Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಪದೇಪದೇ ಓಆರ್‌ಎಸ್ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಎಚ್ಚರ
ಲೈಫ್‌ಸ್ಟೈಲ್ಆರೋಗ್ಯ

ಪದೇಪದೇ ಓಆರ್‌ಎಸ್ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಎಚ್ಚರ

Share
2 Min Read
SHARE

ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ತೀವ್ರ ಬಿಸಿಲಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾಪಾಡುವುದು ದೊಡ್ಡ ಸಾಹಸವಾಗಿದೆ. ಈ ಸಮಯದಲ್ಲಿ ಬಿಸಿಲಿನಿಂದ ದೇಹವನ್ನು ಹೈಡ್ರೇಟ್‌ ಇಡಲು ಜನರು ಓಆರ್‌ಎಸ್ (ORS) ಮೊರೆ ಹೋಗುತ್ತಿದ್ದಾರೆ. ಕೆಲವರು ದಿನಪೂರ್ತಿ ನೀರಿನ ಬಾಟಲಿಯಲ್ಲಿ ಓಆರ್‌ಎಸ್ ಮಿಶ್ರಣವನ್ನು ತುಂಬಿಕೊಂಡು ಕುಡಿಯುವ ಅಭ್ಯಾಸವನ್ನೂ ಮಾಡಿಕೊಂಡಿರುತ್ತಾರೆ.

ಆದರೆ ಪ್ರತಿದಿನ ಅದರಲ್ಲಿಯೂ ಪದೇಪದೇ ಓಆರ್‌ಎಸ್ ಕುಡಿಯುವುದು ಎಲ್ಲರಿಗೂ ಸೂಕ್ತವೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ದೆಹಲಿ ಸಫ್ದರ್ಜಂಗ್ ಆಸ್ಪತ್ರೆಗೆ ಸೇರಿದ ಹಿರಿಯ ವೈದ್ಯ ಡಾ. ದೀಪಕ್ ಸುಮನ್ ಅವರು ಕೆಲವು ಮಾಹಿತಿ ಹೆಂಚಿಕೊಂಡಿದ್ದು, ಬೇಸಿಗೆಯಲ್ಲಿ ಓಆರ್‌ಎಸ್ ದೇಹದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ಕಡಿಮೆ ಮಾಡುವುದರ ಜೊತೆಗೆ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ಸಹಾಯಕವಾಗುತ್ತದೆ ಎಂದಿದ್ದಾರೆ.

ಡಾ. ದೀಪಕ್ ಸುಮನ್ ಹೇಳುವ ಪ್ರಕಾರ, ಓಆರ್‌ಎಸ್ ನಲ್ಲಿ ಸೋಡಿಯಂ, ಪೊಟ್ಯಾಶಿಯಂ ಮತ್ತು ಗ್ಲೂಕೋಸ್ ಇರುವುದರಿಂದ ಡಿಹೈಡ್ರೇಶನ್‌ ಆದಾಗ ದೇಹ ಶೀಘ್ರ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಯಾವುದೇ ಆಗಲಿ ಮಿತಿಯಲ್ಲಿ ಸೇವಿಸುವುದು ಒಳ್ಳೆಯದು ಎಂದು ಎಚ್ಚರಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಓಆರ್‌ಎಸ್ ಕುಡಿಯುವುದರಿಂದ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಇದರಲ್ಲಿ ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಇರುವುದರಿಂದ ಅತಿಯಾಗಿ ಕುಡಿಯುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಯಾರಿಗೆ ಓಆರ್‌ಎಸ್ ಅಗತ್ಯ?

ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು, ಫೀಲ್ಡ್ ವರ್ಕ್ ಮಾಡುವವರು, ಮಕ್ಕಳು ಮತ್ತು ವೃದ್ಧರಲ್ಲಿ ಡಿಹೈಡ್ರೇಶನ್ ಕಂಡುಬಂದರೆ ಓಆರ್‌ಎಸ್ ಉಪಯುಕ್ತವಾಗಿದೆ. ಜೊತೆಗೆ ಅತಿಸಾರ ಅಥವಾ ಲೂಸ್ ಮೋಶನ್ ಸಮಸ್ಯೆ ಇದ್ದಾಗ ವೈದ್ಯರ ಸಲಹೆಯಂತೆ ಓಆರ್‌ಎಸ್ ಸೇವಿಸುವುದು ಉತ್ತಮ.

ಎಲ್ಲರೂ ಓಆರ್‌ಎಸ್ ಕುಡಿಯಬೇಕೇ?

ವೈದ್ಯರ ಪ್ರಕಾರ, ಸಾಮಾನ್ಯವಾಗಿ ಸಾಕಷ್ಟು ನೀರು ಕುಡಿಯುತ್ತಿರುವ ಮತ್ತು ಡಿಹೈಡ್ರೇಶನ್ ಇಲ್ಲದ ವ್ಯಕ್ತಿಗಳಿಗೆ ಪದೇಪದೇ ಓಆರ್‌ಎಸ್ ಕುಡಿಯುವ ಅಗತ್ಯವಿಲ್ಲ. ಹೆಚ್ಚು ಓಆರ್‌ಎಸ್ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಬಹುದು. ಇದಲ್ಲದೆ ಉಪ್ಪಿನ ಪ್ರಮಾಣ ಹೆಚ್ಚಿರುವುದರಿಂದ ಹೈ ಬಿಪಿ ರೋಗಿಗಳಿಗೆ ಸಮಸ್ಯೆಯಾಗಬಹುದು. ಅತಿಯಾದ ಸೇವನೆಯಿಂದ ದೇಹದ ಎಲೆಕ್ಟ್ರೋಲೈಟ್ ಸಮತೋಲನ ಹಾಳಾಗಿ ಕಿಡ್ನಿಗೆ ಹಾನಿಯಾಗುವ ಸಾಧ್ಯತೆಯೂ ಇದೆ. ಅದರಲ್ಲಿಯೂ ಕಿಡ್ನಿ ಸಂಬಂಧಿತ ಸಮಸ್ಯೆ ಇರುವವರು, ಹೈ ಬ್ಲಡ್ ಪ್ರೆಶರ್ ಇರುವವರು, ಹೃದಯ ರೋಗಿಗಳು, ಡಯಾಬಿಟೀಸ್ ಇರುವವರು ಇದರಿಂದ ಆದಷ್ಟು ದೂರವಿರುವುದೇ ಒಳ್ಳೆಯದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಸಾಕಷ್ಟು ನೀರು, ಮಜ್ಜಿಗೆ, ಎಳನೀರು ಮತ್ತು ತಾಜಾ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರ ಆಯ್ಕೆಯಾಗಿದೆ. ಓಆರ್‌ಎಸ್ ಅನ್ನು ಅಗತ್ಯವಿದ್ದಾಗ ಮಾತ್ರ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಸುರಕ್ಷಿತ.

ಇರಾನ್ ಯುದ್ಧದಲ್ಲಿ ಡ್ರೋನ್‌ ಸೇರಿದಂತೆ ಅಮೆರಿಕದ 42 ಯುದ್ಧ ವಿಮಾನಗಳು ನಾಶ: ವರದಿ

TAGGED:Is it a habit to drink ORS frequently? Then don't forget to know this.
Share This Article
Facebook Twitter Copy Link Print
Previous Article ಇರಾನ್ ಯುದ್ಧದಲ್ಲಿ ಡ್ರೋನ್‌ ಸೇರಿದಂತೆ ಅಮೆರಿಕದ 42 ಯುದ್ಧ ವಿಮಾನಗಳು ನಾಶ: ವರದಿ
Next Article ಡೆತ್​ನೋಟ್​ ಬರೆದಿಟ್ಟು ಮಂಡ್ಯದ ಬಾಲೆಯರು ಕಣ್ಮರೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?