newsics.com
ಬೀಜಿಂಗ್: ತಿನ್ನುವ ಚಾಲೆಂಜ್‌ನಲ್ಲಿ ಭಾಗವಹಿಸಿದ್ದ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್‌ವೊಬ್ಬರು ನೇರಪ್ರಸಾರದ ವೇಳೆಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಪ್ಯಾನ್ ಕ್ಸಿಯಾಟಿಂಗ್ (24) ಮೃತಪಟ್ಟಿರುವ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್. ಇವರು 10 ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ತಿನ್ನುವ ಚಾಲೆಂಜ್ ಸ್ವೀಕರಿಸಿದ್ದರು.
ಈ ಚಾಲೆಂಜ್‌ನಲ್ಲಿ ಒಮ್ಮೆಲೆ 10 ಕೆಜಿಗೂ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದ ಅವರು ಲೈವ್ ಕಾರ್ಯಕ್ರಮದಲ್ಲೇ ಮೃತಪಟ್ಟಿದ್ದಾರೆ. ಅವರ ಹೊಟ್ಟೆಯು ವಿರೂಪಗೊಂಡಿದ್ದು, ಜೀರ್ಣವಾಗದ ಆಹಾರವನ್ನು ಹೊಂದಿದೆ ಎಂಬುದು ಅವರ ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ.