Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹಸೀನಾಗೆ ತಾತ್ಕಾಲಿಕ ಆಶ್ರಯ ಅಸಾಧ್ಯ ಎಂದ ಬ್ರಿಟನ್, ಯುರೋಪ್ ದೇಶಗಳಲ್ಲುಳಿಯುವ ಸಾಧ್ಯತೆ, ಮುಂದಿನ ವ್ಯವಸ್ಥೆವರೆಗೆ ಭಾರತದಲ್ಲೇ ವಾಸ್ತವ್ಯ
ದೇಶಪ್ರಮುಖವಿದೇಶ

ಹಸೀನಾಗೆ ತಾತ್ಕಾಲಿಕ ಆಶ್ರಯ ಅಸಾಧ್ಯ ಎಂದ ಬ್ರಿಟನ್, ಯುರೋಪ್ ದೇಶಗಳಲ್ಲುಳಿಯುವ ಸಾಧ್ಯತೆ, ಮುಂದಿನ ವ್ಯವಸ್ಥೆವರೆಗೆ ಭಾರತದಲ್ಲೇ ವಾಸ್ತವ್ಯ

Share
2 Min Read
SHARE

newsics.com

ನವದೆಹಲಿ: ತಾತ್ಕಾಲಿಕ ಆಶ್ರಯ ಬಯಸಿ ಬರುವವರಿಗೆ ಆಸರೆಯಾಗಲು ಸಾಧ್ಯವಿಲ್ಲ ಎಂದು ಬ್ರಿಟನ್‌ನ ಗೃಹ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ.

ಆಶ್ರಯ ಬಯಸಿ ಬರುವವರು ಮೊದಲು ಯಾವ ದೇಶಕ್ಕೆ ಹೋಗುತ್ತಾರೋ ಅಲ್ಲಿಯೇ ಈ ಬೇಡಿಕೆ ಇಡಬೇಕು ಎಂದು ಕೀರ್ ಸ್ಟಾರ್ಮ್ ನೇತೃತ್ವದ ಸರ್ಕಾರ ಹೇಳಿದೆ.

ಬಾಂಗ್ಲಾ ತೊರೆದು ದೆಹಲಿಗೆ ಬಂದಿಳಿದಿರುವ ಹಸೀನಾ ಲಂಡನ್‌ಗೆ ಹಾರಬಹುದು ಎಂದು ಹೇಳಲಾಗುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಅಗತ್ಯವಿರುವವರಿಗೆ ರಕ್ಷಣೆ ಒದಗಿಸಿರುವ ಖ್ಯಾತಿಯನ್ನು ಬ್ರಿಟನ್‌ ಹೊಂದಿದೆ. ಆದರೆ ತಾತ್ಕಾಲಿಕ ಆಶ್ರಯ ನೀಡಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ರಕ್ಷಣೆ ಬಯಸುವವರು ಮೊದಲು ಯಾವ ದೇಶಕ್ಕೆ ಹೋಗುತ್ತಾರೋ ಅಲ್ಲಿಯೇ ಆಶ್ರಯ ಪಡೆಯುವುದು ಸೂಕ್ತ ಹಾಗೂ ಸುರಕ್ಷಿತ ಎಂದು ಬ್ರಿಟನ್‌ ಗೃಹ ಕಚೇರಿಯ ವಕ್ತಾರರು ಹೇಳಿದ್ದಾರೆ.

ಆದರೂ ರಾಜಾಶ್ರಯ ಕೋರಿದ ಹಸೀನಾ ಬೇಡಿಕೆಯನ್ನು ಬ್ರಿಟನ್‌ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಬ್ರಿಟನ್‌ನ ಹೇಳಿಕೆಯಿಂದ ಲಂಡನ್‌ಗೆ ಪ್ರಯಾಣಿಸುವ ಉದ್ದೇಶ ಹೊಂದಿದ್ದ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ವಿಚಲಿತರಾಗಿದ್ದು, ಮುಂದಿನ ಕೆಲ ಕಾಲ ಭಾರತದಲ್ಲಿಯೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.

ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಹೋದರಿ ರೆಹಾನಾರೊಂದಿಗೆ ಭಾರತಕ್ಕೆ ಬಂದಿರುವ ಹಸೀನಾ ಲಂಡನ್‌ ಹೋಗುತ್ತಾರೆಂದು ಹೇಳಲಾಗಿತ್ತಾದರೂ ಆ ಪ್ರಕ್ರಿಯೆಯಲ್ಲಿ ಕೆಲ ಅಡಚಣೆಗಳು ಉಂಟಾಗಿವೆ. ತನ್ನ ದೇಶದಲ್ಲಿ ವಿಪರೀತ ವಿರೋಧ ಎದುರಿಸುತ್ತಿರುವ ಅವರಿಗೆ ತಾತ್ಕಾಲಿಕ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ರೆಹಾನಾರ ಸಹೋದರಿ ಟುಲಿಪ್‌ ಸಿದ್ದಿಕಿ ಬ್ರಿಟಿಷ್ ಸಂಸತ್ತಿನಲ್ಲಿ ಆರ್ಥಿಕ ಕಾರ್ಯದರ್ಶಿಯಾಗಿರುವ ಕಾರಣ ಅಲ್ಲಿಗೇ ಹೋಗಲು ನಿರ್ಧರಿಸಿದ್ದ ಹಸೀನಾ, ಈ ಬಗ್ಗೆ ಭಾರತಕ್ಕೆ ಮೊದಲೇ ತಿಳಿಸಿದ್ದು, ತಮ್ಮ ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಈ ಮಧ್ಯೆ, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಆಶ್ರಯ ಬಯಸಿ ಭಾರತಕ್ಕೆ ಬಂದಿರುವ ಶೇಖ್ ಹಸೀನಾ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಕೆಲ ಪಾಶ್ಚಿಮಾತ್ಯ ದೇಶಗಳು ಹಸೀನಾರನ್ನು ಅಧಿಕಾರದಿಂದ ಕಿತ್ತೆಸೆಯಲು ಬಯಸುತ್ತಿದ್ದ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ. ಹೀಗಾಗಿ ಹಸೀನಾ ಈಗ ಯುರೋಪ್ ದೇಶಗಳಲ್ಲಿ ಆಶ್ರಯಕ್ಕೆ ಪ್ರಯತ್ನಿಸುತ್ತಿದ್ದಾರೆ.

ಬಾಂಗ್ಲಾದ ಹಂಗಾಮಿ ಪ್ರಧಾನಿಯಾಗಿ ಮೊಹಮ್ಮದ್ ಯೂನಸ್ ನೇಮಕ!

ತಣಿಯದ ಉದ್ರಿಕ್ತರ ಸಿಟ್ಟು, ಸ್ಟಾರ್ ಹೋಟೆಲ್‌ಗೆ ಬೆಂಕಿ, 24 ಜನ‌ ಸಾವು, ಬಾಂಗ್ಲಾ ಹಿಂಸಾಚಾರಕ್ಕೆ ಈವರೆಗೆ 440 ಮಂದಿ ಬಲಿ

ಹಸೀನಾ ವೀಸಾ ರದ್ದುಗೊಳಿಸಿದ ಅಮೆರಿಕಾ!

TAGGED:Britain says that temporary asylum is impossible for Hasina. Possibility of entry into European countriesstay in India till further arrangement
Share This Article
Facebook Twitter Copy Link Print
Previous Article ಹೆಚ್ಚು ಬಿಸಿ ನೀರು ಕುಡಿತೀರಾ? ಇದ್ರಿಂದ ಅಪಾಯ ಕಟ್ಟಿಟ್ಟ ಬುತ್ತಿ!
Next Article ಮುಡಾ ಹಗರಣ: ರಾಜ್ಯಪಾಲರ ನೋಟಿಸ್ ಗೆ ಸಿಎಂ ಸಿದ್ದರಾಮಯ್ಯ ಉತ್ತರ

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?