newsics.com
ನವದೆಹಲಿ: ಯುವಕನೊಬ್ಬ ತನ್ನ ಗೆಳತಿ ಫೋನ್ ಪಾಸ್‌ವರ್ಡ್ ಕೇಳಿದಾಗ, ಯಾವುದೇ ಕಾರಣಕ್ಕೂ ಆಕೆಗೆ ಪಾಸ್‌ವರ್ಡ್ ಗೊತ್ತಾಗಬಾರದೆಂದು ಉಪಾಯವೊಂದನ್ನು ಹೂಡಿ ಪೊಲೀಸರ ಮುಂದೆಯೇ ಸಮುದ್ರಕ್ಕೆ ಹಾರಿದ್ದಾನೆ. ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದೆ.
ಫ್ಲೋರಿಡಾದ ಕೀ ವೆಸ್ಟ್ ಬಳಿಯ ಸಮುದ್ರದಲ್ಲಿ ಎ.ಜೆ ಎಂಬಾತ ಆತನ ಗರ್ಲ್‌ಫ್ರೆಂಡ್ ಜೊತೆ ಮೀನುಗಾರಿಕಾ ದೋಣಿಯಲ್ಲಿ ಕುಳಿತು ವಿಹರಿಸುತ್ತಿದ್ದ. ಆ ಸಂದರ್ಭದಲ್ಲಿ ಪೊಲೀಸರು ಈ ಜೋಡಿ ಬೋಟ್‌ನಲ್ಲಿ ಕೆಲವು ಕೋಡ್ ಉಲ್ಲಂಘನೆ ಮಾಡಿರುವುದನ್ನು ಗಮನಿಸುತ್ತಾರೆ. ತಕ್ಷಣ ಬೋಟ್ ಬಳಿ ಬಂದ ಪೊಲೀಸರು ಗುರುತಿನ ಚೀಟಿಯನ್ನು ಕೇಳುತ್ತಾರೆ.
ಎಜೆ ಮತ್ತು ಆಕೆಯ ಗೆಳತಿ ಬಳಿ ಯಾವುದೇ ಐಡಿ ಇರಲಿಲ್ಲ. ಈ ಕಾರಣದಿಂದ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳುತ್ತಾರೆ. ಇದರಿಂದ ಭಯಗೊಂಡ ಎಜೆ ಗೆಳತಿ, ಸರಿಯಾದ ಪ್ರೂಫ್ ತೋರಿಸಲು ಎಜೆಯ ಮೊಬೈಲ್ ತೆಗೆದುಕೊಂಡು, ನಂತರ ಅದರ ಪಾಸ್‌ವರ್ಡ್ ಕೇಳಿದ್ದಾಳೆ.
ಗರ್ಲ್‌ಫ್ರೆಂಡ್‌ಗೆ ಪಾಸ್‌ವರ್ಡ್ ನೀಡುವುದನ್ನು ತಪ್ಪಿಸಲು ಎಜೆ ಪೊಲೀಸರ ಮುಂದೆಯೇ ಸಮುದ್ರಕ್ಕೆ ಹಾರಿದ್ದಾನೆ. ನಂತರ ಈಜುತ್ತಾ ದಡ ಸೇರಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
Florida man jumps in ocean to avoid giving cops, girlfriend his phone’s passcode: ‘You’re telling me I’m resisting’ https://t.co/zcSqxdzqlo pic.twitter.com/EpUivFbpDE
— New York Post (@nypost) July 17, 2024