newsics.com
ಇಸ್ಲಾಮಾಬಾದ್: ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿರುವ ಪಾಕಿಸ್ತಾನ ದೂತಾವಾಸಕ್ಕೆ ನುಗ್ಗಿ ಅಫ್ಘಾನಿಸ್ತಾನದ ನಾಗರಿಕರು ಕಲ್ಲು ತೂರಾಟ ನಡೆಸಿ ರಾಯಭಾರ ಕಚೇರಿ ಮೇಲಿನ ಪಾಕಿಸ್ತಾನದ ಧ್ವಜವನ್ನು ತೆಗೆದು ಸುಡುವ ಪ್ರಯತ್ನವನ್ನೂ ಮಾಡಿದ್ದಾರೆ.
ಅಫ್ಘಾನಿಸ್ತಾನದ ನಾಗರಿಕರ ಪ್ರತಿಭಟನೆಯ ಸಂದರ್ಭದಲ್ಲಿ ದಾಳಿ ಸಂಭವಿಸಿದೆ ಎಂದು ಮಾಧ್ಯಮಗಳು ಈ ಕುರಿತಿ ವರದಿಗಳನ್ನ ಮಾಡಿವೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಪ್ರತಿಭಟನಾಕಾರರು ಕಾನ್ಸುಲೇಟ್ಗೆ ನುಗ್ಗಿ, ಕಲ್ಲುಗಳನ್ನು ಎಸೆಯುವ ಮತ್ತು ಪಾಕಿಸ್ತಾನದ ಧ್ವಜವನ್ನು ತೆಗೆದುಹಾಕುವುದನ್ನು ಕಾಣಬಹುದಾಗಿದೆ.
8 ರಿಂದ 10 ಅಫ್ಘಾನ್ ದಾಳಿಕೋರರು ಪಾಕಿಸ್ತಾನಿ ದೂತಾವಾಸಕ್ಕೆ ನುಗ್ಗಿ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ ಪರಾರಿಯಾಗಿದ್ದರೂ ಇಲ್ಲಿಯವರೆಗೆ ಘಟನೆ ಸಂಬಂಧ ಯಾರನ್ನೂ ಬಂಧಿಸಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿರುವ ತನ್ನ ಕಾನ್ಸುಲೇಟ್ನ ಮೇಲೆ ಉಗ್ರರ ಗ್ಯಾಂಗ್ ನಿನ್ನೆ ನಡೆಸಿದ ದಾಳಿಯನ್ನು ಮತ್ತು ತನ್ನ ಕಾನ್ಸುಲರ್ ಮಿಷನ್ ಆವರಣದ ಪವಿತ್ರತೆ ಮತ್ತು ಭದ್ರತೆಯನ್ನು ರಕ್ಷಿಸಲು ಜರ್ಮನ್ ಅಧಿಕಾರಿಗಳು ವಿಫಲವಾಗಿರುವುದನ್ನು ಪಾಕಿಸ್ತಾನ ಬಲವಾಗಿ ಖಂಡಿಸುತ್ತದೆ” ಎಂದು ಕಿಡಿಕಾರಿದೆ.