newsics.com
ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ರಾತ್ರಿ ನಿದ್ದೆ ಮಾಡೋದೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಮಗು ಹುಟ್ಟಿ ಮಗು ಎರಡೂವರೆ ತಿಂಗಳು ಇರುವಾಗಲೇ ರಾಜಾ ರಾಣಿ ಶೋಗೆ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದರು. ಇದರ ಜೊತೆ ಜೊತೆಗೆ ಮಗಳನ್ನು ಕೂಡ ರಾಜಾ ರಾಣಿ ಶೋಗೆ ಕರೆದುಕೊಂಡು ಹೋಗುತ್ತಾರಂತೆ. ಹೀಗಾಗಿ ತಮ್ಮ ಇಡೀ ದಿನವನ್ನು ನಟಿ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಮಗಳ ಜೊತೆಗೆ ಕಾಲ ಕಳೆಯುವ ನಟಿ ಇಡೀ ರಾತ್ರಿ ನಿದ್ದೆ ಮಾಡೋದೇ ಇಲ್ವಂತೆ. ಬದಲಿಗೆ ತಮ್ಮ ಮುದ್ದಾದ ಮಗಳ ಜೊತೆಗೆ ಇಡೀ ರಾತ್ರಿ ಮಾತಾಡುತ್ತಾರಂತೆ.
ಸಂದರ್ಶನದಲ್ಲಿ ಮಾತಾಡಿದ ನಟಿ ಅದಿತಿ ಪ್ರಭುದೇವ, ನನ್ನ ಮಗಳು ರಾತ್ರಿಯಲ್ಲಾ ಆಟವಾಡುತ್ತಾಳೆ. ಬೆಳ್ಳಿಗೆ ಫುಲ್ ನಿದ್ದೆ ಮಾಡುತ್ತಾಳೆ. ಇದರಿಂದ ನನಗೆ ತುಂಬಾ ಅಡ್ವಾಂಟೇಜ್ ಆಗುತ್ತೆ. ಹೀಗಾಗಿ ನನಗೆ ಕೆಲಸ ಮಾಡುವುದಕ್ಕೆ ಸ್ವಲ್ಪ ಸಮಯ ಸಿಕ್ಕಂತೆ ಆಗುತ್ತದೆ. ಮೊದ ಮೊದಲು ಕಷ್ಟ ಆಯ್ತು. ಈಗ ನನಗೆ ಅದು ಸೂಟ್ ಆಗಿದೆ. ನಾನು ಹಾಗೂ ನನ್ನ ಮಗಳು ಇಬ್ಬರೇ ರಾತ್ರಿ ಕಾಲ ಕಳೆಯುತ್ತೇವೆ. ನನಗೆ ಅನಿಸಿದ್ದನ್ನು ನಾನು ಅವಳಿಗೆ ಹೇಳುತ್ತೇನೆ. ಅದಕ್ಕೆ ಅವಳು ನಗುತ್ತಾಳೆ ಅದು ನನಗೆ ಖುಷಿ ಸಿಗುತ್ತೆ. ಹೀಗಾಗಿ ನನ್ನ ಪತಿ ಮನೆಯಿಂದ ಆಚೆ ಇರುತ್ತಾರೆ. ಆಗ ನಾನು, ನಮ್ಮನೆ ಮುದ್ದಿನ ನಾಯಿ ಮತ್ತು ಮಗಳು ಕಾಲ ಕಳೆಯುತ್ತಾ ಇರುತ್ತೇವೆ ಅಂತ ಹೇಳಿದ್ದಾರೆ.