newsics.com
ಗಾಜಿಯಾಬಾದ್: ರಸ್ತೆ ಬಳಿ ಮಹಿಳೆಯೊಬ್ಬರು ಅರೆನಗ್ನವಾಗಿ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ. ಅರೆನಗ್ನವಾಗಿ ಕುಳಿತ ಮಹಿಳೆ ರಾಜಕೀಯ ಮುಖಂಡನೋರ್ವನ ಮಗನ ವಿರುದ್ಧ ಅತ್ಯಾಚಾರದ ಆರೋಪವನ್ನು ಮಾಡಿದ್ದಾರೆ. ಆರೋಪಿ ನನ್ನನ್ನು ಪೊದೆಯೊಳಗೆ ಎಳೆದೊಯ್ದು ಮದ್ಯ ಕುಡಿದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಗರದಲ್ಲಿ ನಡೆದಿದೆ. ನಾನು ಐದು ಮಕ್ಕಳ ತಾಯಿ, ನನ್ನನ್ನು ಬಿಟ್ಬಿಡು ಎಂದು ಕೈ ಮುಗಿದು ಬೇಡಿಕೊಂಡರೂ ಆತ ಕೇಳಲಿಲ್ಲ. ನನ್ನನ್ನು ಅತ್ಯಾಚಾರ ಮಾಡಿದ ಬಳಿಕವೇ ಆತ ಅಲ್ಲಿಂದ ಹೋದ ಎಂದು ಮಹಿಳೆ ಆರೋಪಿಸಿದ್ದಾರೆ.
ಅತ್ಯಾಚಾರದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಅರೆನಗ್ನಳಾಗಿ ಕುಳಿತು ಮಹಿಳೆ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸಾರ್ವಜನಿಕರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕು, ಕಾಮುಕರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ
ನಿಮಗೆ ಆಸೆಯಾದ್ರೆ ಇಲ್ಲಿಗೆ ಬನ್ನಿ ; ಕಾಮುಕರಿಗೆ ಲೈಂಗಿಕ ಕಾರ್ಯಕರ್ತೆ ಮನವಿ