Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಶ್ರೀ ಲೀಲಾ, ಕ್ರಿಕೆಟಿಗ ತಿಲಕ್​ ವರ್ಮಾ ಡೇಟಿಂಗ್​ ಗಾಸಿಪ್​ಗೆ ಬ್ರೇಕ್
ಕರ್ನಾಟಕಪ್ರಮುಖಮನರಂಜನೆ

ಶ್ರೀ ಲೀಲಾ, ಕ್ರಿಕೆಟಿಗ ತಿಲಕ್​ ವರ್ಮಾ ಡೇಟಿಂಗ್​ ಗಾಸಿಪ್​ಗೆ ಬ್ರೇಕ್

Share
3 Min Read
SHARE

newsics.com/ನ್ಯೂಸಿಕ್ಸ್

ನಟಿ ಶ್ರೀಲೀಲಾ ಹಾಗೂ ಭಾರತೀಯ ಯುವ ಕ್ರಿಕೆಟರ್ ತಿಲಕ್ ವರ್ಮಾ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದವು. ಸದ್ಯ ಈ ಎಲ್ಲಾ ಡೇಟಿಂಗ್ ಗಾಸಿಪ್‌ಗಳಿಗೆ ನಟಿಯ ತಾಯಿ ಸ್ವರ್ಣಲತಾ ಅವರು ತೆರೆ ಎಳೆದಿದ್ದು, ಈ ವರದಿಗಳಿಗೆ ಆಧಾರವಿಲ್ಲ ಎಂದು ತಳ್ಳಿಹಾಕಿದ್ದಾರೆ.

ಈ ಕುರಿತು ಇದೀಗ ನಟಿಯ ತಂಡವೇ ಸ್ಪಷ್ಟನೆ ನೀಡಿದೆ.

ಹೌದು, ನಟಿ ಶ್ರೀಲೀಲಾ ಅವರನ್ನು ಕ್ರಿಕೆಟಿಗ ತಿಲಕ್ ವರ್ಮಾ ಅವರೊಂದಿಗೆ ಜೋಡಿಸಲಾಗಿದೆ ಎಂಬ ವದಂತಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ ಎಂದು ಅವರ ತಂಡ ಅಧಿಕೃತವಾಗಿ ಸ್ಪಷ್ಟಪಡಿಸಿದೆ.

“ತಿಲಕ್ ವರ್ಮಾ ಮತ್ತು ಶ್ರೀಲೀಲಾ ಅವರ ಸುತ್ತಲಿನ ವದಂತಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು. ಇಬ್ಬರೂ ಎಂದಿಗೂ ಸಂವಹನ ನಡೆಸಿಲ್ಲ. ಈ ಊಹಾಪೋಹಗಳಲ್ಲಿ ಯಾವುದೇ ಸತ್ಯವಿಲ್ಲ, ಮತ್ತು ಅಂತಹ ಕಟ್ಟುಕಥೆಗಳನ್ನು

ಯಾವುದೇ ವಾಸ್ತವಿಕ ಆಧಾರವಿಲ್ಲದೆ ಪ್ರಸಾರ ಮಾಡಬಾರದು. ಮಾಧ್ಯಮ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಪರಿಶೀಲಿಸದ ಮಾಹಿತಿಯನ್ನು ಹರಡುವುದನ್ನು ತಡೆಯಬೇಕು ಮತ್ತು ವೈಯಕ್ತಿಕ ವಿಷಯಗಳ ಬಗ್ಗೆ ವರದಿ ಮಾಡುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ತಂಡವು ಒತ್ತಾಯಿಸಿದೆ.

ವದಂತಿ ಹಬ್ಬಿದ್ದೇಗೆ?:

ಈ ಸುದ್ದಿ ವೈರಲ್ ಆಗಲು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾ‌ರ್ ಯಾದವ್ ಅವರ ಒಂದು ವಿಡಿಯೋ ಕ್ಲಿಪ್ ಕಾರಣ.

ರೆಡ್ಡಿಟ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ವೇದಿಕೆಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮಾ ಇಯರ್‌ಫೋನ್ ಧರಿಸಿ ಹೋಟೆಲ್ ಲಾಬಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಅವರನ್ನು ನೋಡಿ ಸೂರ್ಯಕುಮಾರ್ ಯಾದವ್, “ತಿಲಕ್ ಪ್ರೀತಿಯಲ್ಲಿ ಬಿದ್ದಿದ್ದಾನೆ” ಎಂದು ಹಾಸ್ಯ ಚಟಾಕಿ ಹಾರಿಸುತ್ತಾ ಕಾಲೆಳೆದಿರುವುದು ಕೇಳಿಬಂದಿದೆ. ಈ ಒಂದು ಸಣ್ಣ ಮುದ್ದಾದ ಕ್ಷಣವೇ ಈಗ ಇಂಟರ್ನೆಟ್‌ನಲ್ಲಿ ಅಭಿಮಾನಿಗಳ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.

ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್​ ವರ್ಮಾ ಡೇಟಿಂಗ್​ನಲ್ಲಿದ್ದಾರೆ ಎನ್ನುವ ವಿಚಾರವೆಲ್ಲ ಸುಳ್ಳು. ಇದು ಸತ್ಯಕ್ಕೆ ದೂರವಾದ ಮಾತು. ಇಂತಹ ಕಟ್ಟುಕತೆಗಳು ಹೇಗೆ ಹುಟ್ಟುಕೊಳ್ಳುತ್ತವೆ ಎನ್ನುವುದು ನನಗೆ ತಿಳಿದಿಲ್ಲ. ಇವೆಲ್ಲವೂ ಕೇವಲ ಆಧಾರರಹಿತ ವದಂತಿಗಳಾಗಿವೆ. ಇಬ್ಬರಿಗೂ ವೈಯಕ್ತಿಕವಾಗಿ ಪರಿಚಯಾನೇ ಇಲ್ಲ’ ಎಂದು ಮಾಧ್ಯಮವೊಂದರ ಜೊತೆ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.

‘ತಿಲಕ್​ ವರ್ಮಾ ಮತ್ತು ಶ್ರೀ ಲೀಲಾ ಎಂದಿಗೂ ಒಬ್ಬರಿಗೊಬ್ಬರು ಮಾತನಾಡಿಕೊಂಡಿಲ್ಲ. ವೈಯಕ್ತಿಕವಾಗಿ ಪರಿಚಯವೇ ಇಲ್ಲ. ಒಬ್ಬರಿಗೊಬ್ಬರು ಭೇಟಿಯಾಗಿಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಹೀಗಿದ್ದ ಮೇಲೆ ಇಂತಹ ಕತೆ ಹುಟ್ಟಿಕೊಳ್ಳೊದು ಹೇಗೆ. ಇದೆಲ್ಲವು ಕಲ್ಪನೆ ಮಾತ್ರ’ ಎಂದು ಕಿಡಿಕಾರಿದ್ದಾರೆ.
ಒಂದೇ ಸರಿ ಎರಡು ಕುಟುಂಬಸ್ಥರ ಭೇಟಿ
ಡಿಸೆಂಬರ್​ 2025ರಂದು ವೈಕುಂಠ ಏಕಾದಶಿ ಹಬ್ಬದಂದು ಶ್ರೀಲೀಲಾ ತನ್ನ ತಾಯಿಯೊಂದಿಗೆ ವೆಂಕಟೇಶ್ವರ ದಗುಲಕ್ಕೆ ತೆರಳಿದ್ದರು ಇದೇ ವೇಳೆ ತಿಲಕ್​ ಅವರು ತಮ್ಮ ಕುಟುಂಬದೊಂದಿಗೆ ದೇವರ ದರ್ಶನ ಪಡೆದುಕೊಂಡಿದ್ದರು. ಇಷ್ಟೇ ಅಲ್ಲದೇ, ವಾಖೆಂಡೆ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್​ ಪಂದ್ಯ ವೀಕ್ಷಿಸಲು ಶ್ರೀಲೀಲಾ ಭೇಟಿ ಕೊಟ್ಟಿದ್ದರು. ಜೊತೆಗೆ ಜರ್ಸಿ ತೊಟ್ಟಿರುವುದು ಕಂಡು ಬಂದಿತ್ತು. ಈ ಬಗ್ಗೆ ಉಲ್ಲೇಖಿಸಿ ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ, ‘ಇದೆಲ್ಲ ಕಾಕತಾಳೀಯವಷ್ಟೇ, ಬದಲಾಗಿ ಇನ್ನೇನು ಇಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸಂಬಂಧವಿಲ್ಲದ ಘಟನೆಗಳನ್ನು ಒಟ್ಟುಗೂಡಿಸಿ ಕತೆ ಸೃಷ್ಟಿಸಲಾಗುತ್ತಿದೆ. ಇದು ಅನ್ಯಾಯ’ ಎಂದು ಹೇಳಿದ್ದಾರೆ.

ಶ್ರೀ ಲೀಲಾ ಸದ್ಯ ಜೂನ್​ನಲ್ಲಿ ನಿಗದಿಯಾಗಿರುವ ನೀಟ್​ ಪಿಜಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ಆಕೆಯ ಗಮನ ಸದ್ಯ ಓದಿನ ಮೇಲಿದೆ. ಇದಾದ ನಂತರ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅಂತಹ ವೈಯಕ್ತಿಕ ವಿಚಾರಕ್ಕೆ ಆಕೆಗಿನ್ನು ಆರರಿಂದ -ಐದು ವರ್ಷ ಸಮಯವಿದೆ. ಆಕೆ ವೃತ್ತಿ ಮತ್ತು ಶಿಕ್ಷಣ ಜೀವನವನ್ನು ಸರಿದೂಗಿಸಿಕೊಳ್ಳುತ್ತಿದ್ದಾಳೆ. ಪ್ರೀತಿ ಪ್ರೇಮ ವಿಚಾರ ಸದ್ಯ ಆಕೆಯ ತಲೆಯಲ್ಲಿಲ್ಲ’ ಎಂದು ಸ್ಪಷ್ಟನೆ ಕೊಟ್ಟರು.

ಮೌನ ಗುಡ್ಡೆಮನೆ ಬಿಂದಾಸ್ ಅವತಾರಕ್ಕೆ ಪಡ್ಡೆ ಹೈಕ್ಳು ಫಿದಾ; ವೈರಲ್ ವಿಡಿಯೋ ನೋಡಿ

TAGGED:cricketer Tilak Verma put a stop to dating gossipSri Leela
Share This Article
Facebook Twitter Copy Link Print
Previous Article ಮೌನ ಗುಡ್ಡೆಮನೆ ಬಿಂದಾಸ್ ಅವತಾರಕ್ಕೆ ಪಡ್ಡೆ ಹೈಕ್ಳು ಫಿದಾ; ವೈರಲ್ ವಿಡಿಯೋ ನೋಡಿ
Next Article Road accident ಭೀಕರ ರಸ್ತೆ ದುರಂತ: 13 ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?