Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಓಲಾ ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿ‌ ಮೇಲೆ ದರ್ಪ ಮೆರೆದಿದ್ದ ಆಟೋ ಡ್ರೈವರ್ ಬಂಧನ, ವಿಡಿಯೋ ನೋಡಿ
ಕರ್ನಾಟಕಪ್ರಮುಖ

ಓಲಾ ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿ‌ ಮೇಲೆ ದರ್ಪ ಮೆರೆದಿದ್ದ ಆಟೋ ಡ್ರೈವರ್ ಬಂಧನ, ವಿಡಿಯೋ ನೋಡಿ

Share
3 Min Read
SHARE

newsics.com

ಬೆಂಗಳೂರು: ಆ್ಯಪ್ ಮೂಲಕ ಬುಕ್ ಮಾಡಿದ್ದ ರೈಡ್ ಕ್ಯಾನ್ಸಲ್ ಮಾಡಿದ್ದಕ್ಕಾಗಿ ಮಹಿಳೆ‌ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಆದರೆ, ಬಂಧಿತ ಆಟೋ ಡ್ರೈವರ್ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.
ಬುಕಿಂಗ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ ಸಿಟ್ಟಾದ ಆಟೋ ಚಾಲಕ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಲ್ಲದೆ ಆಕೆಯ ಕೆನ್ನೆಗೆ ಬಾರಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆಟೋ ಚಾಲಕ ತನ್ನ ಕೆನ್ನೆಗೆ ಹೊಡೆದಿರುವ ವಿಡಿಯೋ ಇಲ್ಲವಾದರೂ, ವೈರಲ್‌ ಆಗಿರುವ ವಿಡಿಯೋದಲ್ಲಿ ಮಹಿಳೆ ‘ನನ್ನ ಕೆನ್ನೆಗೆ ಹೊಡೆದಿದ್ದೇಕೆ..’ ಎಂದು ಆಟೋ ಡ್ರೈವರ್‌ಗೆ ಪ್ರಶ್ನೆ ಮಾಡಿದ್ದಾರೆ.

ಆಟೋ ಡ್ರೈವರ್‌ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ನನ್ನ ಮೇಲೆ ಹಲ್ಲೆಯಾಗಿದೆ ಎಂದು ಯುವತಿ ಆರೋಪ ಮಾಡಿದ್ದಾರೆ. ಪೀಕ್ ಅವರ್‌ನಲ್ಲಿ ಓಲಾ ಆ್ಯಪ್‌ನಲ್ಲಿ ಆಟೋ ಬುಕ್ ಆಗಿದೆ. ಯುವತಿ ಮತ್ತು ಸ್ನೇಹಿತ ಇಬ್ಬರೂ ಎರಡು ಆಟೋ ಬುಕ್ ಮಾಡಿದ್ದಾರೆ. ಮೊದಲಿಗೆ ಬಂದ ಆಟೋವನ್ನು ಯುವತಿ ಹತ್ತಿದ್ದಾಳೆ. ಇನ್ನೊಂದು ಆಟೋವನ್ನು ಈ ವೇಳೆ ಯುವತಿ ಕ್ಯಾನ್ಸಲ್‌ ಮಾಡಿದ್ದಾಳೆ.

ಆಟೋ ಕ್ಯಾನ್ಸಲ್ ಮಾಡಿದ್ದಕ್ಕೆ ಚಾಲಕ ರೇಗಾಡಿದ್ದಾನೆ. ಆಟೋ ಚಾಲಕನ ವರ್ತನೆ ಖಂಡಿಸಿ ಓಲಾ ಕಂಪನಿಗೆ ದೂರು ನೀಡಿದ್ದು, ಯುವತಿ ದೂರಿಗೆ ಓಲಾ ಕೂಡ ಪ್ರತಿಕ್ರಿಯೆ ನೀಡಿದೆ.

ಚಾಲಕನ ನಡೆ ಗಾಬರಿ ಹುಟ್ಟಿಸುವಂತಿದೆ. ದಯವಿಟ್ಟು ಸಂಪೂರ್ಣ ಮಾಹಿತಿ ‌ಕೊಡಿ. ಆಟೋ ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಯುವತಿಯ ಬೆಂಬಲಕ್ಕೆ ನಿಂತ ಓಲಾ ನಿಂತಿದೆ.
ಸಿಂಪಲ್‌ ರೈಡ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ ನಾನು ನಿನ್ನೆ(ಸೆ.4) ತೀವ್ರ ಕಿರುಕುಳ ಎದುರಿಸಿದ್ದೇನೆ. ಬೆಂಗಳೂರಿನಲ್ಲಿ ನಿಮ್ಮ ಆಟೋ ಚಾಲಕ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ವರದಿ ಮಾಡಿದ್ದರೂ, ನಿಮ್ಮ ಕಸ್ಟಮರ್‌ ಸಪೋರ್ಟ್‌ ಟೀಮ್‌ ಸ್ಪಂದನೆ ನೀಡುತ್ತಿಲ್ಲ. ತಕ್ಷಣವೇ ಕ್ರಮ ತೆಗೆದುಕೊಳ್ಳಿ’ ಎಂದು ನಿತಿ ಎನ್ನುವ ಮಹಿಳೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಬುಧವಾರ (ಸೆ.4) ನಾನು ಹಾಗೂ ನನ್ನ ಫ್ರೆಂಡ್‌ ಇಬ್ಬರೂ ಓಲಾ ಪೀಕ್‌ ಅವರ್‌ನಲ್ಲಿ ಎರಡು ಆಟೋಗಳನ್ನು ಬುಕ್‌ ಮಾಡಿದ್ದೆವು. ಮೊದಲು ಬಂದ ಆಟೋವನ್ನು ನಾವು ಹತ್ತಿಕೊಂಡು ಮತ್ತೊಂದನ್ನು ಕ್ಯಾನ್ಸಲ್‌ ಮಾಡಿದೆವು. ಆದರೆ, ಬುಕ್ಕಿಂಗ್‌ ಕ್ಯಾನ್ಸಲ್‌ ಆದ ಆಟೋ ಡ್ರೈವರ್‌ ನಮ್ಮ ಫಾಲೋ ಮಾಡಿಕೊಂಡು ಬಂದಿದ್ದಲ್ಲದೆ, ಪರಿಸ್ಥಿತಿಯನ್ನು ಆತನಿಗೆ ತಿಳಿಸುವ ಮುನ್ನವೇ ಕೂಗಾಡಲು ಆರಂಭಿಸಿದ. ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ.
ನಮ್ಮನ್ನು ಬಾಯಿಗೆ ಬಂದ ಹಾಗೆ ಬೈದಿದ್ದು ಮಾತ್ರವಲ್ಲದೆ, ನಿಮ್ಮ ಅಪ್ಪನ ಆಟೋ ಇದಾ ಎಂದು ಪ್ರಶ್ನೆ ಮಾಡಿದ್ದಾನೆ. ಇದನ್ನು ರೆಕಾರ್ಡ್‌ ಮಾಡಿದ್ದರಿಂದ ಆತನಿಗೆ ಇನ್ನಷ್ಟು ಸಿಟ್ಟು ಬಂದಿದೆ. ಪೊಲೀಸರಿಗೆ ದೂರು ನೀಡ್ತೇನೆ ಎಂದರೆ, ನನಗೆ ಸವಾಲ್ಉ ಹಾಕಿದ್ದಾನೆ. ಪೊಲೀಸರ ಯಾವ ಭಯವೂ ಈತನಿಗೆ ಕಾಣಲಿಲ್ಲ ಎಂದು ಬರೆದುಕೊಂಡಿದ್ದಾರೆ.

ನಮ್ಮ ಒಂದೇ ತಪ್ಪು ಏನೆಂದರೆ, ಎರಡು ಆಟೋಗಳನ್ನು ಏಕಕಾಲದಲ್ಲಿ ಬುಕ್‌ ಮಾಡಿದ್ದು. ಅದಕ್ಕೆ ಕಾರಣ ಕ್ಲಾಸ್‌ ಮಿಸ್‌ ಆಗಬಾರದು ಎನ್ನುವ ಉದ್ದೇಶವಷ್ಟೇ. ಬೆಂಗಳೂರಿನಲ್ಲಿ ಆಟೋಗಳು ರೈಡ್‌ಗಳನ್ನು ಸಾಮಾನ್ಯವಾಗಿ ಕ್ಯಾನ್ಸಲ್‌ ಮಾಡುತ್ತವೆ. ಇಲ್ಲದೇ ಇದ್ದಲ್ಲಿ ಹೆಚ್ಚಿನ ಹಣವನ್ನು ಕೇಳುತ್ತಾರೆ. ಅವರು ನನ್ನೊಂದಿಗೆ ಜಗಳವಾಡಿದ್ದನ್ನು ಸಹಿಸಿಕೊಳ್ಳಬಹುದು.

ಆದರೆ, ಬೆದರಿಕೆ ಹಾಕಿದ್ದು ಹಾಗೂ ಹಲ್ಲೆಗೆ ಮುಂದಾಗಿದ್ದು ಸರಿಯಲ್ಲ. ನನ್ನ ಫೋನ್‌ಅನ್ನು ಕಸಿದುಕೊಳ್ಳಲು ಮುಂದಾದಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ನಾನು ಇದಕ್ಕೆ ವಿರೋಧಿಸಿದೆ. ಈ ವೇಳೆ ಆಟೋ ಡ್ರೈವರ್‌ ಮುಂದೆಯೇ ನನ್ನ ಕೆನ್ನೆಗೆ ಬಾರಿಸಿದ. ಈ ವೇಳೆ ಅಕ್ಕಪಕ್ಕದವರು ಆತನನ್ನು ನಿಯಂತ್ರಿಸಲು ಪ್ರಯತ್ನ ಮಾಡಿದ್ದಾರೆ. ಹಾಗಿದ್ದರೂ ಆತ ಬೆದರಿಸುವುದನ್ನು ಮುಂದುವರಿಸಿದ್ದ. ಚಪ್ಪಲಿಯಿಂದ ಹೊಡೆಯುತ್ತೇನೆ ಎಂದೂ ಆತ ಬೆದರಿಕೆ ಹಾಕುತ್ತಿದ್ದ ಎಂದು ಬರೆದಿದ್ದಾರೆ.
ಈ ಹಂತದಲ್ಲಿ ನನ್ನ ಆಟೋ ಡ್ರೈವರ್‌ ಪರಿಸ್ಥಿತಿಯನ್ನು ತಿಳಿ ಮಾಡಿದ. ಆದರೆ, ಓಲಾ ಪ್ರತಿಕ್ರಿಯೆ ಮಾತ್ರ ನಿರಾಶಾದಾಯಕವಾಗಿತ್ತು. ಅಪ್ಲಿಕೇಶನ್‌ ಮೂಲಕ ಘಟನೆಯನ್ನು ವಿವರಿಸಿದಾಗ ನಮಗೆ ಆಟೋಮೇಟೆಡ್‌ ರಿಪ್ಲೈಗಳು ಬಂದವು. ಕಸ್ಟಮರ್‌ ಸಪೋರ್ಟ್‌ಗೆ ಹೋಗುವ ಪ್ರಯತ್ನ ಕೂಡ ವಿಫಲವಾಯಿತು ಎಂದಿದ್ದಾರೆ.

ಆಕೆ ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ಆಟೋ ಡ್ರೈವರ್‌, ನಿಮ್ಮ**, ನಿನ್ನಪ್ಪ ಗ್ಯಾಸ್‌ ಕೊಡ್ತಾನಾ.. ಎಂದು ಆಟೋ ಚಾಲಕ ಹೇಳಿರುವುದು ದಾಖಲಾಗಿದೆ. ಬೆಂಗಳೂರು ಪೊಲೀಸರೂ ಈ ಘಟನೆ ಬಗ್ಗೆ ನಿಗಾ ವಹಿಸಿದ್ದಾರೆ.

https://twitter.com/i/status/1831499841819832505

ಭೀಕರ ಬರ: ಎಲೆ, ಕೀಟ ತಿಂದು ಬದುಕುತ್ತಿದ್ದಾರೆ ಈ‌ ಜನ!

ಬಾಲಕನ ಬೋಲ್ಡ್ ಪ್ರಶ್ನೆಗೆ ಬೆಚ್ಚಿಬಿದ್ದ ಉರ್ಫಿ, ಕುಟುಂಬದವರೆದುರೇ ನಟಿಗೆ ಮುಜುಗರ

ಸಿದ್ದರಾಮಯ್ಯ ಬದಲಿಸಲು ಹೆಚ್ಚಿದ ಒತ್ತಡ, ಒಮ್ಮತದ ಸಿಎಂ ಅಭ್ಯರ್ಥಿಗಾಗಿ ಕಾಂಗ್ರೆಸ್ ಹೈಕಮಾಂಡ್ ಶೋಧ

ರಾತ್ರಿಯೆಲ್ಲಾ ಅದಿತಿ ಪ್ರಭುದೇವ ಮಲಗೋದೆ ಇಲ್ವಂತೆ ! ಕಾರಣವೇನು ಗೊತ್ತಾ?

TAGGED:Auto driver arrested for assaulting young woman for canceling Ola rideWatch Video
Share This Article
Facebook Twitter Copy Link Print
Previous Article ರಾತ್ರಿಯೆಲ್ಲಾ ಅದಿತಿ ಪ್ರಭುದೇವ ಮಲಗೋದೆ ಇಲ್ವಂತೆ ! ಕಾರಣವೇನು ಗೊತ್ತಾ?
Next Article ಲೈಂಗಿಕ ಗುಲಾಮಳಂತೆ ಸತತವಾಗಿ ಬಳಸಿಕೊಂಡ: ನಟಿ ಸೌಮ್ಯ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?