newsics.com
ಕೆಲ ದಿನಗಳ ಹಿಂದಷ್ಟೇ ನಟಿ ಊರ್ವಶಿ ರೌಟೇಲಾ ಬಾತ್ ರೂಮ್ ವಿಡಿಯೋ ಲೀಕ್ ಆಗಿ ವೈರಲ್ ಆಗಿತ್ತು. ಇದು ನಟಿ ಚಿತ್ರದ ಪ್ರಚಾರದ ಗಿಮಿಕ್ ಆಗಿತ್ತು. ಈಗ ಊರ್ವಶಿ ರೌಟೇಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಊರ್ವಶಿ ವೀಡಿಯೋ ಒಂದನ್ನು ಶೇರ್ ಮಾಡಿದ್ದು ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದೆ.

ಈ ಪೋಸ್ಟ್ ವೈರಲ್ ಆದ ಕೂಡಲೇ ಆಕೆಯ ಅಭಿಮಾನಿಗಳು ಆತಂಕಗೊಂಡಿದ್ದಾರೆ . ನಟಿ ಊರ್ವಶಿಗೆ ಏನಾಯ್ತು ಎನ್ನುತ್ತಿದ್ದಾರೆ. ಕಮೆಂಟ್ ಮೂಲಕ ವಿಚಾರಿಸುತ್ತಿದ್ದಾರೆ. ನಟಿಯ ಆರೋಗ್ಯದ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
‘ಬೆರಳಿಗೆ ಗಾಯವಾದ ಬಳಿಕ ಆಸ್ಪತ್ರೆಗೆ ದಾಖಲಾದ ಮೊದಲ ಭಾರತೀಯ ಮಹಿಳೆ’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, ‘ಮೇಡಮ್ ಪಬ್ಲಿಕ್ಸ್ ಮತ್ತೆ ಮತ್ತೆ ಮೂರ್ಖರಾಗುವುದಿಲ್ಲ’. ಎಂದೆಲ್ಲಾ ನಟಿಯನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ. ಆದ್ರೆ, ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ತಿಳಿದುಬಂದಿಲ್ಲ.
ಊರ್ವಶಿ ರೌಟೇಲಾ ಹಿಂದಿ ಸಿನಿಮಾ ಮೂಲಕ ಭಾರೀ ಕ್ರೇಜ್ ಹುಟ್ಟಿಸಿದ್ದಾರೆ. ಈಗಾಗಲೇ ‘ಸನಮ್ ರೇ’, ‘ಗ್ರೇಟ್ ಗ್ರ್ಯಾಂಡ್ ಮಸ್ತಿ’ ಮತ್ತು ‘ಹೇಟ್ ಸ್ಟೋರಿ 4’ ನಂತಹ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲಿ ಊರ್ವಶಿ ನಟಿಸಿದ್ದಾರೆ. ಆದರೆ ಹೆಚ್ಚಿನ ಮನ್ನಣೆ ಸಿಕ್ಕಿಲ್ಲ. ಸದ್ಯ ತೆಲುಗು ಸಿನಿಮಾಗಳಲ್ಲಿ ಐಟಂ ಸಾಂಗ್ಗಳಿಗೆ ಕುಣಿಯುತ್ತಾ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳ ಮೂಲಕ ಮಿಂಚುತ್ತಿದ್ದಾರೆ.