newsics.com
ತಿರುಚ್ಚಿ: ತಮಿಳುನಾಡಿನಲ್ಲಿ ರೈತರೊಬ್ಬರು ತಮ್ಮ ಸ್ವಂತ ಹಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನ ಕಟ್ಟಿ ವಿಶೇಷ ಅಭಿಮಾನ ಮೆರೆದಿದ್ದಾರೆ.
ತಿರುಚ್ಚಿ ಬಳಿಯ ಸಾತನೂರಿನ ರೈತ ಶಂಕರ್ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷವಾಗಿ ಗೌರವ ಸಲ್ಲಿಸಲು ದೇವಾಲಯ ನಿರ್ಮಿಸಿ ಪೂಜಿಸುತ್ತಿದ್ದಾರೆ. ತಾವು ದುಡಿದ ಸ್ವಂತ ಹಣದಿಂದ ಬರೋಬ್ಬರಿ 1.25 ಲಕ್ಷ ರೂಪಾಯಿ ಖರ್ಚು ಮಾಡಿ ದೇವಾಲಯ ನಿರ್ಮಿಸಿದ್ದಾರೆ.
ತಿರುಚ್ಚಿ ಜಿಲ್ಲೆಯ ತರಿಯೌರ್ ಪ್ರದೇಶದ ಎರಕುಡಿ ಗ್ರಾಮದವರಾದ ರೈತ ಶಂಕರ್ ಅವರು ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಕೃಷಿ ಮಾಡಲು ತಮ್ಮ ಊರಿಗೆ ಮರಳಿದರು.
ಪ್ರಧಾನಿ ಮೋದಿಯವರ ವಿವಿಧ ಯೋಜನೆಗಳಿಂದ ಪ್ರೇರಿತರಾದ ಶಂಕರ್ ಅವರನ್ನು ಗೌರವಿಸಲು ನಿರ್ಧರಿಸಿ, ದೇವಸ್ಥಾನ ಕಟ್ಟಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಬಿಗ್ ಬಿಗೆ ಕಿಸ್ ಮಾಡಲು ಎರಡೆರಡು ಬಾರಿ ಹಲ್ಲುಜ್ಜಿ ರೆಡಿಯಾಗಿದ್ದ ನಟಿ!
ಮೊಬೈಲ್ ಪಾಸ್ವರ್ಡ್ ಕೇಳಿದ ಗರ್ಲ್ಫ್ರೆಂಡ್, ಸಮುದ್ರಕ್ಕೆ ಹಾರಿದ ಭೂಪ
ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಮೊದಲ ಬಾರಿಗೆ ವಸ್ತ್ರ ಸಂಹಿತೆ ಜಾರಿ
ಪತ್ನಿಯೆಂದು ಭಾವಿಸಿ ವೇದಿಕೆಯಲ್ಲೇ ಅನ್ಯ ಮಹಿಳೆಗೆ ಮುತ್ತಿಕ್ಕಲು ಹೋದ ಜೋ ಬೈಡೆನ್! ವಿಡಿಯೊ ನೋಡಿ
ಮೈಕ್ರೋಸಾಫ್ಟ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ: ಜಗತ್ತಿನ ಹಲವೆಡೆ ಕಲ್ಲೋಲ ಕಾರಣವೇನು..?