newsics.com/ನ್ಯೂಸಿಕ್ಸ್
ಅಂಕೋಲಾ ಮೂಲದ ಡಾ. ದಿನೇಶ ಲಕ್ಷ್ಮಣ ಭಟ್ಕಳ ಅವರು ಬೆಳಗಾವಿಯ ಮಂಡೋಲಿ ರಸ್ತೆಯಲ್ಲಿನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ ಗ್ಯಾಲರಿಯಲ್ಲಿ ತಲೆಗೆ ಶೂಟ್ ಮಾಡಿಕೊಂಡು ವೈದ್ಯ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಡಾ. ದಿನೇಶ ಲಕ್ಷ್ಮಣ ಭಟ್ಕಳ ಅವರು ಲಂಗ್ಸ್ ಕ್ಯಾನ್ಸರ್‌ಗೆ ತುತ್ತಾಗಿದ್ರು ಎನ್ನಲಾಗ್ತಿದೆ. ಕ್ಯಾನ್ಸರ್ ಬಂದ ಬಳಿಕ ನೊಂದಿದ್ದ ವೈದ್ಯ, ಇದೇ ವಿಚಾರಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಟಿಳಕವಾಡಿ ಸಿಪಿಐ ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮುಂಜಾನೆ 6.57ಕ್ಕೆ ಡಾ.ದಿನೇಶ್ ಭಟ್ಕಳ್ ಅವರು ತಮ್ಮ ಸಂಸ್ಥೆಯ ಮುಖ್ಯಸ್ಥರಿಗೆ ಆಂಗ್ಲ ಭಾಷೆಯಲ್ಲಿ ವಾಟ್ಸಪ್ ಸಂದೇಶ ರವಾನಿಸಿದ್ದು, ಎದೆ ನೋವು ಸಹಿಸಲು ಸಾಧ್ಯವಾಗದ ಕಾರಣ ತ್ವರಿತ ನಿರ್ಣಯ ತೆಗೆದುಕೊಳ್ಳುತ್ತಿದ್ದು, ಇದು ನನ್ನ ಸ್ವಂತ ತೀರ್ಮಾನವಾಗಿದೆ, ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ ಪೊಲೀಸ್ ಕಮಿಷನರ್ ಅವರಿಗೆ ಮಾಹಿತಿ ನೀಡಿ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ. ಅಪರೂಪದ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕೊನೆಗೂ ಸಾವಿನ ದಾರಿ ಹಿಡಿಯುವ ನಿರ್ಧಾರ ಮಾಡಿದ್ದಾರೆ. ವೈದ್ಯಕೀಯ ಸಂಸ್ಥೆ ಕಮಲಾ ಮೆಡಿಕಲ್ ಸೆಂಟರಿನಲ್ಲಿ ಮುಖ್ಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಸ್ಥಳೀಯವಾಗಿ ಭಟ್ಕಳ್ ಡಾಕ್ಟರ್ ಎಂದೇ ಕರೆಯಲ್ಪಡುತ್ತಿದ್ದರು.
ಪಿಕಳೆ ದಂಪತಿಗಳ ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆಗಳು ಬೆಳಗಾವಿಯ ಕೆ.ಎಲ್.ಇ ಸಂಸ್ಥೆಗೆ ಹಸ್ತಾಂತರವಾದ ನಂತರ ಸಂಸ್ಥೆಯ ಸ್ಥಳೀಯ ಕಾರ್ಯದರ್ಶಿಯಾಗಿ
ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು.
ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಭಟ್ಕಳ ಡಾಕ್ಟರ್ ಅದೇ ಕಾರಣದಿಂದ ಬೆಳಗಾವಿಯ ಟಿಳಕವಾಡಿಯ ತಮ್ಮ ಮನೆಯ ಗ್ಯಾಲರಿಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಡಾ.ದಿನೇಶ್ ಭಟ್ಕಳ್ ಅವರ ಪತ್ನಿ ಸಾಧನಾ ಭಟ್ಕಳ್ ಸಹವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ದಿನೇಶ್ ಭಟ್ಕಳ್ ಅವರ ನಿಧನಕ್ಕೆ ಹಲವಾರು ಗಣ್ಯರು, ವೈದ್ಯ ಸಂಘಟನೆಗಳು, ಕೆ.ಎಲ್.ಇ ಸಮೂಹ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ.
ಡ್ರ್ಯಾಗನ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹೀರೋ ಅಲ್ಲ; ಪ್ರಶಾಂತ್ ನೀಲ್ ಹೇಳಿದ್ದೇನು?