Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇರಾನ್ ಯುದ್ಧದಲ್ಲಿ ಡ್ರೋನ್‌ ಸೇರಿದಂತೆ ಅಮೆರಿಕದ 42 ಯುದ್ಧ ವಿಮಾನಗಳು ನಾಶ: ವರದಿ
ಪ್ರಮುಖವಿದೇಶ

ಇರಾನ್ ಯುದ್ಧದಲ್ಲಿ ಡ್ರೋನ್‌ ಸೇರಿದಂತೆ ಅಮೆರಿಕದ 42 ಯುದ್ಧ ವಿಮಾನಗಳು ನಾಶ: ವರದಿ

Share
2 Min Read
SHARE

newsics.com/ನ್ಯೂಸಿಕ್ಸ್

ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಯುಎಸ್‌ ಭಾರಿ ಹಿನ್ನಡೆ ಅನುಭವಿಸಿದೆ. ಕಳೆದ ಫೆಬ್ರವರಿ 28 ರಂದು ಆರಂಭವಾದ ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯ ಅವಧಿಯಲ್ಲಿ ಅಮೆರಿಕದ ಬರೋಬ್ಬರಿ 42 ಅತ್ಯಾಧುನಿಕ ಯುದ್ಧವಿಮಾನಗಳು ಹಾಗೂ ಡ್ರೋನ್‌ಗಳು ಧ್ವಂಸಗೊಂಡಿವೆ ಎಂದು ಅಮೆರಿಕದ ‘ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್’ (CRS) ವರದಿ ಬಹಿರಂಗಪಡಿಸಿದೆ.

ಯುದ್ಧದಲ್ಲಿ MQ-9 ರೀಪರ್ ಡ್ರೋನ್‌ಗಳು (24), F-15E ಸ್ಟ್ರೈಕ್ ಈಗಲ್ ಫೈಟರ್ ಜೆಟ್ (04), MC-130J ಕಮಾಂಡೋ II (ವಿಶೇಷ ಕಾರ್ಯಾಚರಣೆ ವಿಮಾನ) (02), F-35A ಲೈಟ್ನಿಂಗ್ II ಫೈಟರ್ ಜೆಟ್ (01), A-10 ಥಂಡರ್‌ಬೋಲ್ಟ್ II (ದಾಳಿ ವಿಮಾನ) (01), KC-135 ಸ್ಟ್ರಾಟೋಟ್ಯಾಂಕರ್ (ಇಂಧನ ಮರುಪೂರಣ ವಿಮಾನ) (07), E-3 ಸೆಂಟ್ರಿ (AWACS – ಮುನ್ನೆಚ್ಚರಿಕೆ ವಿಮಾನ) (01), HH-60W ಜಾಲಿ ಗ್ರೀನ್ II (ರಕ್ಷಣಾ ಹೆಲಿಕಾಪ್ಟರ್) (01) ಹಾಗೂ MQ-4C ಟ್ರೈಟಾನ್ ಡ್ರೋನ್ (01) ಸೇರಿವೆ ಎಂದು ವರದಿ ತಿಳಿಸಿದೆ.

ಯುದ್ಧದ ವೆಚ್ಚ ಎಷ್ಟು? :

ಇರಾನ್ ವಿರುದ್ಧ ಹಮ್ಮಿಕೊಂಡಿರುವ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಮಿಲಿಟರಿ ಕಾರ್ಯಾಚರಣೆಯ ಒಟ್ಟು ವೆಚ್ಚ ಈಗಾಗಲೇ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸುಮಾರು 29 ಬಿಲಿಯನ್ ಡಾಲರ್‌ ಮುಟ್ಟಿದೆ ಎಂದು ಪೆಂಟಗನ್ ಇತ್ತೀಚೆಗೆ ಘೋಷಿಸಿದೆ. ಮೇ 12 ರಂದು ನಡೆದ ಸಂಸದೀಯ ವಿಚಾರಣೆಯ ವೇಳೆ ಪೆಂಟಗನ್ ಹಣಕಾಸು ಮುಖ್ಯಸ್ಥ ಜೂಲ್ಸ್ ಹರ್ಸ್ಟ್ III ಮಾತನಾಡಿ, “ಯುದ್ಧದಲ್ಲಿ ಹಾನಿಗೊಳಗಾದ ಮಿಲಿಟರಿ ಉಪಕರಣಗಳ ದುರಸ್ತಿ ಅಥವಾ ಮರು-ಖರೀದಿಯ ವೆಚ್ಚವನ್ನು ಸೂಕ್ಷ್ಮವಾಗಿ ಅಂದಾಜಿಸಿರುವುದರಿಂದ ಈ ವೆಚ್ಚದ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ರಕ್ಷಣಾ ಇಲಾಖೆಯು ಇದುವರೆಗೆ ಯುದ್ಧದ ನಷ್ಟಗಳ ಬಗ್ಗೆ ಯಾವುದೇ ಸಮಗ್ರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಅಮೆರಿಕ ಸಂಸತ್ತಿಗೆ ನೀತಿ ಮತ್ತು ಕಾನೂನು ವಿಶ್ಲೇಷಣೆಗಳನ್ನು ಒದಗಿಸುವ ಸಿಆರ್‌ಎಸ್ (CRS) ಸಂಸ್ಥೆಯು, ಮಾಧ್ಯಮ ವರದಿಗಳು, ರಕ್ಷಣಾ ಇಲಾಖೆ ಹಾಗೂ ಯುಎಸ್ ಸೆಂಟ್ರಲ್ ಕಮಾಂಡ್ ನೀಡಿರುವ ಹೇಳಿಕೆಗಳನ್ನು ಆಧರಿಸಿ ಈ ನಷ್ಟದ ಪಟ್ಟಿಯನ್ನು ಸಿದ್ಧಪಡಿಸಿದೆ.

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಈ ಯುದ್ಧ ಆರಂಭವಾಗಿತ್ತು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ ಹಲವು ಪ್ರಮುಖ ನಾಯಕರು ಹತರಾಗಿದ್ದರು.

ಅಮೆರಿಕ ಸಂಸತ್ತಿನ ಈ ವರದಿಯನ್ನು ತನ್ನ ‘X’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ, ಅಮೆರಿಕಾಗೆ ನೇರ ಎಚ್ಚರಿಕೆ ನೀಡಿದ್ದಾರೆ. “ಯುದ್ಧ ಆರಂಭವಾದ ಕೆಲವೇ ತಿಂಗಳುಗಳಲ್ಲಿ ಅಮೆರಿಕ ಸಂಸತ್ತು ಬಿಲಿಯನ್ ಗಟ್ಟಲೆ ಮೌಲ್ಯದ ಡಜನ್‌ಗಟ್ಟಲೆ ವಿಮಾನಗಳ ನಷ್ಟವನ್ನು ಒಪ್ಪಿಕೊಂಡಿದೆ. ಜಗತ್ತೇ ಹೆಮ್ಮೆಪಡುವ ಅಮೆರಿಕದ ಅತ್ಯಾಧುನಿಕ F-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಮೊದಲ ಕೀರ್ತಿ ನಮ್ಮ ಸಶಸ್ತ್ರ ಪಡೆಗಳಿಗೆ ಸಲ್ಲುತ್ತದೆ. ಒಂದು ವೇಳೆ ಡೊನಾಲ್ಡ್ ಟ್ರಂಪ್ ಮತ್ತೆ ಇರಾನ್ ವಿರುದ್ಧ ಮಿಲಿಟರಿ ಕ್ರಮಕ್ಕೆ ಮುಂದಾದರೆ, ಈ ಬಾರಿ ನಾವು ಕಲಿತಿರುವ ಪಾಠಗಳೊಂದಿಗೆ ಅಮೆರಿಕನ್ ಪಡೆಗಳಿಗೆ ‘ಇನ್ನೂ ಅನೇಕ ಭೀಕರ ಆಘಾತಗಳನ್ನು’ ನೀಡಲಿದ್ದೇವೆ,” ಎಂದು ಅರಾಗ್ಚಿ ಗುಡುಗಿದ್ದಾರೆ.

ನೀಲಣ್ಣನವರ್ ಗೆ ಸ್ಯಾಂಡಲ್‌ವುಡ್’ ಲಿಂಕ್; ಸನ್ನಿ ಲಿಯೋನ್‌ಗೆ ಕೊಟ್ಟಿದ್ದೆಷ್ಟು?

TAGGED:42 US warplanesdestroyed in Iran war: Reportincluding drone
Share This Article
Facebook Twitter Copy Link Print
Previous Article ನೀಲಣ್ಣನವರ್ ಗೆ ಸ್ಯಾಂಡಲ್‌ವುಡ್’ ಲಿಂಕ್; ಸನ್ನಿ ಲಿಯೋನ್‌ಗೆ ಕೊಟ್ಟಿದ್ದೆಷ್ಟು?
Next Article ಪದೇಪದೇ ಓಆರ್‌ಎಸ್ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಎಚ್ಚರ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?