newsics.com
ಗ್ವಾಲಿಯರ್: ಮಧ್ಯಪ್ರದೇಶದಲ್ಲಿ ವ್ಯಕ್ತಿಯೋರ್ವ ನಕಲಿ ಬಿಸ್ಲೆರಿ ನೀರು ಕುಡಿದು ಐಸಿಯುಗೆ ದಾಖಲಾಗಿದ್ದಾರೆ.
ಗ್ವಾಲಿಯರ್‌ನ ಆಪಗಂಜ್ ನಿವಾಸಿ ನದೀಮ್ ಖಾನ್ ಎನ್ನುವವರು ಬಾಯಾರಿಕೆ ಕಾರಣ ಶೀಟ್ಲಾ ಡೈರಿಯಿಂದ ಬಿಸ್ಲೆರಿ ಕಂಪನಿಯ ನೀರಿನ ಬಾಟಲ್ ಎಂದುಕೊಂಡು ನಕಲಿ ಬಿಸ್ಲೆರಿ (Bissilleri) ವಾಟರ್ ಬಾಟಲ್ ಖರೀದಿಸಿ ನೀರು ಕುಡಿದಿದ್ದಾರೆ.
ನೀರು ಕುಡಿದ ತಕ್ಷಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸೆಸಲಾಗಿದೆ.
ಘಟನೆ ಸಂಬಂಧ ಬಹೋದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.