Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಟೆಹ್ರಾನ್: ಇರಾನ್ನ ಆರ್ಥಿಕ ಬಿಕ್ಕಟ್ಟಿನ ವಿರುದ್ಧದ ಪ್ರತಿಭಟನೆಗಳು ದೇಶದಾದ್ಯಂತ ಹಲವಾರು ನಗರಗಳಿಗೆ ಹರಡಿವೆ.ಸರ್ಕಾರಿ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿವೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಖಮೇನಿ ಸರ್ಕಾರ ದೇಶಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದೆ.
ಇರಾನ್ನಲ್ಲಿ ಅಮೆರಿಕಾ, ಇಸ್ರೇಲ್ ಪ್ರಚೋದನೆಯಿಂದ ಆಡಳಿತದ ವಿರುದ್ಧ ಬಹಿರಂಗ ದಂಗೆ ನಡೆಯುತ್ತಿದೆ ಎಂದು ಹೇಳಲಾಗ್ತಿದೆ.
ಸದ್ಯ, ಇರಾನ್ನಲ್ಲಿನ ಪ್ರತಿಭಟನೆಗಳು ಎಲ್ಲಾ 31 ಪ್ರಾಂತ್ಯಗಳಾದ್ಯಂತ 111 ನಗರಗಳು ಮತ್ತು ಪಟ್ಟಣಗಳಿಗೆ ಹರಡಿವೆ. ವರದಿಗಳ ಪ್ರಕಾರ, ಇಲ್ಲಿಯವರೆಗೆ ಕನಿಷ್ಠ 34 ಪ್ರತಿಭಟನಾಕಾರರು ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. 2,200 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ಇಸ್ಲಾಮಿಕ್ ಗಣರಾಜ್ಯದ ಸರ್ಕಾರವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದೆ, ಮತ್ತು ಅವರು ಇರಾನಿಯನ್ನರನ್ನು ಕೊಲ್ಲಲು ಪ್ರಾರಂಭಿಸಿದರೆ, ನಾವು ಅವರ ಮೇಲೆ ಭಾರೀ ಪ್ರಬಲವಾದ ದಾಳಿ ಮಾಡುತ್ತೇವೆ ಎಂದು ನಾನು ಅವರಿಗೆ ಹೇಳಿದ್ದೇನೆ. ಇರಾನ್ 150 ವರ್ಷಗಳ ಹಿಂದಕ್ಕೆ ಹೋಗಿದೆ. ನಿರಾಯುಧ ಜನರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದೆ. ಪ್ರತಿಭಟನಾಕಾರರು ತಮ್ಮ ದೇಶವನ್ನು ಪ್ರೀತಿಸುತ್ತಾರೆ ಮತ್ತು ಅವರು ಬದಲಾವಣೆಯನ್ನು ಬಯಸುತ್ತಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
https://www.newsics.com/2026/01/10/mother-burns-childs-private-parts-for-urinating-in-bed/