newsics.com
ಎಷ್ಟೋ ಬಾರಿ ಪ್ರೀತಿ ಕುರುಡು ಎಂಬ ಮಾತನ್ನು ನೀವು ಕೇಳಿರಬಹುದು. ಯಾರಿಗೆ ಯಾವಾಗ ಹೇಗೆ ಪ್ರೀತಿ ಹುಟ್ಟುತ್ತದೆ ಅಥವಾ ಹೇಗೆ ಪ್ರೀತಿ ಬೆಳೆಯುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ.
ಒಂದು ವೇಳೆ ನೀವೇನಾದರೂ ಪ್ರೀತಿಯಲ್ಲಿ ಬಿದ್ದಿದ್ದರೆ, ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ 5 ನಡವಳಿಕೆಗಳು ನೀವು ಪ್ರೀತಿಸುವವರಲ್ಲಿ ಕಂಡು ಬಂದರೆ ಅವರು ನಿಮ್ಮನ್ನು ಪ್ರೀತಿಸುತ್ತಿರುವ ಸಾಧ್ಯತೆ ಹೆಚ್ಚಿದೆ ಎಂದರ್ಥ.
ಹೆಚ್ಚು ಕಾಳಜಿ:
ಏನು ಮಾಡುತ್ತಿದ್ದೀರಾ? ಆಗಾಗ ಏನಾದರೂ ತಿನ್ನುತ್ತಿರಿ, ನಿಮ್ಮ ಆರೋಗ್ಯ ಹೇಗಿದೆ? ಹೀಗೆ ಸಣ್ಣ-ಪುಟ್ಟ ವಿಚಾರಗಳನ್ನು ಪದೇ-ಪದೇ ವಿಚಾರಿಸುತ್ತಿರುವುದು, ಹೆಚ್ಚು ಕಾಳಜಿ ವಹಿಸುವುದು ಅವರು ನಿಮ್ಮನ್ನು ಇಷ್ಟಪಡುತ್ತಿರುವ ಸೂಚನೆಗಳಲ್ಲಿ ಒಂದಾಗಿದೆ. ಅವರು ನಿಮ್ಮನ್ನು ಗೇಲಿ ಮಾಡಿದರೂ ಮತ್ತು ಆಗಾಗ ನಿಮಗೆ ತೊಂದರೆ ಕೊಟ್ಟರೂ, ನಿಮ್ಮ ಮಾತು ಮತ್ತು ಅಭಿಪ್ರಾಯಗಳನ್ನು ಹೆಚ್ಚಾಗಿ ಗೌರವಿಸುವವರಾಗಿದ್ದರೆ ಅವರು ನಿಮ್ಮ ಮೇಲೆ ಪ್ರೀತಿ ಹೊಂದಿದ್ದಾರೆ ಎಂದರ್ಥ.
ಒಬ್ಬ ವ್ಯಕ್ತಿ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಿದ್ದಾರೆ ಎಂದರೆ ಮತ್ತು ನೀವು ಅವರೊಂದಿಗೆ ಇರುವಾಗ ಆ ವ್ಯಕ್ತಿ ಸಂತೋಷವಾಗಿರುತ್ತಾರೆ ಎಂದರೆ ಖಂಡಿತವಾಗಿಯೂ ಅವರು ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂದೇ ಅಂದುಕೊಳ್ಳಬಹುದು.
ನಿಮ್ಮ ಜನ್ಮ ದಿನಾಂಕ, ರಾಶಿಚಕ್ರ ಚಿಹ್ನೆ, ನಿಮ್ಮ ನೆಚ್ಚಿನ ಆಹಾರ, ಇಷ್ಟಪಡುವ ಚಲನಚಿತ್ರಗಳು, ನಟರು ಹೀಗೆ ಅನೇಕ ವಿಚಾರಗಳನ್ನು ನೀವು ಕೇಳಿದ ತಕ್ಷಣ ಹೇಳಿದರೆ, ಅವರು ನಿಮ್ಮನ್ನು ಹೆಚ್ಚು ಪ್ರೀತಿಸುತ್ತಿದ್ದಾರೆ ಎಂದರ್ಥ.