newsics.com/ನ್ಯೂಸಿಕ್ಸ್
ಚಿನ್ನ ಖರೀದಿಸುವವರ ಪಾಲಿಗೆ ಇಂದು ಶುಭಶುಕ್ರವಾರ ಎನಿಸಿಕೊಂಡಿದೆ. ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡಿದೆ.
ಬರೋಬ್ಬರಿ ಮೂರು ದಿನಗಳ ಬಳಿಕ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇದು ಆಭರಣ ಖರೀದಿಸುವವರ ಮುಖದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಹೌದು, ಇಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 440 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಮೇ 22ರಂದು 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 15,949 ರುಪಾಯಿಗೆ ಇಳಿಕೆಯಾಗಿದೆ. ನಿನ್ನೆಯ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,993 ರುಪಾಯಿಗಳಾಗಿತ್ತು.
ಇನ್ನು ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲೂ 400 ರುಪಾಯಿ ಇಳಿಕೆಯಾಗಿದೆ. ಇಂದು 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,620 ರುಪಾಯಿಗಳಾಗಿವೆ. ನಿನ್ನೆ ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,660 ರುಪಾಯಿಗಳಾಗಿತ್ತು.
ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆಯಾದರೂ, ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಒಂದು ಕೆಜಿ ಬೆಳ್ಳಿ ಬೆಲೆ 2,85,000 ರುಪಾಯಿಗಳಾಗಿದ್ದು, ಬೆಲೆಯಲ್ಲಿ ಸ್ಥಿರತೆ ಮುಂದುವರೆದಿದೆ.
ಡ್ರ್ಯಾಗನ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹೀರೋ ಅಲ್ಲ; ಪ್ರಶಾಂತ್ ನೀಲ್ ಹೇಳಿದ್ದೇನು?