newsics.com/ನ್ಯೂಸಿಕ್ಸ್
ಕಿರುತೆರೆಯಲ್ಲಿ ಸಾಂಪ್ರದಾಯಿಕ ಪಾತ್ರಗಳ ಮೂಲಕ ಮನೆಮಾತಾಗಿದ್ದ ನಟಿ ಮೌನ ಗುಡ್ಡೆಮನೆ, ಇದೀಗ ತಮ್ಮ ಇಮೇಜ್ ಬದಲಿಸಿದ್ದಾರೆ. ‘ಲವ್ ಪಂಚ್’ ಎಂಬ ಹೊಸ ಮೈಕ್ರೋ ಸರಣಿಯಲ್ಲಿ ಬೋಲ್ಡ್ ಅವತಾರದಲ್ಲಿ ಮೌನ ಕಾಣಿಸಿಕೊಂಡಿದ್ದಾರೆ. ‘ಲವ್ ಪಂಚ್’ ಸರಣಿಯಲ್ಲಿ ಶರತ್ ಪದ್ಮನಾಭ್ ಜೊತೆಗೆ ಮೌನ ನಟಿಸಿದ್ದು, ಇದರ ಟ್ರೇಲರ್ ರಿಲೀಸ್ ಆಗಿ ಟ್ರೆಂಡ್ ಆಗುತ್ತಿದೆ. ಮೌನ ಅವರ ಹೊಸ ಅವತಾರ ಕಂಡ ಅಭಿಮಾನಿಗಳು ಆಚ್ಚರಿಪಟ್ಟಿದ್ದಾರೆ.
‘ರಾಮಾಚಾರಿ’ ಧಾರಾವಾಹಿಯ ‘ಚಾರುಲತಾ’ ಪಾತ್ರದ ಮೂಲಕ ನಾಲ್ಕು ವರ್ಷಗಳ ಕಾಲ ವೀಕ್ಷಕರ ಮನಗೆದ್ದಿದ್ದ ಮೌನ, ಪ್ರಸ್ತುತ ಜೀ ಕನ್ನಡದ ‘ಕೃಷ್ಣ ರುಕ್ಕು’ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಸದಾ ಸೀರೆ ಉಟ್ಟು ಸಾಂಪ್ರದಾಯಿಕ ಫೋಟೋಶೂಟ್‌ಗಳ ಮೂಲಕ ಗಮನ ಸೆಳೆಯುತ್ತಿದ್ದ ಈ ನಟಿ, ದಿಢೀರನೆ ಮೈಕ್ರೋ ಸರಣಿಗಾಗಿ ಗ್ಲಾಮರಸ್ ರೂಪ ತಾಳಿರುವುದು ಫ್ಯಾನ್ಸ್‌ಗೆ ಥ್ರಿಲ್ ಎನಿಸಿದೆ.
ಇದು ದಿಲೀಪ್ ರಾಜ್ ನಿರ್ದೇಶನದ ಸರಣಿ
“ಪ್ರೀತಮ್ ಮತ್ತು ನಂದಿನಿ ಕಾಲೇಜು ಪ್ರತಿಸ್ಪರ್ಧಿಗಳಾಗಿ ಸಂಪೂರ್ಣವಾಗಿ ವಿಭಿನ್ನ ಲೋಕಗಳಿಂದ ಪ್ರಾರಂಭಿಸುತ್ತಾರೆ, ಆದರೆ ಪ್ರೀತಿ ನಿಧಾನವಾಗಿ ತಪ್ಪು ತಿಳುವಳಿಕೆಗಳು, ಕುಟುಂಬದ ಒತ್ತಡ ಮತ್ತು ಹೃದಯದ ಘಾಸಿ ಮೂಲಕ ಅವರನ್ನು ಒಟ್ಟಿಗೆ ತರುತ್ತದೆ. ಲವ್ ಪಂಚ್, ಈಗ ಬುಲೆಟ್ ಮೈಕ್ರೋಡ್ರಾಮಾ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದನ್ನು ನಮ್ಮ ಅದ್ಭುತ ನಿರ್ದೇಶಕ ದಿಲೀಪ್ ರಾಜ್ ಅವರಿಗೆ ಅರ್ಪಿಸುತ್ತಿದ್ದೇವೆ. ನಿಮ್ಮ ದೃಷ್ಟಿಕೋನದಿಂದ ನಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದು ಲವ್ ಪಂಚ್ ತಂಡ ಹೇಳಿಕೊಂಡಿದೆ. ಅಂದಹಾಗೆ, ಇದರ ನಿರ್ದೇಶನವನ್ನು ಈಚೆಗೆ ಹೃದಯಾಘಾತದಿಂದ ನಿಧನರಾದ ನಟ ದಿಲೀಪ್ ರಾಜ್ ಅವರು ಮಾಡಿದ್ದರು.
ಕೊರಿಯನ್ ಮಾದರಿಯ ಒಂದು ನಿಮಿಷದ ಕಿರು ಸಂಚಿಕೆಗಳ ‘ಮೈಕ್ರೋ ವೆಬ್ ಸೀರಿಸ್’ ಟ್ರೆಂಡ್ ಈಗ ಭಾರತದಲ್ಲೂ ಆರಂಭವಾಗಿದ್ದು, ಜೀ-5 ನಲ್ಲಿ ಲಭ್ಯವಿರುವ ‘ಲವ್ ಪಂಚ್’ ಅಂತಹದ್ದೇ ಒಂದು ಬುಲೆಟ್ ಸರಣಿಯಾಗಿದೆ. ಇತ್ತೀಚೆಗೆ ನಿಧನರಾದ ಪ್ರಸಿದ್ಧ ನಿರ್ದೇಶಕ ದಿಲೀಪ್ ರಾಜ್ ಆಕ್ಷನ್ ಕಟ್ ಹೇಳಿರುವ ಈ ಸರಣಿಯಲ್ಲಿ ಮೌನ ಮತ್ತು ಶರತ್, ನಂದಿನಿ ಹಾಗೂ ಪ್ರೀತಮ್ ಎಂಬ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜಂಭದ ಹುಡುಗಿಯನ್ನು ಪಳಗಿಸುವ ಖಡಕ್ ನಾಯಕನ ಕಥಾಹಂದರ ಹೊಂದಿರುವ ಇದರ ಟೀಸರ್‌ನಲ್ಲಿ ಮೌನ ಹಿಂದೆಂದೂ ಕಾಣಿಸಿಕೊಳ್ಳದ ಮಾದಕ ಹಾಗೂ ಬೋಲ್ಡ್ ಅವತಾರದಲ್ಲಿ ದರ್ಶನ ನೀಡಿದ್ದಾರೆ.
https://www.instagram.com/reel/DYZfIqSsu12/?igsh=MWd0OGdkMDZxa3Rxcw==