newsics.com
ವಿದ್ಯಾರ್ಥಿಯು ತನ್ನ ಉತ್ತರಗಳನ್ನು ಎಷ್ಟು ಸುಂದರವಾಗಿ ಮತ್ತು ಅಚ್ಚುಕಟ್ಟಾಗಿ ಬರೆದಿದ್ದನೆಂದರೆ, ಶಿಕ್ಷಕರು ಒಂದೇ ಒಂದು ಅಂಕವನ್ನು ಕಡಿತಗೊಳಿಸಲು ಸಾಧ್ಯವಾಗಲಿಲ್ಲ, ಬದಲಾಗಿ ಅವನಿಗೆ ಪೂರ್ಣ ಅಂಕಗಳನ್ನು ನೀಡಿದ್ದಾರೆ. ಶಿಕ್ಷಕರು ಈ ಉತ್ತರ ಪತ್ರಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರೊಂದಿಗೂ ಹಂಚಿಕೊಂಡಿದ್ದಾರೆ.
10 ನೇ ತರಗತಿಯ ವಿದ್ಯಾರ್ಥಿಯ ವಿಜ್ಞಾನ ಉತ್ತರ ಪತ್ರಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಈ ಉತ್ತರ ಪತ್ರಿಕೆಯಲ್ಲಿ, ವಿದ್ಯಾರ್ಥಿಯು ಪ್ರತಿ ಪ್ರಶ್ನೆಯನ್ನು ಶೀರ್ಷಿಕೆ ಮತ್ತು ಉಪಶೀರ್ಷಿಕೆಯೊಂದಿಗೆ ಪ್ರಾರಂಭಿಸಿದ್ದಾನೆ. ಅಲ್ಲದೇ ಪೆನ್ನಿನಿಂದ ಪ್ರಮುಖ ಕೀವರ್ಡ್‌ಗಳನ್ನು ಹೈಲೈಟ್ ಮಾಡುವುದರೊಂದಿಗೆ, ಬುಲೆಟ್ ಪಾಯಿಂಟ್‌ಗಳನ್ನು ಬಳಸಿದ್ದಾರೆ.
ಅಗತ್ಯವಿರುವಲ್ಲಿ ಅಚ್ಚುಕಟ್ಟಾಗಿ ರೇಖಾಚಿತ್ರಗಳನ್ನು ಚಿತ್ರಿಸಿದ್ದಾರೆಪರಿಶೀಲಿಸುವಾಗ, ಅಂತಹ ವ್ಯವಸ್ಥಿತ, ಅಚ್ಚುಕಟ್ಟಾದ ಮತ್ತು ವೃತ್ತಿಪರವಾಗಿ ಬರೆದ ಉತ್ತರವನ್ನು ನೋಡಿದ ನಂತರ ಅಂಕಗಳನ್ನು ಕಡಿತಗೊಳಿಸಲು ತನಗೆ ಸಾಧ್ಯವಾಗಲಿಲ್ಲ ಎಂದು ಶಿಕ್ಷಕರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡಾ ಈ ಉತ್ತರ ಪತ್ರಿಕೆಯಿಂದ ಆಶ್ಚರ್ಯಚಕಿತರಾಗಿದ್ದಾರೆ. ಒಬ್ಬ ಬಳಕೆದಾರರು ಈ ಬಗ್ಗೆ ಬರೆಯುತ್ತಾ, ಇದು ಟಾಪರ್‌ನ ವಿಧಾನ; ಪ್ರತಿಯೊಬ್ಬ ವಿದ್ಯಾರ್ಥಿಯೂ ಹೀಗೆ ಬರೆಯಲು ಕಲಿಯಬೇಕು ಎಂದಿದ್ದಾರೆ.
https://www.instagram.com/reel/DVFLrQOiGPT/?igsh=MW1nZDlrYXdudnU3OA==