newsics.com
ಗ್ವಾಲಿಯರ್(ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿ ಮಹಿಳಾ ಪುನರ್ವಸತಿ ಕೇಂದ್ರದಿಂದಲೇ ಬಾಲಕಿಯೊಬ್ಬಳನ್ನು ಮಾಸ್ಕ್ ಧರಿಸಿ ಬಂದ ಆರು ಯುವಕರು ಅಪಹರಿಸಿದ್ದಾರೆ.
20 ನಿಮಿಷದಲ್ಲಿ ಈ ಯುವಕರು ಅತ್ಯಂತ ಭದ್ರತೆಯ ಪುನರ್ವಸತಿ ಕೇಂದ್ರದಿಂದ ಬಾಲಕಿಯನ್ನು ಅಪಹರಿಸಿದ್ದಾರೆ. ಈ ದೃಶ್ಯ ಪುನರ್ವಸತಿ ಕೇಂದ್ರದ ಮುಂಭಾಗದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಒಬ್ಬರು ಮಹಿಳಾ ಭದ್ರತಾ ಸಿಬ್ಬಂದಿ, ಇಬ್ಬರು ಇತರ ಭದ್ರತಾ ಸಿಬ್ಬಂದಿ, ಒಬ್ಬ ಪೊಲೀಸ್ ಅಧಿಕಾರಿ ನಿದ್ದೆಯಲ್ಲಿದ್ದ ವೇಳೆ ಭಾನುವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಗ್ವಾಲಿಯರ್‌ನ ಕಂಪೂನಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಈ ಮಹಿಳಾ ಪುನರ್ವಸತಿ ಕೇಂದ್ರದ 4 ಅಡಿ ಎತ್ತರದ ಕಾಂಪೌಂಡ್ ಹಾರಿದ ಆರು ಅಪಹರಣಕಾರರು ಈ ಪುನರ್ವಸತಿ ನಿಲಯದ ಕೀ ಪಡೆಯಲು ಕೋಲೊಂದನ್ನು ಬಳಸಿ ಗಾರ್ಡ್ ರೂಮ್‌ನಲ್ಲಿದ್ದ ಕೀಯನ್ನು ಕಿಟಕಿ ಮೂಲಕ ಹೊರತೆಗೆದಿದ್ದಾರೆ. ಬಳಿಕ ಡೋರ್ ಒಪನ್ ಮಾಡಿದ್ದು, ಬಾಲಕಿಯನ್ನು ಹೊರಗೆ ಕರೆದುಕೊಂಡು ಬಂದು ಕೈಹಿಡಿದು ಕರೆದೊಯ್ದಿದ್ದಾರೆ.
ವೀಡಿಯೋದಲ್ಲಿ ಕಾಣಿಸುವಂತೆ ಬಾಲಕಿ ಮಾಸ್ಕ್ ಧರಿಸಿದವರಲ್ಲಿ ಒಬ್ಬನ ಕೈ ಹಿಡಿದು ಜತೆಗೆ ಹೋಗುತ್ತಿರುವುದು ಕಾಣುತ್ತಿದೆ. ಈ ವೇಳೆ ನಿಲಯದ ಭದ್ರತೆಗೆ ಇದ್ದ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿ ಇಬ್ಬರೂ ನಿದ್ದೆಗೆ ಜಾರಿದ್ದಾರೆ.
ಅಪಹರಣಕ್ಕೊಳಗಾದ ಹುಡುಗಿ ಈ ಹಿಂದೆಯೂ ಎರಡು ಬಾರಿ ಮನೆಬಿಟ್ಟು ಓಡಿ ಹೋಗಿದ್ದಳು. ಈ ಪ್ರಕರಣದಲ್ಲಿ ಆಕೆಯ ಲವರ್ ಭಾಗಿಯಾಗಿರುವ ಬಾಲಕಿ ಥಾತಿಪುರ್ ಪ್ರದೇಶದಿಂದ ನಾಪತ್ತೆಯಾಗಿದ್ದಳು. ಆತನ ಬಾಯ್ ಫ್ರೆಂಡ್ ವಿರುದ್ಧ ಆತ ಅಪಹರಣ ಪ್ರಕರಣ ದಾಖಲಾಗಿತ್ತು.
ಇದಾದ ನಂತರ ಬಾಲಕಿಯನ್ನು ಪತ್ತೆ ಮಾಡಿ ಜೂನ್ 7ರಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಆಕೆ ಮತ್ತೆ ಪೋಷಕರ ಜತೆ ಹೋಗುವುದಕ್ಕೆ ನಿರಾಕರಿಸಿದಳು. ಇದಾದ ನಂತರ ಪೊಲೀಸರು ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರು.
ಪುನರ್ವಸತಿ ಕೇಂದ್ರದಿಂದಲೂ ಆಕೆ ಓಡಿ ಹೋಗಲು ಯತ್ನಿಸಿದ್ದಳು. ಹೀಗಾಗಿ ಆಕೆಯನ್ನು ಪುನರ್ವಸತಿ ಕೇಂದ್ರದ ತುಂಬಾ ಒಳಭಾಗದಲ್ಲಿರುವ ಕೋಣೆಯಲ್ಲಿರಿಸಲಾಗಿತ್ತು. ಆದರೆ ಅಲ್ಲಿಂದಲೂ ಆಕೆ ಎಸ್ಕೇಪ್ ಆಗಿದ್ದಾಳೆ.
#WATCH | CCTV Footage: Six Masked Men Abduct 17-Year-Old Girl In Middle Of The Night From Shelter Home In Gwalior #MPNews #MadhyaPradesh pic.twitter.com/zUtU4KJ23C
— Free Press Madhya Pradesh (@FreePressMP) July 21, 2024
ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಜತೆಗೆ ಶೀತಗಾಳಿ ಬೀಸುವ ಸಾಧ್ಯತೆ; ಹಲವೆಡೆ ರೆಡ್ ಅಲರ್ಟ್
ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ರೀಲ್ಸ್ ಮಾಡಲು ಹೋಗಿ ವಿದ್ಯಾರ್ಥಿ ಸಾವು
ಮೀಸಲಾತಿ ಬಳಿಕ ಕೆಲಸದ ಅವಧಿ ವಿಸ್ತರಣೆ ವಿವಾದ… ಸರ್ಕಾರದ ವಿರುದ್ಧ ಐಟಿ ಉದ್ಯೋಗಿಗಳು ಅಸಮಾಧಾನ!