಿರುವ ಕಾರಣ ಹೊರಜಗತ್ತನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚಿನ ಸಂದರ್ಭದಲ್ಲಿ ಎಲ್ಲರನ್ನೂ ನಂಬಿ ಮೋಸ ಹೋಗುವುದೇ ಹೆಚ್ಚು.
ದಿಂಬಿನ ಜತೆ ಮಲಗುವುದು
ಕೆಲವರಿಗೆ ದಿಂಬನ್ನು ಹಿಡಿದುಕೊಂಡು ಮಲಗುವ ಅಭ್ಯಾಸವಿರುತ್ತದೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಸಹಾಯ ಮಾಡುವ ಗುಣವಿರುವ ಕಾರಣ, ಪ್ರೀತಿಸುವ ವ್ಯಕ್ತಿಗಳಿಗೆ ಜೀವ ಕೊಡಲು ಸಿದ್ಧವಿರುವ ವ್ಯಕ್ತಿತ್ವ ಇವರದ್ದಾಗಿರುತ್ತದೆ.
ಹೊಟ್ಟೆಯ ಮೇಲೆ ಮಲಗುವುದು
ಹೊಟ್ಟೆಯ ಮೇಲೆ ಮಲಗುವ ವ್ಯಕ್ತಿಗಳು ನೇರವಾದ, ಮೋಜಿನ, ತಮಾಷೆಯ ಮತ್ತು ಮುಕ್ತ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ. ಈ ಗುಣವುಳ್ಳ ವ್ಯಕ್ತಿಗಳು ಎಲ್ಲವನ್ನೂ ಸರಿಯಾಗಿ ನಿರ್ವಹಿಸುತ್ತಾರೆ. ಆದರೆ ಈ ರೀತಿಯ ಭಂಗಿಯಲ್ಲಿ ಮಲಗುವುದು ಅಭದ್ರತೆ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತದೆ.
ಸ್ಟಮಕ್ ಸ್ಲೀಪರ್
ಹೊಟ್ಟೆ ಕೆಳಗಾಗಿ ಮಲಗುವ ಭಂಗಿಯನ್ನು ಸ್ಟಮಕ್ ಸ್ಲೀಪರ್ ಪೊಸಿಶನ್ ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ ಮಲಗುವವರು ಎಲ್ಲರೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಎಲ್ಲರೊಂದಿಗೆ ಬೆರೆಯುವ ಈ ವ್ಯಕ್ತಿಗಳು ಆಲೋಚನೆ ಮಾಡುವುದು ಕಡಿಮೆ. ಜೀವನದಲ್ಲಿ ಸದಾ ರಿಸ್ಕ್ ತೆಗೆದುಕೊಳ್ಳುತ್ತಿರುತ್ತಾರೆ. ಈ ವ್ಯಕ್ತಿಗಳು ಟೀಕೆಗಳನ್ನು ಸಹಿಸದ ಕಾರಣ ಅಭದ್ರತೆಯ ಭಾವವೊಂದು ಇವರನ್ನು ಸದಾ ಕಾಡುತ್ತದೆ.
ಬೆನ್ನಿನ ಮೇಲೆ ಮಲಗುವುದು
ಕೆಲವರಿಗೆ ಬೆನ್ನಿನ ಮೇಲೆ ಮಲಗುವ ಅಭ್ಯಾಸವಿರುತ್ತದೆ. ಈ ವ್ಯಕ್ತಿಗಳು ಸದಾ ಉತ್ಸಾಹಿಗಳಾಗಿದ್ದು, ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ತನ್ನಿಂದ ಮಾತ್ರವಲ್ಲದೇ ಆಪ್ತರಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಕೆಲವೊಮ್ಮೆ ಈ ವ್ಯಕ್ತಿಗಳಿಗೆ ನಿರಾಸೆ ಆಗುವುದೇ ಹೆಚ್ಚು.
ಲಾಗ್ ಸ್ಲೀಪರ್
ಒಂದೇ ಮಗ್ಗುಲಿನಲ್ಲಿ ಎರಡೂ ಕೈಗಳನ್ನು ಒಟ್ಟಿಗೆ ಇಟ್ಟು ಮಲಗುವವರ ವ್ಯಕ್ತಿಗಳು ಸ್ನೇಹ ಜೀವಿಗಳಾಗಿರುತ್ತಾರೆ. ನಂಬಿಕೆ, ವಿಶ್ವಾಸಕ್ಕೆ ಅರ್ಹರಾಗಿದ್ದು, ತಮ್ಮ ಸ್ನೇಹಿತರ ಗುಂಪಿನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುತ್ತಾರೆ. ಹೆಚ್ಚು ಹೆಚ್ಚು ಸ್ನೇಹಿತರನ್ನು ಸಂಪಾದಿಸುವ ಗುಣವನ್ನು ಹೊಂದಿರುತ್ತಾರೆ.
ಸೈನಿಕನ ಭಂಗಿ
ಸೈನಿಕ ಹೇಗೆ ಸೀದಾ ನಿಲ್ಲುತ್ತಾನೋ ಹಾಗೆ ಮಲಗುವ ವ್ಯಕ್ತಿಗಳು ಬಹಳ ಕಟ್ಟುನಿಟ್ಟಿನ ಮತ್ತು ಕಠಿಣ ವ್ಯಕ್ತಿಯಾಗಿರುತ್ತಾರೆ. ಇವರು ಶಿಸ್ತುಬದ್ಧ ಜೀವನನ್ನು ನಡೆಸುವುದಲ್ಲದೆ ಎಲ್ಲ ವಿಷಯಗಳನ್ನು ಗಂಭೀರವಾಗಿ ಸ್ವೀಕರಿಸುವ ವ್ಯಕ್ತಿತ್ವವು ಇವರದ್ದಾಗಿರುತ್ತದೆ.
ಸ್ಟಾರ್ ಫಿಶ್‌ನಂತೆ ಮಲಗುವುದು
ಸ್ಟಾರ್ ಫಿಶ್‌ನಂತೆ ತನ್ನ ತೋಳು ಮತ್ತು ಕಾಲುಗಳನ್ನು ಚಾಚಿ ಮಲಗುವ ಈ ವ್ಯಕ್ತಿಗಳು, ಸ್ನೇಹ ಮತ್ತು ಸಂಬಂಧಗಳನ್ನು ಗೌರವಿಸುತ್ತಾರೆ. ಉತ್ತಮ ಸ್ನೇಹಿತನಾಗಲು ಪ್ರಯತ್ನಿಸುವುದರೊಂದಿಗೆ ಇತರರ ಮಾತನ್ನು ಶಾಂತಿಯಿಂದ ಕೇಳುತ್ತಾರೆ. ತಮ್ಮ ಸುತ್ತಮುತ್ತಲಿನವರ ನೋವನ್ನು ತಮ್ಮ ನೋವೆಂದು ಭಾವಿಸಿ ಸಹಾಯ ಮಾಡಲು ಮುಂದಾಗುತ್ತಾರೆ.