newsics.com
ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ವಾಪಸ್ ಗೆ NASA ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಈ ಮಧ್ಯೆ ಸುನಿತಾ ವಿಲಿಯಮ್ಸ್ ಡೇಂಜರ್ ಝೋನ್ನಲ್ಲಿದ್ದು, ಮುಂದಿನ 14 ದಿನದೊಳಗೆ ಭೂಮಿಗೆ ವಾಪಸ್ ಕರೆತರಲೇಬೇಕಿದೆ.
ಸಂದಿಗ್ಧತೆ, ಒತ್ತಡಕ್ಕೆ ಸಿಲುಕಿರುವ ನಾಸಾ ಸತತ ಪ್ರಯತ್ನ ಮಾಡುತ್ತಿದ್ದು, ಆಗಸ್ಟ್ 19-20 ರೊಳಗೆ ಭೂಮಿಗೆ ವಾಪಸ್ ಕರೆತರಲೇಬೇಕಾಗಿದೆ. ಒಂದು ದಿನ ಹೆಚ್ಚಾದ್ರೂ ಗಗನಯಾನಿಗಳ ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆ ಇದೆ.
ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6 ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ.
ಆದರೆ, 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ. ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇಬೇಕಾದ ಪರಿಸ್ಥಿತಿ ಎದುರಾಗಿದೆ.
ಜೀವಭಯದಲ್ಲಿದ್ದ ಹಸೀನಾಗೆ ಭದ್ರತೆ ನೀಡಿದ್ದೇ ಭಾರತದ ರಫೇಲ್ ಯುದ್ಧ ವಿಮಾನಗಳು!
ಓರ್ವ ಹುಡುಗನಿಗಾಗಿ ಕ್ಲಾಸ್‌ನಲ್ಲೇ ಇಬ್ಬರು ಹುಡುಗಿಯರ ಹೊಡೆದಾಟ! ರಣಾಂಗಣವಾಯ್ತು ಕ್ಲಾಸ್‌ರೂಂ… ವಿಡಿಯೊ ವೈರಲ್