newsics.com
ಬೆಂಗಳೂರು: ಕಾರು ಚಾಲನೆ ಕಲಿಯಲು ಬಂದ ಯುವತಿಯೆದುರು ಹಸ್ತಮೈಥುನ ಮಾಡಿಕೊಂಡಿರುವವನ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಅಣ್ಣಪ್ಪ ಎನ್ನುವವರ ವಿರುದ್ಧ ದೂರು ದಾಖಲಾಗಿದೆ. 15 ದಿನಗಳ ವಿಶೇಷ ಕ್ಲಾಸ್ ಎಂದು ಜೂ.26ರಂದು ಕಾರು ಚಾಲನೆ ತರಬೇತಿ ಆರಂಭಿಸಿದ್ದ ಆರೋಪಿ, ಜು.7ರಂದು ಬೆಳಗ್ಗೆ 6 ಗಂಟೆಗೆ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಹೇಳಿಕೊಡಲು ಕರೆದೊಯ್ದಿದ್ದ.
ಬಸವೇಶ್ವರನಗರದ ನ್ಯಾಷನಲ್ ಸ್ಕೂಲ್ ಮೇಲ್ಸೇತುವೆಯಲ್ಲಿ ಯುವತಿ ಕಾರು ಚಾಲನೆ ಮಾಡುತ್ತಿದ್ದಾಗ ಪಕ್ಕದ ಸೀಟಿನಲ್ಲಿ ಕುಳಿತು ಆರೋಪಿಯು ಹಸ್ತಮೈಥುನ ಮಾಡಿಕೊಂಡಿದ್ದಾನೆನ್ನಲಾಗಿದೆ. ಈ ಬಗ್ಗೆ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.