newsics.com/ನ್ಯೂಸಿಕ್ಸ್
ದೇಶದ ವಿವಿಧ ಭಾಗಗಳಲ್ಲಿ ಈ ಬಾರಿ ಬೇಸಿಗೆಯ ಝಳ ಹೆಚ್ಚಿದೆ. ಬೇಸಿಗೆಯ ತೀವ್ರ ಶಾಖದ ಮಧ್ಯೆ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೂಲ್ ಆಗಿರಲು ಒಂದು ಟಿಪ್ಸ್ ಕೊಟ್ಟಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಗೆ ಮೂರು ದಿನಗಳ ಭೇಟಿ ನೀಡಿದ್ದಾಗ, 51 ಡಿಗ್ರಿ ಸೆಲ್ಸಿಯಸ್ ಬಿಸಿಲಿದ್ದರೂ ನಾನು ಕಾರಿನಲ್ಲಿ ಎಸಿ ಬಳಸುವುದಿಲ್ಲ, ಬದಲಾಗಿ ಜೇಬಿನಲ್ಲಿ ಒಂದು ಈರುಳ್ಳಿ ಇಟ್ಟುಕೊಂಡು ಶಾಖವನ್ನು ತಡೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಚಿವರು ತಮ್ಮ ಜೇಬಿನಿಂದ ಈರುಳ್ಳಿಯನ್ನು ತೆಗೆದು ತೋರಿಸುತ್ತಾ, ನಿಮ್ಮ ಜೇಬಿನಲ್ಲಿ ಒಂದು ಈರುಳ್ಳಿ ಇಟ್ಟುಕೊಳ್ಳಿ, ಹೀಗೆ ಮಾಡುವುದರಿಂದ ಹೀಟ್ಸ್ಟ್ರೋಕ್ನಿಂದ (ಬಿಸಿಲ ಬೇಗೆ) ಸುರಕ್ಷಿತವಾಗಿರಬಹುದು ಎಂದು ಸಲಹೆ ನೀಡಿದ್ದಾರೆ.
ಭಾರತೀಯ ಆಹಾರ ಪದ್ಧತಿಯಲ್ಲಿ ಈರುಳ್ಳಿಗೆ ವಿಶೇಷ ಸ್ಥಾನವಿದೆ. ವಿಶೇಷವಾಗಿ ಪ್ರಸ್ತುತದಲ್ಲಿ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ:
ಹೈಡ್ರೇಶನ್: ಈರುಳ್ಳಿಯಲ್ಲಿ ನೀರಿನಾಂಶ ಹೆಚ್ಚಿದ್ದು, ದೇಹ ನಿರ್ಜಲೀಕರಣಗೊಳ್ಳದಂತೆ ಕಾಪಾಡುತ್ತದೆ.
ಕ್ವೆರ್ಸೆಟಿನ್: ಇದರಲ್ಲಿರುವ ಫ್ಲೇವನಾಯ್ಡ್ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.
ತಂಪು ನೀಡುವ ಗುಣ: ಹಸಿ ಈರುಳ್ಳಿ ದೇಹಕ್ಕೆ ತಂಪಾದ ಅನುಭವ.
ವಿಜ್ಞಾನ ಏನು ಹೇಳುತ್ತದೆ?
ಈರುಳ್ಳಿಯನ್ನು ಸೇವಿಸುವುದು ಒಂದು ವಿಷಯವಾದರೆ, ಅದನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಇನ್ನೊಂದು. ಆದರೆ, ಜೇಬಿನಲ್ಲಿ ಇಟ್ಟುಕೊಂಡರೆ ಬಿಸಿಲ ಬೇಗೆ ತಟ್ಟುವುದಿಲ್ಲ ಎಂಬ ನಂಬಿಕೆಗೆ ಯಾವುದೇ ಆಧಾರಗಳಿಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದಾರೆ.ಈರುಳ್ಳಿಗಳು ಗಾಳಿಯ ಶಾಖವನ್ನು ಅಥವಾ ದೇಹದ ಉಷ್ಣತೆಯನ್ನು ಹೊರತೆಗೆಯುತ್ತವೆ ಸಾಬೀತಾಗಿಲ್ಲ.ದೇಹವು ತನ್ನ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದಿದ್ದಾಗ ಹೀಟ್ಸ್ಟ್ರೋಕ್ ತಡೆಯುತ್ತದೆ. ಇದು ದೇಹದ ಆಂತರಿಕ ಪ್ರಕ್ರಿಯೆ, ಜೇಬಿನಲ್ಲಿ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ.
https://www.newsics.com/2026/04/29/pan-card-is-mandatory-for-these-transactions/